Accor & InterGlobe: ಹಾಸ್ಪಿಟಾಲಿಟಿ ಅಭಿವೃದ್ಧಿಗೆ ಜೊತೆಗೂಡಿದ ಅಕ್ಕೋರ್ ಮತ್ತು ಇಂಟರ್‌ಗ್ಲೋಬ್ ಸಂಸ್ಥೆಗಳು
ಭಾರತದ ಹಾಸ್ಪಿಟಾಲಿಟಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಿವರ್ತಿಸಲು ಪಣತೊಟ್ಟು ಗ್ಲೋಬಲ್ ಹಾಸ್ಪಿಟಾಲಿಟಿ ಕ್ಷೇತ್ರದಲೀಡರ್ ಆಗಿರುವ ಅಕ್ಕೋರ್ ಮತ್ತು ಭಾರತದ ಪ್ರಮುಖ ಟ್ರಾವೆಲ್ ಕಾನ್‌ಗೊಮರೇಟ್ ಆಗಿರುವ ಇಂಟರ್ಗ್ಲೋಬ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.ಈ ಹೊಸ ಪ್ಲಾಟ್‌ಫಾರ್ಮ್ 2030ರೊಳಗೆ ಅಕ್ಕೋರ್ ಬ್ರ್ಯಾಂಡ್‌ಗಳಡಿ 300 ಹೋಟೆಲ್‌ಗಳನ್ನೂ ನಿರ್ಮಿಸುವ ಗುರಿಯನ್ನು ಹೊಂದಿದೆ.


ಬೆಂಗಳೂರು: ಭಾರತದ ಹಾಸ್ಪಿಟಾಲಿಟಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಿವರ್ತಿಸಲು ಪಣತೊಟ್ಟು ಗ್ಲೋಬಲ್ ಹಾಸ್ಪಿಟಾಲಿಟಿ ಕ್ಷೇತ್ರದಲೀಡರ್ ಆಗಿರುವ ಅಕ್ಕೋರ್ ಮತ್ತು ಭಾರತದ ಪ್ರಮುಖ ಟ್ರಾವೆಲ್ (Accor & InterGlobe) ಕಾನ್‌ಗೊಮರೇಟ್ ಆಗಿರುವ ಇಂಟರ್ಗ್ಲೋಬ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ವೇಗವಾಗಿ ಬೆಳೆಯುತ್ತಿರುವ ಹಾಸ್ಪಿಟಾಲಿಟಿ ಸಂಸ್ಥೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. . ಹಾಸ್ಪಿಟಾಲಿಟಿ ಮಾರುಕಟ್ಟೆಯನ್ನು ಗೆಲ್ಲುವ ಮಹತ್ವಾಕಾಂಕ್ಷೆಯೊಂದಿಗೆ ಈ ಹೊಸ ಪ್ಲಾಟ್‌ಫಾರ್ಮ್ 2030ರೊಳಗೆ ಅಕ್ಕೋರ್ ಬ್ರ್ಯಾಂಡ್‌ಗಳಡಿ 300 ಹೋಟೆಲ್‌ಗಳನ್ನೂ ನಿರ್ಮಿಸುವ ಗುರಿಯನ್ನು ಹೊಂದಿದೆ.
ಟ್ರೀಬೋ ಜೊತೆ ಎಕ್ಸ್‌ಕ್ಲೂಸಿವ್ ಪಾಲುದಾರಿ
ಟೀಬೋ - ಭಾರತದ ಪ್ರಮುಖ ಬಜೆಟ್ ಬ್ಯಾಂಡಡ್ ಹೋಟೆಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದು. ಇದು ತನ್ನ ಟೆಕ್ ಆಧಾರಿತ ಕಾರ್ಯಪದ್ಧತಿಗಳ ಮೂಲಕ 120 ನಗರಗಳಲ್ಲಿ 800ಕ್ಕೂ ಹೆಚ್ಚು ಹೋಟೆಲ್ಸ್‌ನ್ನು ನಿರ್ವಹಿಸುತ್ತಿದೆ. ಈಗ ಅಕ್ಕೋರ್ ಮತ್ತು ಇಂಟರ್ಗ್ಲೋಬ್ ಸೇರಿ ಟೀಬೋದಲ್ಲಿ ಬೃಹತ್ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಇದರ ಪ್ರಮುಖ ಷೇರುದಾರರಾಗುತ್ತಿದ್ದಾರೆ.
ಈ ಹೊಸ ಒಪ್ಪಂದದ ಮೂಲಕ, ಟೀಬೋ ಈಗ ಐಬಿಸ್ ಮತ್ತು ಮರ್ಕ್ಯೂರ್ ಬ್ಯಾಂಡ್‌ಗಳನ್ನು ಭಾರತದಲ್ಲಿ ಬೆಳೆಸಲು ಪ್ರಮುಖ ಜವಾಬ್ದಾರಿ ತೆಗೆದುಕೊಳ್ಳುತ್ತಿದೆ.
