ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ 4 ಓವರ್‌ ಮುಗಿಸದ ರಶೀದ್‌ ಖಾನ್‌!

Mumbai Indians vs Gujarat Titans: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ ಕೇವಲ ಎರಡು ಓವರ್‌ ಮಾತ್ರ ಬೌಲ್‌ ಮಾಡಿದರು. ಆದರೆ, ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ ಅನ್ನು ಮುಗಿಸಲು ಅವಕಾಶ ಸಿಗಲಿಲ್ಲ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಇದೇ ಮೊದಲು ರಶೀದ್‌ ಖಾನ್‌ ಅವರು ತನ್ನ ನಾಲ್ಕು ಓವರ್‌ಗಳನ್ನು ಮುಗಿಸಲಿಲ್ಲ.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ 4  ಓವರ್‌ ಮುಗಿಸದ ರಶೀದ್‌ ಖಾನ್‌!

ರಶೀದ್‌ ಖಾನ್‌-ಶುಭಮನ್‌ ಗಿಲ್‌

Profile Ramesh Kote Mar 30, 2025 3:04 PM

ಅಹಮದಾಬಾದ್‌: ಮುಂಬೈ ಇಂಡಿಯನ್ಸ್‌ ವಿರುದ್ಧ ಶನಿವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ (Gujarat Titans) ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ (Rashid Khan) ಬೌಲ್‌ ಮಾಡಿದ್ದು ಕೇವಲ ಎರಡು ಓವರ್‌ಗಳು ಮಾತ್ರ. ಆ ಮೂಲಕ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ರಶೀದ್‌ ಖಾನ್‌ ಅವರು ತಮ್ಮ ನಾಲ್ಕು ಓವರ್‌ಗಳನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅಂದ ಹಾಗೆ ಈ ಪಂದ್ಯದಲ್ಲಿ ಶುಭಮನ್‌ ಗಿಲ್‌ ಅವರ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ 36 ರನ್‌ಗಳಿಂದ ಗೆಲುವು ಪಡೆಯಿತು. ಆದರೆ, ಮುಂಬೈ ಇಂಡಿಯನ್ಸ್‌ ತಂಡ ತನ್ನ ಸತತ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದಂತಾಯಿತು.

ಟಿ20 ಕ್ರಿಕೆಟ್‌ ಇತಿಹಾಸದಲ್ಲಿಯೇ ರಶೀದ್‌ ಖಾನ್‌ ಅವರು ಅತ್ಯಂತ ಶ್ರೇಷ್ಠ ಸ್ಪಿನ್ನರ್‌ ಆಗಿದ್ದಾರೆ. ಇವರು 2022ರ ಐಪಿಎಲ್‌ ಮೆಗಾ ಹರಾಜಿನ ಮೂಲಕ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು.ಅಹಮದಾಬಾದ್‌ ಮೂಲದ ಫ್ರಾಂಚೈಸಿಗೆ ರಶೀದ್‌ ಖಾನ್‌ ಬೌಲಿಂಗ್‌ ವಿಭಾಗದಲ್ಲಿ ಕೀ ಸ್ಪಿನ್ನರ್‌ ಆಗಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಬೌಲ್‌ ಮಾಡಿದ್ದು ಕೇವಲ ಎರಡು ಓವರ್‌ಗಳು ಮಾತ್ರ ಹಾಗೂ ಇದರಲ್ಲಿ ಅವರು ನೀಡಿದ್ದ ಕೇವಲ 10 ರನ್‌ಗಳು ಮಾತ್ರ. ಮುಂಬೈ ತಂಡದ ಕೀ ಬ್ಯಾಟ್ಸ್‌ಮನ್‌ಗಳಾದ ತಿಲಕ್‌ ವರ್ಮಾ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರನ್ನು ರಶೀದ್‌ ಖಾನ್‌ ತಮ್ಮ ಸ್ಪಿನ್‌ ಮೋಡಿಯ ಮೂಲಕ ಕಟ್ಟಿ ಹಾಕಿದ್ದರು.

MI vs GT: ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು, ಗುಜರಾತ್‌ಗೆ ಮೊದಲನೇ ಜಯ!

ರಶೀದ್‌ ಖಾನ್‌ಗೆ 4 ಓವರ್‌ ನೀಡದೆ ಇರಲು ಕಾರಣ

ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದಲ್ಲಿ ರಶೀದ್‌ ಖಾನ್‌ಗೆ ನಾಲ್ಕು ಓವರ್‌ಗಳನ್ನು ನೀಡದೆ ಇರಲು ಕಾರಣವೇನೆಂದು ಗುಜರಾತ್‌ ಟೈಟನ್ಸ್‌ ನಾಯಕ ಶುಭಮನ್‌ ಗಿಲ್‌ ತಿಳಿಸಿದ್ದಾರೆ. ಅಂದ ಹಾಗೆ ಕೊನೆಯ ಓವರ್‌ನಲ್ಲಿ ರಶೀದ್‌ ಖಾನ್‌ಗೆ ಬೌಲಿಂಗ್‌ ಕೊಡಲು ನಾಯಕ ಶುಭಮನ್‌ ಗಿಲ್‌ ಬಯಸಿದ್ದರು. ಆದರೆ, ಈ ಸಂದರ್ಭದಲ್ಲಿ ಫಾಸ್ಟ್‌ ಬೌಲರ್‌ಗಳು ಉತ್ತಮ ಬೌಲಿಂಗ್‌ ತೋರುತ್ತಿದ್ದ ಕಾರಣ ರಶೀದ್‌ಗೆ ಬೌಲಿಂಗ್‌ ಕೊಡಲಿಲ್ಲ ಎಂದು ಜಿಟಿ ನಾಯಕ ಸ್ಪಷ್ಟಪಡಿಸಿದ್ದಾರೆ.

