ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಬೀದಿ ಶ್ವಾನವನ್ನು ಬರ್ಬರವಾಗಿ ಥಳಿಸಿ ಕೊಂದ ನೀಚ! ಹೃದಯವಿದ್ರಾವಕ ವಿಡಿಯೊ ವೈರಲ್

ಉತ್ತರ ಪ್ರದೇಶದ ಆಗ್ರಾದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕ್ರೂರವಾಗಿ ಕೊಂದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾದ ಕಾರಣ ಆರೋಪಿ ವಿರುದ್ಧ ದೂರು ದಾಖಲಾಗಿದೆ.

ಬೀದಿ ಶ್ವಾನವನ್ನು ಅಟ್ಟಾಡಿಸಿ ಕೊಂದ ಪಾಪಿ- ವಿಡಿಯೊ ಇದೆ

Profile pavithra Apr 8, 2025 2:04 PM

ಲಖನೌ: ನಾಯಿಯೆಂದರೆ ಕೆಲವರು ತಮ್ಮ ಮನೆಯ ಒಬ್ಬ ಸದಸ್ಯನಂತೆ ಪ್ರೀತಿಸಿ ಸಾಕುತ್ತಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕೂಡ ಪ್ರೀತಿಯ ನಾಯಿಗೆ ಸ್ನಾನ ಮಾಡಿಸಿದ ಶ್ವಾನ ಪ್ರೇಮಿಯ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಹೀಗಿದ್ದರೂ ಕೆಲವೊಂದು ಕಡೆ ನಾಯಿಗಳ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕ್ರೂರವಾಗಿ ಕೊಂದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ಪ್ರಾಣಿಪ್ರಿಯರ ಕೆಂಗಣ್ಣಿಗೆ ಕಾರಣವಾಗಿದೆ.

ನಗರದ ಶ್ಯಾಮ್ ನಗರ ಪ್ರದೇಶದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆಯಂತೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ದೊಡ್ಡದಾದ ದೊಣ್ಣೆಯನ್ನು ಹಿಡಿದುಕೊಂಡು ಬೀದಿ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆತನ ಹೊಡೆತ ಸಹಿಸಲಾರದೇ ನಾಯಿ ನೋವಿನಿಂದ ಕೂಗುತ್ತಾ ಅಲ್ಲಿಂದ ಓಡಿದಾಗ ಆತ ಅದನ್ನು ಓಡಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಯಿಯನ್ನು ಅಟ್ಟಾಡಿಸಿ ಕೊಂದ ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ನಾಯಿ ಶ್ಯಾಮ್ ನಗರದಲ್ಲಿ ವಾಸಿಸುವ ವಕೀಲ ಅಮಿತ್ ಮಿಶ್ರಾ ಮನೆಯ ಹೊರಗೆ ಮಲಗುತ್ತಿತಂತೆ. ಆಗ ನೆರೆಮನೆಯ ರಾಜ್ ಕುಮಾರ್ ಎಂಬಾತ ಇದ್ದಕ್ಕಿದ್ದಂತೆ ನಾಯಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ರಾಜಕುಮಾರನು ನಾಯಿಯನ್ನು ರಸ್ತೆಯಿಂದ ದೂರಕ್ಕೆ ಕರೆದೊಯ್ದು ಕೊನೆಗೆ ಅದನ್ನು ಹೊಡೆದು ಕೊಂದಿದ್ದಾನೆ. ವಕೀಲ ಅಮಿತ್ ಮಿಶ್ರಾ ರಾತ್ರಿ ಮನೆಗೆ ಮರಳಿದಾಗ ಘಟನೆಯ ಬಗ್ಗೆ ತಿಳಿದು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾನೆ. ಅದರಲ್ಲಿ ನಾಯಿಯ ಕ್ರೂರ ಹತ್ಯೆಯ ದೃಶ್ಯ ಸೆರೆಯಾಗಿತ್ತು.

ನಂತರ ಅಮಿತ್ ಮಿಶ್ರಾ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾನೆ. ಅಲ್ಲದೇ , ಸ್ಥಳೀಯರು ಸತ್ತ ನಾಯಿಯ ದೇಹವನ್ನು ಮಂಜುಗಡ್ಡೆಯ ತುಂಡಿನ ಮೇಲೆ ಇರಿಸಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಅಪರಾಧ ಸಾಬೀತಾದರೆ ಆತನಿಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 325 ರ ಪ್ರಕಾರ, ಯಾವುದೇ ಪ್ರಾಣಿಯನ್ನು ಕೊಲ್ಲುವುದು, ವಿಷ ಹಾಕುವುದು, ಅಂಗವೈಕಲ್ಯಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ಮೂಲಕ ಕಿಡಿಗೇಡಿತನವನ್ನು ಮಾಡುವ ಯಾರಿಗಾದರೂ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral News: ನ್ಯಾವಿಗೇಷನ್ ಆ್ಯಪ್ ಬಳಸಿ ಕಾಡಿನಲ್ಲಿ ಸಿಲುಕಿಕೊಂಡ ಯುವಕರು; ರಕ್ಷಣಾ ಕಾರ್ಯವೇ ರೋಚಕ!

ಬೀದಿನಾಯಿಗಳನ್ನು ಜನರು ಕ್ರೂರವಾಗಿ ಹೊಡೆದ ಕೊಂದ ಘಟನೆ ಈ ಹಿಂದೆ ಕೂಡ ಆಗ್ರಾದಲ್ಲಿ ನಡೆದಿತ್ತು. ಆಗ್ರಾದ ಬೀದಿಯಲ್ಲಿ ಮಹಿಳೆಯೊಬ್ಬಳು ನಾಯಿಯನ್ನು ಕೋಲಿನಿಂದ ಥಳಿಸಿದ ಅಮಾನವೀಯ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ, ಮಹಿಳೆಯೊಬ್ಬರು ನಾಯಿಯನ್ನು ನಿರ್ದಯವಾಗಿ ಹೊಡೆಯುವುದು ರೆಕಾರ್ಡ್ ಆಗಿತ್ತು.