ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್
ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್
Vishwavani News
Dec 16, 2022 2:38 PM
ನವದೆಹಲಿ : ಝಿಕಾ ವೈರಸ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸಂಚಲನ ಮೂಡಿಸು ತ್ತಿದೆ. ಕಳೆದೆರಡು ದಿನಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಸೋಂಕು ದೃಢಪಟ್ಟಿತ್ತು.
ರಾಜ್ಯದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ವರದಿಯಾಗಿದೆ. ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಲಕ್ಷಣಗಳಿಂದ ಬಳಲುತ್ತಿದ್ದ ಮಗುವಿಗೆ ಝಿಕಾ ವೈರಸ್ ಪಾಸಿ ಟಿವ್ ಬಂದಿದೆ.
ಜಿಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಎಂಬ ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ. ಈ ಸೊಳ್ಳೆಯು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾಕ್ಕೂ ಕಾರಣ ವಾಗುತ್ತದೆ. ಈಡಿಸ್ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಮನುಷ್ಯ ರನ್ನು ಕಚ್ಚುತ್ತವೆ. ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು.
ಝಿಕಾ ವೈರಸ್ ವಿರುದ್ಧ ಲಸಿಕೆ ರಚಿಸಲು ಸಂಶೋಧನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ, ಝಿಕಾ ವೈರಸ್ ವಿರುದ್ಧ ಶೀಘ್ರದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ಪ್ರತಿರಕ್ಷಣಾ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಮುಖ್ಯಸ್ಥ ಡಾ ಎನ್‌ಕೆ ಅರೋರಾ ಹೇಳುತ್ತಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಭಾಗವಾಗಿ ಭಾರತದಲ್ಲಿ 9-14 ವರ್ಷ ವಯಸ್ಸಿನ ಹುಡುಗಿಯರಿಗೆ HPV ಲಸಿಕೆ ನೀಡಲು ಶೀಘ್ರದಲ್ಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ ಎನ್ ಕೆ ಅರೋರಾ ಬಹಿರಂಗಪಡಿಸಿದ್ದಾರೆ.
Read E-Paper click here