ಈಗಾಗಲೇ ಟೀಬೋ ಹತ್ತು ಹೊಸ ಮರ್ಕ್ಯೂರ್ ಹೋಟೆಲ್ಸ್ಗಾಗಿ ವಿವಿಧ ಪ್ರಾಪರ್ಟಿ ಮಾಲೀಕರೊಂದಿಗೆ ಒಪ್ಪಂದ ಮಾಡಿದ್ದು, ಇದು ಭಾರತದಲ್ಲಿನ ಬ್ಯಾಂಡ್ ವಿಸ್ತರಣೆಗೆ ದೊಡ್ಡ ಹೆಜ್ಜೆಯಾಗಿದೆ. ಅಕ್ಕೋರ್‌ನ ಎಲ್ಲಾ ಬ್ರಾಂಡ್ ಗಳೂ ಟೀಬೋನ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ಇರುವ ಅನೌಪಚಾರಿಕ (ಅನ್‌ಬ್ಯಾಂಡ್ಸ್) ಹೋಟೆಲ್ ಮಾರುಕಟ್ಟೆ ಮೇಲೆ ಹೊಡೆತ ನೀಡುತ್ತವೆ ಮತ್ತು ವೇಗವಾಗಿ ಬೆಳೆಯುವ ಲಕ್ಷ್ಯ ಇಡುತ್ತವೆ. ಟೀಬೋ ಮತ್ತು ಅಕ್ಕೋರ್ ಒಟ್ಟಿಗೆ ಈಗ ಭಾರತದಲ್ಲಿ ಮೂರನೇ ಅತಿದೊಡ್ಡ ಹೋಟೆಲ್ ನೆಟ್ವರ್ಕ್ ಆಗಲಿದೆ. 30,000ಕ್ಕೂ ಹೆಚ್ಚು ರೂಮ್ ಗಳೊಂದಿಗೆ. ಅಕ್ಕೊರ್ ಅಧ್ಯಕ್ಷ ಮತ್ತು ಸಿಇಒ ಸೆಬಾಸ್ಟಿಯನ್ ಬಝಿನ್, "ಈ ಪಾರ್ಟ್ಟಶಿ್ರಪ್ ಭಾರತದ ನಮ್ಮ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಇಂಟರ್ ಗ್ಲೋಬ್ ಮತ್ತು ಅಕ್ಕೋರ್ ಜೊತೆಗೂಡಿ ಹಾಸ್ಪಿಟಾಲಿಟಿ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಒಟ್ಟಿಗೆ ತರುವ ಮೂಲಕ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಸಂಚಲನ ಮೂಡುವುದಂತೂ ಗ್ಯಾರಂಟಿ" ಎಂದರು.
ಈ ಸುದ್ದಿಯನ್ನೂ ಓದಿ: Manipal Hospitals: ಮಣಿಪಾಲ್ ಹಾಸ್ಪಿಟಲ್ಸ್‌ನಲ್ಲಿ AI ಚಾಲಿತ ಡಿಜಿಟಲ್ ಆರೋಗ್ಯ ಸೇವೆ
ಇಂಟರ್ ಗ್ಲೋಬ್ ಎಂಟರ್ಪ್ರೈಸಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಮಾತನಾಡಿ, "ಇಂದು ನಾವು ಅಕ್ಕೊರ್ ನೊಂದಿಗೆ ಪಾರ್ಟ್ನಶಿ್ರಪ್ ಗೆ ಸಹಿ ಹಾಕಿ ಜೊತೆಗೂಡಿರುವುದರಿಂದ ನಮ್ಮ ಎರಡು ದಶಕಗಳ ಸುದೀರ್ಘ ಬಾಂಧವ್ಯ ಇನ್ನಷ್ಟು ಬಲಗೊಂಡಿದೆ. ಒಟ್ಟಿಗೆ ಇಂಟರ್ ಗ್ಲೋಬ್ ನ ಡೀಪ್ ಮಾರ್ಕೆಟ್ ಇನ್ಸೆಟ್, ಅಕ್ಟೋರ್ ನ ವರ್ಲ್ಡ್ ಕ್ಲಾಸ್ ಸರ್ವಿಸ್, ಭಾರತದ ಡೈನಾಮಿಕ್ ಬೆಳವಣಿಗೆ ಮತ್ತು ಸದಾ ಬದಲಾಗುತ್ತಿರುವ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು, ನಾವು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ. ನಮ್ಮ ಅತಿಥಿಗಳಿಗೆ ಅಮೋಘವಾದ ಅನುಭವ ನೀಡುವುದು ನಮ್ಮ ಮುಖ್ಯ ಉದ್ದೇಶ" ಎಂದು ಹೇಳಿದ್ದಾರೆ.