ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತನಿಖೆಗೆ ಒತ್ತಾಯಿಸಿದ ಶ್ರೀ ಮಹಾಯೋಗಿ ವೇಮನ ಫೌಂಡೇಶನ್ ಗೋಶಾಲೆ ಮಾಲಿಕ ಶ್ರೀನಿವಾಸರೆಡ್ಡಿ

ಸದರಿ ಗೋಶಾಲೆಗೆ ಜಮೀನನ್ನು ಭೋಗ್ಯಕ್ಕೆ ನೀಡಿದ್ದ  ಜಮೀನಿನ ಮಾಲಿಕರಾದ ಸತೀಶ್, ತ್ಯಾಗರಾಜ್ ನಡುವೆ ಸಂಬಂಧ ಸರಿಯಿರಲಿಲ್ಲ. ಪರಿಣಾಮವಾಗಿ ಗೋಶಾಲೆ ಮುಚ್ಚಿಸಲು ನಾನಾ ರೀತಿಯ ಕಸರತ್ತು ಗಳನ್ನು ಮಾಡಿದ್ದರು. ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುವುದು, ಅಲ್ಲಿನ ಕೆಲಸಗಾರರ ಮೇಲೆ ಹಲ್ಲೆ ನಡೆಸುವುದು,ದನಗಳಿಗೆ ಮೇವು ತರದಂತೆ ವಾಹನ ತಡೆಯುವುದು ನಡೆದಿತ್ತು. ಆಗೆಲ್ಲಾ ಗೋಶಾಲೆ ಮಾಲಿಕರ ಗೈರುಹಾಜರಿಯಲ್ಲಿ ಮೇಲ್ವಿಚಾರಕ ಶ್ರೀಧರ್ ಕುಮಾರ್ ಹತ್ತಾರು ಬಾರಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು.

ಗೋಶಾಲೆಯ ಮೇಲ್ವಿಚಾರಕ ಶ್ರೀಧರ್‌ಕುಮಾರ್‌ನದು ಸಾವಲ್ಲ ಸಂಘಟಿತ ಹತ್ಯೆ !!!

Profile Ashok Nayak Jul 8, 2025 9:50 PM

ಚಿಕ್ಕಬಳ್ಳಾಪುರ : ಶ್ರೀಮಹಾಯೋಗಿ ವೇಮನ ಫೌಂಡೇಶನ್ ಗೋಶಾಲೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ್ ಕುಮಾರ್ ಅವರದ್ದು ಸಹಜ ಸಾವಲ್ಲ,ಇದೊಂದು ವ್ಯವಸ್ಥಿತವಾಗಿ ನಡೆಸಿದ ಸಂಘಟಿತ ಕೊಲೆಯಾಗಿದೆ.ಇದರಲ್ಲಿ ಜಮೀನಿನ ಮಾಲಿಕ ಸತೀಶ್,ತ್ಯಾಗರಾಜ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಕೈವಾಡದವಿದ್ದು ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗೋಶಾಲೆ ಮಾಲಿಕ ಶ್ರೀನಿವಾಸರೆಡ್ಡಿ ಡಿಹೆಚ್‌ಒ,ಎಸ್‌ಪಿಗೆ ದೂರು ನೀಡಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಕೊಲೆಯ ಶಂಕೆ ಯಾಕೆ ??

