ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಅತ್ಯಾಚಾರ, ಗುಂಡಿನ ದಾಳಿ ಆರೋಪ- ತನಿಖೆಯಲ್ಲಿ ಬಯಲಾಯಿತು ಕಿʻಲೇಡಿʼಯ ಖತರ್ನಾಕ್‌ ಪ್ಲಾನ್‌

Crime News: ಹಣದಾಸೆಗಾಗಿ ರಾಜಕಾರಣಿಯ ಮಗ ತನ್ನನ್ನು ಅತ್ಯಾಚಾರದ ಮಾಡಿ ಗುಂಡು ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದ್ರೆ ತನಿಖೆ ವೇಳೆ ನಿಜಾಂಶ ಬಯಲಾಗಿದ್ದು, ಇದು ಮಹಿಳೆ ಕಟ್ಟಿದ್ದ ಕಟ್ಟು ಕಥೆ ಎಂದು ತಿಳಿದು ಬಂದಿದೆ. ಪೊಲೀಸರನ್ನು ನಂಬಿಸಲು ತನ್ನ ದೇಹದೊಳಗೆ ಶಸ್ತ್ರ ಚಿಕೆತ್ಸೆ ಮೂಲಕ ಆ ಮಹಿಳೆ ಗುಂಡು ಸೇರಿಸಿಕೊಂಡಿದ್ದು, ಈ ಘಟನೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಹನಿಟ್ರ್ಯಾಪ್‌ಗೆ ಈಕೆ ಮಾಡಿದ ಖತರ್ನಾಕ್‌ ಪ್ಲ್ಯಾನ್‌ ಏನ್‌ ಗೊತ್ತಾ?

Profile Sushmitha Jain Apr 11, 2025 1:04 PM

ರಾಯ್‌ಬರೇಲಿ: ಎಲ್ಲಾ ಪತ್ತೆದಾರಿ ಕತೆಗಳನ್ನು ಮೀರಿಸುವಂತಹ ಒಂದು ಘಟನೆ ಉತ್ತರ ಪ್ರದೇಶ(Uttara Pradesh)ದ ಬರೇಲಿ(Bareilly) ಪೊಲೀಸ್‌ ಠಾಣಾ(Police staion) ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಕಲ್ಪನೆಗೂ ಮೀರಿದ ಹಾಗೆ ಅಪರಾಧ ಎಸಗಿ ಇಡೀ ಘಟನೆಯ ಚಿತ್ರಣವನ್ನೇ ಬದಲಾಯಿಸಲಾಗಿದ್ದು, ಸಿನಿಮೀಯಾ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಿದ್ದಾರೆ. ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರ ಎಸಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ತನಿಖೆ ನಡೆಸಿದ ಪೊಲೀಸರಿಗೆ, ಈ ಪ್ರಕರಣ ಇನ್ನಿಲ್ಲದಂತಹ ತಿರುವು ಪಡೆಯುವ ಎಂಬ ಊಹೆಯೂ ಇರಲಿಲ್ಲ.

ಅಷ್ಟಕ್ಕೂ ಆಗಿದ್ದೇನೆಂದರೆ, ಮಾರ್ಚ್ 29 ರ ರಾತ್ರಿ, ಗಾಂಧಿ ಉದ್ಯಾನದ ಬಳಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಲಾಗುತ್ತಿದೆ ಎಂಬ ಮಾಹಿತಿ ಬರೇಲಿ ಪೊಲೀಸರಿಗೆ ಸಿಕ್ಕಿತ್ತು. ಮರುದಿನ ಸಂತ್ರಸ್ತೆಯ ಸೊಸೆ ಬಂದು ದೂರು ದಾಖಲಿಸಿದ್ದು, ಸಂತ್ರಸ್ತೆ ಮೆಡಿಕಲ್‌ನಿಂದ ಔಷಧಿ ಖರೀದಿಸಿ ಬರುತ್ತಿದ್ದಾಗ ಐವರು ಸೇರಿ ಅಪಹರಿಸಿದ್ದಾರೆ ಎಂದು ಹೇಳಿದ್ದರು. ಅಪಹರಣ ಮಾಡಿದ ಬಳಿಕ, ಅವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಬಳಿಕ ಗಾಂಧಿ ಉದ್ಯಾನದಲ್ಲಿ ಗುಂಡು ಹಾರಿಸಿ ಎಸೆದು ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಸಂತ್ರಸ್ತೆಯನ್ನು ವೈದ್ಯಕೀಯ ಪರಿಕ್ಷೆಗೆ ಒಳಪಡಿಸಿದ ಪೊಲೀಸರ ತಂಡ ವರದಿ ಬರುವವರೆಗೂ ಕಾಯದೆ ಅನುಮಾನಸ್ಪದ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸಿತು. ಆದರೆ, ವೈದ್ಯಕೀಯ ಪರೀಕ್ಷೆಯ ವರದಿ ಕೈಸೇರುತ್ತಿದ್ದಂತೆಯೇ ಎಲ್ಲಾ ಪೊಲೀಸರಿಗೂ ದೊಡ್ಡ ಆಘಾತ ಉಂಟಾಗಿತ್ತು. ವೈದ್ಯಕೀಯ ಪರೀಕ್ಷೆಯ ವರದಿ ಪ್ರಕಾರ, ದೇಹದಲ್ಲಿ ಗುಂಡು ಸೇರಿದ್ದು, ಬಂದೂಕಿನಿಂದ ಸಿಡಿದ ಗುಂಡಲ್ಲ. ಬದಲಾಗಿ, ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಗುಂಡನ್ನು ದೇಹದೊಳಗೆ ಸೇರಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಗಾಯಗಳು ಇನ್ನೂ ಹಸಿಯಾಗಿಯೇ ಇವೆ ಎಂದು ವರದಿ ಹೇಳಿತ್ತು.

