ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist Encounter: ಕಿಶ್ತ್ವಾರ್‌ನಲ್ಲಿ ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಜೈಶ್ ಕಮಾಂಡೋ ಸೇರಿದಂತೆ ಮೂವರ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಶುಕ್ರವಾರ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರ್ ಜಿಲ್ಲೆಯ ಚತ್ರು ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿತು

ಜೈಶ್ ಕಮಾಂಡೋ ಸೇರಿದಂತೆ ಮೂವರ ಎನ್‌ಕೌಂಟರ್‌

Profile Vishakha Bhat Apr 12, 2025 8:52 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಶುಕ್ರವಾರ ಮೂವರು ಭಯೋತ್ಪಾದಕರು (Terrorist Encounter) ಹತರಾಗಿದ್ದಾರೆ. ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರ್ ಜಿಲ್ಲೆಯ ಚತ್ರು ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಯಾವುದೇ ಯೋಧರಿಗೆ ಗಾಯವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಬೇಟೆಯಾಡುವ ಕಾರ್ಯ ನಡೆಯುತ್ತಿದೆ.

ಹತರಾದ ಉಗ್ರರ ಪೈಕಿ ಓರ್ವ ಜೈಶ್-ಎ-ಮೊಹಮ್ಮದ್‌ನ ಕಮಾಂಡರ್‌ ಸೈಫುಲ್ಲಾ ಎಂದು ಗುರುತಿಸಲಾಗಿದೆ, ಈತ ಹಲವಾರು ತಿಂಗಳುಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದನು. ಸೈಫುಲ್ಲಾ ಜೈಶ್-ಎ-ಮೊಹಮ್ಮದ್‌ನ ಕಮಾಂಡರ್ ಆಗಿದ್ದು, ಕಿಶ್ತ್ವಾರ್‌ ಪ್ರದೇಶದಲ್ಲಿ ಈತ ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ, ಈತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ತಿಳಿದು ಕಾರ್ಯಾಚರಣೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಾರ್ಯಾಚರಣೆಯ ಸ್ಥಳದಿಂದ ಶಸ್ತ್ರಾಸ್ತ್ರಗಳು, ಗುಂಡಿನ ಸಾಮಗ್ರಿಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. "ಪ್ರತಿಕೂಲ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ, ನಮ್ಮ ಕೆಚ್ಚೆದೆಯ ಸೈನಿಕರು ನಿರಂತರ ಕಾರ್ಯಾಚರಣೆಗಳನ್ನು ಮುಂದುವರೆಸಿದ್ದಾರೆ" ಎಂದು ಅದು ಹೇಳಿದೆ. ಹೆಚ್ಚಿನ ಹಿಮಪಾತವಿರುವ ಪ್ರದೇಶಗಳಲ್ಲಿ ಮತ್ತು ಕಠಿಣ ಭೂಪ್ರದೇಶದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ವಿಶೇಷ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶಕ್ಕೂ ಶೋಧ ಕಾರ್ಯಾಚರಣೆ ವಿಸ್ತರಿಸಲಾಗಿದೆ. ಜಮ್ಮು ಪ್ರದೇಶದ ವಿವಿಧ ಗುಡ್ಡಗಾಡು ಪ್ರದೇಶಗಳ ನಡುವಿನ ಭಯೋತ್ಪಾದಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Terrorist Killed: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೋಸ್ಟ್‌ ವಾಂಟೆಡ್‌ ಉಗ್ರ ಫಿನೀಶ್‌!

ಬೇಸಿಗೆಯಲ್ಲಿ ಗಡಿಯಾಚೆಗಿನ ಸಂಚಾರಕ್ಕೆ ಅನುವು ಮಾಡಿಕೊಡುವ ಹಿಮ ಕರಗುವಿಕೆಯಿಂದಾಗಿ ಭದೇರ್ವಾದ ಎತ್ತರದ ವಲಯಗಳಲ್ಲಿ ಭದ್ರತಾ ಪಡೆಗಳು ಕಣ್ಗಾವಲು ಹೆಚ್ಚಿಸಿವೆ. ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳ ಬೆಂಬಲದೊಂದಿಗೆ, ಪಡೆಗಳು ಕಿಶ್ತ್ವಾರ್, ಉಧಮ್‌ಪುರ ಮತ್ತು ಕಥುವಾವನ್ನು ಸಂಪರ್ಕಿಸುವ ಪ್ರದೇಶಗಳ ಮೇಲೆ ನಿಗಾ ಇಡುತ್ತಿವೆ.ಕಥುವಾ, ಉಧಂಪುರ ಮತ್ತು ಕಿಶ್ತ್ವಾರ್ ಪರ್ವತ ಪ್ರದೇಶಗಳಲ್ಲಿ ಕಳೆದ 19 ದಿನಗಳಲ್ಲಿ ಐದು ಎನ್‌ಕೌಂಟರ್‌ಗಳು ನಡೆದಿವೆ.