ಬಾಗೇಪಲ್ಲಿ ತಾಲೂಕು ಪರಗೋಡು ಅಂಚೆ ಸೋಲಮಾಕಲಹಳ್ಳಿ ಗ್ರಾಮದ  ಸರ್ವೇ ನಂಬರ್ ೫೬/೧ರಲ್ಲಿರುವ ಶ್ರೀಮಹಾಯೋಗಿ ವೇಮನ ಫೌಂಡೇಶನ್ ಗೋಶಾಲೆಯಲ್ಲಿ ಶ್ರೀಧರ್ ಕುಮಾರ್ ಎಂಬ ೫೦ ವರ್ಷದ ವ್ಯಕ್ತಿ ನಾಲ್ಕಾರು ವರ್ಷಗಳಿಂದ  ಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸು ತ್ತಿದ್ದರು. ಕಳೆದ ೧೫ ದಿನಗಳ ಹಿಂದೆ ನಮ್ಮ ಮೇಲ್ವಿಚಾರಕರನ್ನು ಅನಾರೋಗ್ಯ ನಿಮಿತ್ತ ಆತನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಆತ ಅಲ್ಲಿ ಮರಣಹೊಂದಿರುವ ಈ ವಿಷಯ ನಮಗೆ ಗೋಶಾಲೆಯ ಇತರೆ ಕಾರ್ಮಿಕರಿಂದ ತಡವಾಗಿ ತಿಳಿದುಬಂದಿರುತ್ತದೆ. ಈತನ ಸಾವು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿರುವುದರಿಂದ ನ್ಯಾಯ ಕೋರಿ ಸಂಬಂಧಪಟ್ಟ ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಶ್ರೀನಿವಾಸ ರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಅನುಮಾನ ಯಾಕೆ?
ಸದರಿ ಗೋಶಾಲೆಗೆ ಜಮೀನನ್ನು ಭೋಗ್ಯಕ್ಕೆ ನೀಡಿದ್ದ  ಜಮೀನಿನ ಮಾಲಿಕರಾದ ಸತೀಶ್, ತ್ಯಾಗರಾಜ್ ನಡುವೆ ಸಂಬಂಧ ಸರಿಯಿರಲಿಲ್ಲ. ಪರಿಣಾಮವಾಗಿ ಗೋಶಾಲೆ ಮುಚ್ಚಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿದ್ದರು. ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುವುದು,ಅಲ್ಲಿನ ಕೆಲಸಗಾರರ ಮೇಲೆ ಹಲ್ಲೆ ನಡೆಸುವುದು,ದನಗಳಿಗೆ ಮೇವು ತರದಂತೆ ವಾಹನ ತಡೆಯುವುದು ನಡೆದಿತ್ತು.ಆಗೆಲ್ಲಾ ಗೋಶಾಲೆ ಮಾಲಿಕರ ಗೈರುಹಾಜರಿಯಲ್ಲಿ ಮೇಲ್ವಿಚಾರಕ ಶ್ರೀಧರ್ ಕುಮಾರ್ ಹತ್ತಾರು ಬಾರಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಅಲ್ಲದೆ ಗೋಶಾಲೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳಿಗೆ ನೇರ ಸಾಕ್ಷಿಯಾಗಿದ್ದರು. ಆದ್ದರಿಂದ ಈತನನ್ನು ಮುಗಿಸಿದರೆ ತಮ್ಮ ಹಾದಿ ಸುಗಮವಾಗಲಿದೆ ಎಂಬ ದುರುದ್ದೇಶದಿಂದ ಶ್ರೀಧರ್‌ ಕುಮಾರನನ್ನು ಜಮೀನಿನ ಮಾಲಿಕ ಸತೀಶ್, ತ್ಯಾಗರಾಜ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಸೇರಿ ಕೊಲೆ ಮಾಡಿರುವ ಅನುಮಾನವಿದೆ ಎಂದು ಗೋಶಾಲೆ ಮಾಲಿಕ ಶ್ರೀನಿವಾಸರೆಡ್ಡಿ ಡಿಹೆಚ್‌ಒ ಮತ್ತು ಎಸ್ಪಿಗೆ ನೀಡಿರುವ ದೂರಿನಲ್ಲಿ ಆರೊಪಿಸಿದ್ದಾರೆ.

ದೂರಿನಲ್ಲಿ ಏನಿದೆ??
ನಾನು ಕಳೆದ ನಾಲ್ಕು ವರ್ಷಗಳಿಂದ ಬಾಗೇಪಲ್ಲಿ ತಾಲೂಕು ಪರಗೋಡು ಅಂಚೆ ಸೋಲಮಾಕಲ ಹಳ್ಳಿ ಗ್ರಾಮದ  ಸರ್ವೇ ನಂಬರ್ ೫೬/೧ರಲ್ಲಿ ಶ್ರೀ ಶ್ರೀ ಶ್ರೀ ಮಹಾಯೋಗಿ ವೇಮನ ಫೌಂಡೇಶನ್ ವತಿಯಿಂದ ವಯಸ್ಸಾದ, ರೋಗಗ್ರಸ್ಥ ಜಾನುವಾರುಗಳನ್ನು ಟೆಂಡರ್ ಮೂಲಕ ಪಡೆದು, ಅವುಗಳನ್ನು ನಮ್ಮ ಗೋಶಾಲೆಯಲ್ಲಿ ಸಾಕುತ್ತಿದ್ದೇವೆ.

