ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fighter Jet Crashes: ಗುಜರಾತ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ; ಓರ್ವ ಪೈಲಟ್‌ ಪಾರು: ಮತ್ತೋರ್ವ ಪೈಲಟ್‌ಗಾಗಿ ಹುಡುಕಾಟ

Indian Air Force: ಗುಜರಾತ್‌ನ ಜಾಮ್‌ನಗರದಲ್ಲಿ ಬುಧವಾರ ರಾತ್ರಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಅಪಘಾತದ ವೇಳೆ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇದ್ದರು. ಈ ಪೈಕಿ ಓರ್ವ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಜಿಗಿದಿದ್ದು, ನಾಪತ್ತೆಯಾದ ಇನ್ನೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಗುಜರಾತ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ

Profile Ramesh B Apr 2, 2025 11:27 PM

ಗಾಂಧಿನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಬುಧವಾರ (ಏ. 2) ರಾತ್ರಿ ಭಾರತೀಯ ವಾಯುಪಡೆಯ (Indian Air Force-IAF) ಜಾಗ್ವಾರ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಅಪಘಾತದ ವೇಳೆ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇದ್ದರು. ಈ ಪೈಕಿ ಓರ್ವ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಜಿಗಿದಿದ್ದು, ನಾಪತ್ತೆಯಾದ ಇನ್ನೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ (Fighter Jet Crashes). ʼʼಗುಜರಾತ್‌ನ ಜಾಮ್‌ನಗರದಲ್ಲಿ ಬುಧವಾರ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ. ಒಬ್ಬ ಪೈಲಟ್ ಸುರಕ್ಷಿತವಾಗಿ ಹೊರಕ್ಕೆ ಹಾರಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಪೈಲಟ್‌ಗಾಗಿ ಹುಡುಕಾಟ ನಡೆಯುತ್ತಿದೆʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರೇಮ್‌ಸುಖ್ ದೇಲು ತಿಳಿಸಿದ್ದಾರೆ.

ʼʼಜಾಮ್‌ನಗರ ನಗರದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಸುವರ್ದಾ ಗ್ರಾಮದ ತೆರೆದ ಮೈದಾನದಲ್ಲಿ ಫೈಟರ್ ಜೆಟ್ ಪತನಗೊಂಡು ಬೆಂಕಿ ಹೊತ್ತಿಕೊಂಡಿತುʼʼ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.

ವಿಮಾನ ಪತನದ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Plane Crash: ಅಮೆರಿಕದಲ್ಲಿ ಮತ್ತೊಂದು ದುರಂತ; ಚಿಕಿತ್ಸೆಗೆ ತೆರಳುತ್ತಿದ್ದ ಮಗು ಇದ್ದ ವಿಮಾನ ಪತನ

"ಅಪಘಾತಕ್ಕೆ ಮುನ್ನ ಓರ್ವ ಪೈಲಟ್ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ. ಮತ್ತೊಬ್ಬರು ಇನ್ನೂ ಪತ್ತೆಯಾಗಿಲ್ಲ. ಅಪಘಾತದ ನಂತರ ವಿಮಾನ ಬೆಂಕಿಗೆ ಆಹುತಿಯಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ನಾಪತ್ತೆಯಾದ ಪೈಲಟ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೀಡಾದ ವಿಮಾನ ಹೊಲಕ್ಕೆ ಅಪ್ಪಳಿಸಿದ್ದು, ಸ್ಥಳದಲ್ಲಿ ದಟ್ಟ ವ್ಯಾಪಿಸಿತ್ತು. ವಿಮಾನದ ಹಲವು ತುಣಕುಗಳಿಗೆ ಬೆಂಕಿ ಹತ್ತಿಕೊಳ್ಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ಕಳೆದ ತಿಂಗಳು ಹರಿಯಾಣದ ಪಂಚಕುಲ ಬಳಿ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು. ಈ ವೇಳೆ ಪೈಲಟ್ ವಿಮಾನವನ್ನು ಜನನಿಬಿಡ ಪ್ರದೇಶಗಳಿಂದ ಬೇರೆಡೆ ಕೊಂಡೊಯ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದರು.

ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ (Indian Air Force) ಮಿರಾಜ್ 2000 ಯುದ್ಧ ವಿಮಾನವು ಮಧ್ಯಪ್ರದೇಶದ ಶಿವಪುರಿಯ ಕರೈರಾ ಪ್ರದೇಶದಲ್ಲಿ ಪತನಗೊಂಡಿತ್ತು. ವಿಮಾನವು ನಿಯಮಿತ ತರಬೇತಿ ಹಾರಾಟದಲ್ಲಿದ್ದಾಗ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.

ಇಬ್ಬರೂ ಪೈಲಟ್‌ಗಳು ತಮ್ಮ ಪ್ಯಾರಾಚೂಟ್‌ಗಳನ್ನು ತೆರೆದು ಸಕಾಲದಲ್ಲಿ ಹೊರಗೆ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಆದರೂ ಕೂಡ ಒಬ್ಬ ಪೈಲೆಟ್‌ಗೆ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಲಾಗಿತ್ತು.