ಈಗ ಪೊಲೀಸರ ಅನುಮಾನ ಮಹಿಳೆಯ ಕಡೆಗೇ ತಿರುಗಿದ್ದು, ಅವರು ಸಿಸಿಟಿವಿ ಕ್ಯಾಮರಾಗಳ ಕೂಲಂಕಷ ತನಿಖೆ ಆರಂಭಿಸಿದರು. ಸಂತ್ರಸ್ತೆ ಅಪಹರಣವಾಗಿತ್ತು ಎಂದು ಹೇಳಿದ ಸಮಯದಲ್ಲಿ ಆಕೆ ಆಟೊರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಆಕೆಯ ಅಪಹರಣವೇ ಆಗಿಲ್ಲ ಎಂಬುದು ಪೊಲೀಸರಿಗೆ ತಿಳಿದು ಬಂತು.

ಆಕೆಯ ವಿಚಾರಣೆ ನಡೆಸುವಾಗ, ತಾನು ಹಿಂದೆ ಒಬ್ಬ ರಾಜಕಾರಣಿ ಮತ್ತು ಅವನ ಮಗನನ್ನು ಬ್ಲಾಕ್‌ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಲ್ಯಾಕ್‌ಮೇಲ್‌ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಶೀಘ್ರವೇ ಅದರ ತೀರ್ಪು ಬರುವುದರಲ್ಲಿತ್ತು. ಆ ತೀರ್ಪು ಬರುವ ಮುನ್ನವೇ ಮತ್ತೊಂದು ಪ್ರಕರಣದಲ್ಲಿ ಆ ರಾಜಕಾರಣಿ ಮತ್ತು ಅವನ ಮಗನನ್ನು ಸಿಲುಕಿಸಲು ಸಂತ್ರಸ್ತೆ ಈ ಖತರ್ನಾಕ್‌ ಯೋಜನೆ ಹಾಕಿಕೊಂಡಿದ್ದಳು.

ಈ ಸುದ್ದಿಯನ್ನು ಓದಿ:Viral Video: ನಡು ರಸ್ತೆಯಲ್ಲಿ ಕಾರು ಚಾಲಕ ಹಾಗೂ ತರಕಾರಿ ಮಾರಾಟಗಾರನ ನಡುವೆ ಮಾರಾಮಾರಿ; ವಿಡಿಯೊ ನೋಡಿ!

ಮಹಿಳೆ ಗುಂಡಿನ ಗಾಯ ಸೃಷ್ಟಿಸಿದ್ದು ಹೇಗೆ?

ತನ್ನ ದೂರಿನಲ್ಲಿ ಮಾಡಿರುವ ಅರೋಪಗಳು ನಿಜ ಎಂಬಂತೆ ಕಾಣಲು, ಮಹಿಳೆ ಜಿಲ್ಲಾ ಆಸ್ಪತ್ರೆಯ ಉದ್ಯೋಗಿ ಮತ್ತು ಸಂಜಯನಗರದ ಒಬ್ಬ ವ್ಯಕ್ತಿಯ ಮೂಲಕ ಗುಂಡನ್ನು ದೇಹದೊಳಗೆ ಸೇರಿಸಿಕೊಂಡಿದ್ದಳು. ನಂತರ ಗುಂಡಿನ ಸುಟ್ಟ ಗಾಯ ಕಾಣಿಸುವಂತೆ ಮಾಡಲು ಒಂದು ಬಿಸಿ ನಾಣ್ಯವನ್ನು ಗುಂಡು ಸೇರಿಸಿಕೊಂಡ ಸ್ಥಳದ ಸುತ್ತ ಇಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕನಿಷ್ಠ ಮೂರು ಜನರು ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬೇರೆ ಯಾರಾದರೂ ಇದರಲ್ಲಿ ಭಾಗಿಯಾದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.