ಇದಕ್ಕೆ ಇದಕ್ಕೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಅನುದಾನವನ್ನು ಪಡೆಯುತ್ತಿಲ್ಲ, ನಮ್ಮಲ್ಲಿ ಶ್ರೀಧರ್ ಕುಮಾರ್ ಎನ್ನುವ ಸುಮಾರು ೫೦ ವರ್ಷ ವಯಸ್ಸುಳ್ಳ ವ್ಯಕ್ತಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾಲಿಕನಾದ ನಾನು ಆರೋಗ್ಯ ಸಂಬಂಧಿ ಹಾಗೂ ಅನಿವಾರ್ಯ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನಮ್ಮ ಗೋಶಾಲೆಯ ಕಾರ್ಮಿಕರು ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ಆಸ್ಪತ್ರೆಯಲ್ಲಿ ಆತನ ಶವವನ್ನು ತೋರಿಸಿ ಈ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದ ಮೃತಪಟ್ಟಿದ್ದಾನೆಂದು ತಿಳಿಸಿರುತ್ತಾರೆ.ಹಾಗೆಯೇ ವೈದ್ಯಾಧಿಕಾರಿಗಳು ಮರಣ ದೃಢೀಕರಣ ಪತ್ರವನ್ನು ನೀಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಯಾವುದೇ ವ್ಯಕ್ತಿ ಸರ್ಕಾರಿ ಆಸ್ಪತ್ರೆಯಲ್ಲೇ ಆಗಲಿ, ಖಾಸಗಿ ಆಸ್ಪತ್ರೆಯಲ್ಲಿಯೇ ಆಗಲಿ ಮೃತಪಟ್ಟರ ಅವರನ್ನು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಿ ಶವವನ್ನು ಸಂಬಂಧಪಟ್ಟವರಿಗೆ ನೀಡುತ್ತಾರೆ. ಶ್ರೀಧರ್ ಕುಮಾರ್ ವಿಚಾರದಲ್ಲಿ ಈ ಯಾವ ಮಾನದಂಡಗಳನ್ನು ಅನುಸರಿಸಿಲ್ಲ.

ಮೇಲಾಗಿ ಈತನ ಸಾವಿನ ಬಗ್ಗೆ ಇಬ್ಬರು ವೈದ್ಯಾಧಿಕಾರಿಗಳು ಬೇರೆ ಬೇರೆ ಸಮಯದಲ್ಲಿ ವಿಭಿನ್ನವಾದ  ಕಾರಣಗಳನ್ನು ನೀಡಿ ಮರಣ ಮರಣ ದೃಢೀಕರಣ ಪತ್ರವನ್ನು ನೀಡಿರುತ್ತಾರೆ. ಡಾ.ಸಾಹಿತ್ಯ ಬಿ.ವಿ ಎಂಬ ಆರೋಗ್ಯಾಧಿಕಾರಿಗಳ ಪ್ರಕಾರ ಆಸ್ಪತ್ರೆಗೆ ತರುವಾಗಲೇ ವ್ಯಕ್ತಿ ಸತ್ತಿದ್ದಾರೆ ಎಂದು ಹೇಳಿದ್ದರೆ, ಮತ್ತೊಬ್ಬ ವೈದ್ಯರುಇದು ಅನುಮಾನಾಸ್ಪದವಾಗಿದೆ. ಹಾಗಾಗಿ ಒಬ್ಬನೇ ವ್ಯಕ್ತಿಯ ಸಾವನ್ನು ಬೇರೆ ಬೇರೆ ರೀತಿ ದೃಢೀಕರಿಸಿ ಕರ್ತವ್ಯ ಲೋಭವೆಯಾಗಿರುವ ವೈದ್ಯರನ್ನು ಕೂಡಲೇ ಅಮಾನತ್ತು ಮಾಡಬೇಕು. ಈ ಕುರಿತಾಗಿ ಕೂಲಂಕುಶವಾಗಿ ತನಿಖೆ ನಡೆಸಿ ಆತನ ಸಾವಿಗೆ ಸೂಕ್ತ ಕಾರಣಗಳನ್ನು ತಿಳಿಸಬೇಕಾಗಿ ಎಸ್ಪಿ ಮತ್ತು ಡಿಹೆಚ್‌ಒ ಅವರಿಗೆ ವಿನಂತಿ ಮಾಡಿದ್ದಾರೆ.

