Self Harming: ರಿಷಬ್ ಪಂತ್ ಜೀವ ಉಳಿಸಿದಾತ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ!
ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್‌ಗೆ ಅಪಘಾತ ಸಂಭವಿಸಿದಾಗ ಅವರನ್ನು ಆಪದ್ಬಾಂಧವನಂತೆ ಕಾಪಾಡಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದ ರಜತ್ ಕುಮಾರ್ ಇದೀಗ ಸಾವಿನ ದವಡೆಗೆ ಸಿಲುಕಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ರಜತ್ ಮತ್ತು ಅವರ ಪ್ರೇಯಸಿ ಮನು ಕಶ್ಯಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಮನು ಮೃತಪಟ್ಟರೆ, ರಜತ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
![ರಿಷಬ್ ಪಂತ್ ಆಪದ್ಬಾಂಧವ ಸಾವಿನ ದವಡೆಯಲ್ಲಿ!](https://cdn-vishwavani-prod.hindverse.com/media/original_images/Self_Harming_1.jpg)
ರಜತ್ ಮತ್ತು ಮನು ಕಶ್ಯಪ್
![Profile](https://vishwavani.news/static/img/user.png)
ಲಖನೌ: ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್(Rishab Pant) 2022 ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ(Road Accident) ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಆಗ ಅವರನ್ನು ಆಪದ್ಬಾಂಧವನಂತೆ ಕಾಪಾಡಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದ ರಜತ್ ಕುಮಾರ್ (Rajat Kumar) ಇದೀಗ ಸಾವಿನ ದವಡೆಗೆ ಸಿಲುಕಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ರಜತ್ ಮತ್ತು ಅವರ ಪ್ರೇಯಸಿ ಮನು ಕಶ್ಯಪ್(Manu Kashyap) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಮನು ಮೃತಪಟ್ಟರೆ, ರಜತ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನು ಕುಟುಂಬ ರಜತ್ ವಿರುದ್ಧ ಕೊಲೆ ಆರೋಪ ಹೊರಿಸಿದೆ.
ಅಪಘಾತದ ಸಂದರ್ಭದಲ್ಲಿ ತಮ್ಮ ಪ್ರಾಣ ಉಳಿಸಿದ್ದಕ್ಕಾಗಿ ರಿಷಭ್ ಪಂತ್, ಇತ್ತೀಚೆಗೆ ರಜತ್‌ಗೆ ಸ್ಕೂಟರ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ರಜತ್ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ರಜತ್ ಮತ್ತು ಅವರ ಪ್ರೇಯಸಿ ಮನು ಕಶ್ಯಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಮನು ಮೃತಪಟ್ಟರೆ, ರಜತ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನು ಕುಟುಂಬ ರಜತ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
मशहूर क्रिकेटर ऋषभ पंत को सडक हादसे के बाद बचाने वाले युवक मुज़फ्फरनगर के पुरकाजी निवासी रजत व गांव की ही मनु कश्यप ने जहर खा लिया। लड़की के परिवार ने युवक पर जबरन जहर खिलाने का आरोप लगाया हैं। चर्चा हैं की 5 साल से दोनों का अफेयर चल रहा था। दोनों का परिवार शादी को तैयार नहीं था।… pic.twitter.com/GeitDhXhHY
— Er N B jay prakash (बड़े भैया) (@Nirajbabu121) February 12, 2025
ಅಂತರ್ ಜಾತಿ ಕಾರಣಕ್ಕೆ ರಜತ್ ಮತ್ತು ಮನು ಕಶ್ಯಪ್ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇಬ್ಬರಿಗೂ ಬೇರೆ ವಿವಾಹ ನಿಶ್ಚಯವಾಗಿತ್ತು. ಇದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ವೇಳೆ ಬುಚ್ಚಾ ಬಸ್ತಿ ಗ್ರಾಮದ ನಿವಾಸಿಯೊಬ್ಬರ ಗಮನಕ್ಕೆ ಬಂದು, ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯುವತಿ ಮನು ಮೃತಪಟ್ಟಿದ್ದು, ರಜತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನುವಿನ ಅಂತ್ಯಕ್ರಿಯೆಯ ನಂತರ, ಆಕೆಯ ತಾಯಿ ಪುರ್ಕಾಜಿ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ರಜತ್ ತಮ್ಮ ಮಗಳಿಗೆ ವಿಷ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ಅಮೆರಿಕ ಉಪಾಧ್ಯಕ್ಷರ ಕುಟುಂಬವನ್ನು ಭೇಟಿಯಾಗಿ ಉಡುಗೊರೆ ನೀಡಿದ ಮೋದಿ
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಇಬ್ಬರೂ ಕೀಟನಾಶಕ ಸೇವಿಸಿದ್ದಾರೆ. ಆರಂಭಿಕ ಚಿಕಿತ್ಸೆ ನಂತರ ಮನುವಿನ ಕುಟುಂಬ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿತು. ನಾವು ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ರಜತ್ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯ ಡಾ. ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.