Viral News: ನ್ಯಾವಿಗೇಷನ್ ಆ್ಯಪ್ ಬಳಸಿ ಕಾಡಿನಲ್ಲಿ ಸಿಲುಕಿಕೊಂಡ ಯುವಕರು; ರಕ್ಷಣಾ ಕಾರ್ಯವೇ ರೋಚಕ!
ಉತ್ತರ ಕೇರಳದ ನಿಲಂಬೂರಿನಲ್ಲಿ ಐದು ಮಂದಿ ಯುವಕರು ದಾರಿ ತಿಳಿಯದ ಕಾರಣ ದಟ್ಟ ಕಾಡಿನ ಮೂಲಕ ಪ್ರಯಾಣಿಸಲು ನ್ಯಾವಿಗೇಷನ್ ಅಪ್ಲಿಕೇಶನ್ ಅನ್ನು ಬಳಸಿ ಕೊನೆಗೆ ಭಾರೀ ಮಳೆಯ ನಡುವೆ ಮಧ್ಯರಾತ್ರಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಕೊನೆಗೆ ಅವರನ್ನು ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವಾ ಸಿಬ್ಬಂದಿ ಕಾಡಿನಿಂದ ರಕ್ಷಿಸಿದ್ದಾರೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ತಿರುವನಂತಪುರಂ: ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಮಾಡಿದವರು ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ ಘಟನೆ ಈ ಹಿಂದೆ ನಡೆದಿತ್ತು . ಇದೀಗ ಉತ್ತರ ಕೇರಳದ ನಿಲಂಬೂರಿನಲ್ಲಿ ಐದು ಮಂದಿ ಯುವಕರು ದಾರಿ ತಿಳಿಯದ ಕಾರಣ ದಟ್ಟ ಕಾಡಿನ ಮೂಲಕ ಪ್ರಯಾಣಿಸಲು ನ್ಯಾವಿಗೇಷನ್ ಅಪ್ಲಿಕೇಶನ್ ಅನ್ನು ಬಳಸಿ ಜಡಿ ಮಳೆಯ ನಡುವೆ ಮಧ್ಯರಾತ್ರಿ ಕಾಡಿನಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಘಟನೆ ಇತ್ತೀಚೆಗೆ ನಡೆದಿದ್ದು, ಅದೃಷ್ಟವಶಾತ್, ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವಾ ಸಿಬ್ಬಂದಿ ಅವರನ್ನು ಕಾಡಿನಿಂದ ರಕ್ಷಿಸಿದ್ದಾರೆ. ಈ ಸುದ್ದಿ ಇದೀಗ ವೈರಲ್(Viral News) ಆಗಿದೆ.
ವಯನಾಡ್‍ನ ಕಲ್ಪೆಟ್ಟಾ ಮೂಲದ ಈ ಯುವಕರು ನಿಲಂಬೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಮಾರ್ಗದ ಬಗ್ಗೆ ಮಾಹಿತಿ ಇಲ್ಲದ ಕಾರಣ ಅವರು ನ್ಯಾವಿಗೇಷನ್ ಅಪ್ಲಿಕೇಶನ್ ಅನ್ನು ಬಳಸಿದ್ದಾರೆ. ಆದರೆ ಅವರು ರಾತ್ರಿ ಕಾಡನ್ನು ಪ್ರವೇಶಿಸಿದಾಗ ಭಾರೀ ಮಳೆ ಸುರಿದಿತ್ತು. ಮತ್ತು ಅವರ ಕಾರು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಈ ಐದು ಮಂದಿ ಪ್ರಯಾಣಿಕರು ಹೇಗೋ ಸ್ಥಳೀಯ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರಿಂದ ಅಲ್ಲಿಂದ ಸಿಬ್ಬಂದಿಯ ತಂಡವನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿತ್ತು.
ನಂತರ ತಂಡ 5 ಮಂದಿಯನ್ನು ಕಾಪಾಡಿದ್ದಾರೆ ಮತ್ತು ಕಾರು ಗುಂಡಿಯಲ್ಲಿ ಸಿಲುಕಿ ಕೆಟ್ಟು ಹೋದ ಕಾರಣ ಅದನ್ನು ಹಗ್ಗದಿಂದ ಕಟ್ಟಿ ಎಳೆದಿದ್ದಾರೆ. ಘಟನೆಯ ನಂತರ ಆ ಐದು ಜನರು ನಿಲಂಬೂರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಈ ದೇಶದಲ್ಲಿ ಮೃತದೇಹದ ಬೂದಿಯನ್ನು ಸೂಪ್‌ನಲ್ಲಿ ಬೆರೆಸಿ ಕುಡಿಯುತ್ತಾರೆ!
ಈ ರೀತಿ ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಕರು ದಾರಿ ತಪ್ಪಿದ ಪ್ರಕರಣಗಳು ಈ ಹಿಂದೆಯೂ ಹಲವಾರು ನಡೆದಿತ್ತು. ಇದಕ್ಕೂ ಮುನ್ನ ಮಾರ್ಚ್‍ನಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿನ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರು 30 ಅಡಿ ಆಳದ ಚರಂಡಿಗೆ ಬಿದ್ದ ಕಾರಣ ಆ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದರು. ಈ ಪ್ರದೇಶದ ಸ್ಥಳೀಯರು ಅವರು ಗೂಗಲ್ ಮ್ಯಾಪ್ ಬಳಸಿದ್ದರಿಂದ ಅವರಿಗೆ ದಾರಿ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.
ಹಾಗೇ ಜನವರಿ ಕೊನೆಯಲ್ಲಿ, ಇಬ್ಬರು ಫ್ರೆಂಚ್ ಪ್ರವಾಸಿಗರು ದೆಹಲಿಯಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಪ್ರಯಾಣಿಸಲು ಗೂಗಲ್ ಮ್ಯಾಪ್ ಅನ್ನು ಬಳಸಿದ್ದರಿಂದ ಅದು ಶಾಟ್‍ಕಟ್ ಮೂಲಕ ಕರೆದುಕೊಂಡು ಬಂದು ದಾರಿ ತಪ್ಪಿಸಿ ಉತ್ತರ ಪ್ರದೇಶದ ಬರೇಲಿಯಲ್ಲಿ ಅವರು ಚುರೈಲಿ ಅಣೆಕಟ್ಟಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.