ಅನುಮಾನಕ್ಕೆ ಕಾರಣವೇನು ?
ಗೋಶಾಲೆಯಲ್ಲಿ ಉಸ್ತುವಾರಿಯಲ್ಲಿದ್ದ ಈತನಿಗೆ ಏನಾಗಿತ್ತು? ಆತನನ್ನು ಯಾರು ದಾಖಲು ಮಾಡಿದರು.ಯಾವ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬರಲಾಯಿತು ೩. ದಾಖಲು ಮಾಡಿ ಕೊಳ್ಳುವ ಸಂದರ್ಭದಲ್ಲಿ ನಮಗಾಗಲಿ ಕುಟುಂಬಸ್ಕರಿಗಾಗಲಿ ಮಾಹಿತಿಯನ್ನು ಯಾಕೆ ನೀಡಲಿಲ್ಲ.ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬೇರೆ ಬೇರೆ ರೀತಿಯಲ್ಲಿ ಮರಣವನ್ನು ವ್ಯಾಖ್ಯಾನಿಸಿರುವುದು ವಿಪರ್ಯಾಸ ಹಾಗಾಗಿ ಎರಡು ಮರಣ ದೃಢೀಕರಣ ಪತ್ರವನ್ನು ನೀಡಿರುವ ಈ ಇಬ್ಬರು ವೈದ್ಯರ ಈ ನಡೆ ನಿಗೂಢವಾಗಿರುತ್ತದೆ ಯಾವ ಉದ್ದೇಶದಿಂದ ಈ ರೀತಿ ಮಾಡಿರುತ್ತಾರೆ. ದಯಮಾಡಿ ಕಾನೂನು ರೀತಿಯಲ್ಲಿ ತನಿಖೆ ನಡೆಸಿ ನಮಗೆ ನಿಜವಾದ ಸತ್ಯ ಸಂಗತಿಯನ್ನು ತಿಳಿಸಿ ಕೊಡಬೇಕೆಂದು ಕೋರಿದ್ದಾರೆ.

ಪೊಲೀಸ್ ವೈಫಲ್ಯ??
ಗೋಶಾಲೆ ಮಾಲಿಕರು ತಮ್ಮ ನೌಕರನೊಬ್ಬನ ಸಾವಿಗೆ ನ್ಯಾಯಕೋರಿ ಸ್ಥಳೀಯ ಪೊಲೀಸ್ ಠಾಣೆ,ಜಿಲ್ಲಾ ಆರೋಗ್ಯಾಧಿಕಾರಿಗಳು ಕಚೇರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದಾರೆ.ದೂರು ನೀಡು ಹತ್ತಾರು ದಿನಗಳಾದರೂ ತಪ್ಪಿತಸ್ಥರ ಮೇಲೆ ಯವುದೇ ಕ್ರಮವಾಗಿಲ್ಲ.ಕಾನೂನು ರೀತಿಯಲ್ಲಿ ಗೋಶಾಲೆ ನಡೆಸುವುದೇ ಅಪರಾಧ ಎನ್ನುವುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಇದೆ. ಭೂಮಾಲಿಕರ ಪರವಾಗಿ ನಿಂತಿರುವ ಪ್ರಶಾಂತ್ ವರ್ಣಿ ಕುಮ್ಮಕ್ಕಿನಿಮದಲೇ ನಮ್ಮ ನೌಕರನ ಕೊಲೆಯಾಗಿದೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ,ಹೈಕೋರ್ಟ್ ಮೆಟ್ಟಿಲೇರಿದರೂ ಪರವಾಗಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇನೆ.
ಏನೇ ಆಗಲಿ ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತು ಕೊಳ್ಳುವುದು ತರವಲ್ಲ. ಸಂಬಂಧಪಟ್ಟವರಿಗೆ ತಾಕೀತು ಮಾಡಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಕಾನೂನು ಬಾಹಿರ ಚಟವಟಿಕೆಗಳಿಗೆ ಅಂಕುಶ ಹಾಕಲಾಗದೆ ಬಡವರ ಅಸಹಾಯಕರ ಜೀವಕ್ಕೆ ಬೆಲೆಯಿಲ್ಲದಂತಾಗಿ, ಅನವರ ನೋವು ಅರಣ್ಯ ರೋಧನವಾಗಲಿದೆ.