Kunal Kamra: ಕುನಾಲ್ ಕಮ್ರಾ 'ಹವಾ ಹವಾಯಿ' ಸಾಂಗ್‌ಗೆ ಟಿ-ಸೀರೀಸ್ ತಡೆ; ಕಾಪಿ ರೈಟ್ ಬಗ್ಗೆ ಕಿಡಿ ಕಾರಿದ ಕಾಮಿಡಿಯನ್
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಅವರನ್ನು ನಂಬಿಕೆ ದ್ರೋಹಿ ಎಂದು ಕರೆದಿದ್ದ ಸ್ಟಾಂಡ್ ಅಪ್ ಕಾಮೀಡಿಯನ್ ಕುನಾಲ್ ಕಮ್ರಾ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 1987 ರ ಚಲನಚಿತ್ರ "ಮಿಸ್ಟರ್ ಇಂಡಿಯಾ" ದ "ಹವಾ ಹವಾಯಿಯ ಹಾಡನ್ನು ಬಿಡುಗಡೆ ಮಾಡಿದ್ದಾರೆ.


ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಅವರನ್ನು ನಂಬಿಕೆ ದ್ರೋಹಿ ಎಂದು ಕರೆದಿದ್ದ ಸ್ಟಾಂಡ್ ಅಪ್ ಕಾಮೀಡಿಯನ್ ಕುನಾಲ್ ಕಮ್ರಾ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 1987 ರ ಚಲನಚಿತ್ರ "ಮಿಸ್ಟರ್ ಇಂಡಿಯಾ" ದ "ಹವಾ (Kunal Kamra) ಹವಾಯಿಯ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ಅವರು ಇದರಲ್ಲಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಿದ್ದರು. ಬಿಜೆಪಿಯನ್ನ ʻಸರ್ವಾಧಿಕಾರಿʼ ಎಂದು ಆರೋಪಿಸಿದ್ದಾರೆ. ಸದ್ಯ ಈ ಹಾಡು ಇದೀಗ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ಕುನಾಲ್ ಕುರಿತು ಟೀಕಿಸುತ್ತಿದ್ದಾರೆ. ಹಾಡಿನ ಮೂಲ ಹಕ್ಕನ್ನು ಹೊಂದಿರುವ ಟೀ ಸೀರಿಸ್ ಗಿ ಹಕ್ಕುಸ್ವಾಮ್ಯ (Copy Right) ತಡೆಯನ್ನು ಹೊರಡಿಸಿದೆ.
ವಿವಾದಾತ್ಮಕ ಸ್ಟ್ಯಾಂಡ್-ಅಪ್ ವಿಡಿಯೋ 'ನಯಾ ಭಾರತ್: ಎ ಕಾಮಿಡಿ ಸ್ಪೆಷಲ್' ಅನ್ನು ಯೂಟ್ಯೂಬ್‌ನಲ್ಲಿ ನಿರ್ಬಂಧಿಸಿದ ಆರೋಪದ ಮೇಲೆ ಹಾಸ್ಯನಟ ಕುನಾಲ್ ಕಮ್ರಾ ಸಂಗೀತ ಕಂಪನಿ ಟಿ-ಸೀರೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಹಲೋ @TSeries,ವಿಡಂಬನೆ ಮತ್ತು ವಿಶ್ಲೇಷಣೆ ಎರಡಕ್ಕೂ ಕಾನೂನಿನಲ್ಲಿ ಅವಕಾಶವಿದೆ. ನಾನು ಹಾಡಿನ ಸಾಹಿತ್ಯ ಅಥವಾ ಮೂಲ ವಾದ್ಯವನ್ನು ಬಳಸಿಲ್ಲ. ನೀವು ಈ ವೀಡಿಯೊವನ್ನು ತೆಗೆದುಹಾಕಿದರೆ ಪ್ರತಿಯೊಂದು ಕವರ್ ಹಾಡು/ನೃತ್ಯ ವೀಡಿಯೊವನ್ನು ತೆಗೆದುಹಾಕಬಹುದು ಎಂದು ಅವರು ಹೇಳಿದ್ದಾರೆ. ಟಿ-ಸರಣಿಯು ಹಿಂದೆ ಹಾಡುಗಳನ್ನು ರಚಿಸಿದ ಗಾಯಕರು ಮತ್ತು ಸಂಗೀತಗಾರರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Kunal Kamra: ಕುನಾಲ್ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಬೆಂಬಲ; ಶಿಂಧೆ ವಿರುದ್ಧ ಹಲವರ ಟೀಕೆ
ಮುಂಬೈನ (Mumbai) ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇದು ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಕೋಲಾಹಲ ಎಬ್ಬಿಸಿತ್ತು. ಸದ್ಯ ಕುನಾಲ್ ಮೇಲೆ ಕೇಸ್ ದಾಖಲು ಮಾಡಲಾಗಿದೆ.