"ಬಹುಶಃ ಇದೇ ಮೊದಲ ಬಾರಿ ರಶೀದ್‌ ಖಾನ್‌ ತನ್ನ ಪಾಲಿನ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಿಲ್ಲ ಎಂದು ಭಾವಿಸುತ್ತೇನೆ. ಅಂದ ಹಾಗೆ ಅವರನ್ನು ಕೊನೆಯಲ್ಲಿ ತೆಗೆದುಕೊಳ್ಳಬೇಕೆಂದು ಬಯಸಿದ್ದೆ, ಆದರೆ ವೇಗದ ಬೌಲರ್‌ಗಳು ಉತ್ತಮವಾಗಿ ಬೌಲ್‌ ಮಾಡುತ್ತಿದ್ದ ಕಾರಣ ರಶೀದ್‌ಗೆ ಚೆಂಡು ನೀಡಲು ಆಗಲಿಲ್ಲ. ಪ್ರಸಿಧ್‌ ಕೃಷ್ಣ ಚೆನ್ನಾಗಿ ಬೌಲ್‌ ಮಾಡುತ್ತಿದ್ದರು. ಈ ಕಾರಣದಿಂದಲೇ ವೇಗದ ಬೌಲರ್‌ಗಳನ್ನು ಬಳಸಿಕೊಳ್ಳಬೇಕೆಂದು ವಯಸಿದ್ದೆ. ಇದು ನಮ್ಮ ಪಾಲಿಗೆ ಒಳ್ಳೆಯ ಸವಾಲು," ಎಂದು ಶುಭಮನ್‌ ಗಿಲ್‌ ತಿಳಿಸಿದ್ದಾರೆ.

IPL 2025: ಐಪಿಎಲ್‌ ಆಫರ್‌ ತಿರಸ್ಕರಿಸಿದ ಇಂಗ್ಲೆಂಡ್‌ ಬ್ಯಾಟರ್‌

ರಶೀದ್‌ ಖಾನ್‌ ಐಪಿಎಲ್‌ ಟೂರ್ನಿಯಲ್ಲಿ ಎರಡು ಬಾರಿ ತಮ್ಮ ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಿರಲಿಲ್ಲ. ಆದರೆ, ಈ ಎರಡೂ ಬಾರಿ ಜಿಟಿ 20 ಓವರ್‌ಗಳನ್ನು ಬೌಲ್‌ ಮಾಡಲು ಸಾಧ್ಯವಾಗಿರಲಿಲ್ಲ.

2023ರ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ 8.5 ಓವರ್‌ಗಳನ್ನು ಚೇಸ್‌ ಮಾಡಿತ್ತು. ಈ ಇನಿಂಗ್ಸ್‌ನಲ್ಲಿ ರಶೀದ್‌ ಖಾನ್‌ ಎರಡು ಓವರ್‌ ಬೌಲ್‌ ಮಾಡಿ 12 ರನ್‌ ನೀಡಿ ಒಂದು ವಿಕೆಟ್‌ ಅನ್ನು ಕಿತ್ತಿದ್ದರು.

2024ರ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ ಗುರಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 13.4 ಓವರ್‌ಗಳಲ್ಲಿ ಚೇಸ್‌ ಮಾಡಿತ್ತು. ಈ ಪಂದ್ಯದಲ್ಲಿ ರಶೀದ್‌ ಖಾನ್‌ 1.4 ಓವರ್‌ ಅನ್ನು ಬೌಲ್‌ ಮಾಡಿದ್ದರು.

IPL 2025 Points Table: ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

2017ರಲ್ಲಿ ರಶೀದ್‌ ಖಾನ್‌ ಐಪಿಎಲ್‌ಗೆ ಪದಾರ್ಪಣೆ

ರಶೀದ್‌ ಖಾನ್‌ ಅವರು 2017ರಲ್ಲಿ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದದ್ದರು. ಅಂದಿನಿಂದ 2022ರ ವರೆಗೆ ರಶೀದ್‌ ಖಾನ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದರು. ಐಪಿಎಲ್‌ ಟೂರ್ನಿಯಲ್ಲಿ ರಶೀದ್‌ ಖಾನ್‌ ಅವರು 150 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್‌ ಸಿಂಗ್‌ ಜೊತೆ 11ನೇ ಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ರಶೀದ್‌ ಖಾನ್‌ ಇಲ್ಲಿಯವರೆಗೂ 123 ಪಂದ್ಯಗಳನ್ನು ಆಡಿದ್ದಾರೆ.