Physical Abuse: ಪ್ರಿಯತಮನೊಂದಿಗೆ ಸೇರಿ 3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಮಾಡಿದ ಪಾಪಿ ತಾಯಿ
Pujab Shocker: ʼಬೇಲಿಯೇ ಎದ್ದು ಹೊಲವ ಮೇಯ್ದಂತೆʼ ಗಾದೆ ಮಾತು ನೆನಪಿಸುವ ಘಟನೆ ಇದು. 29 ವರ್ಷದ ಮಹಿಳೆಯೊಬ್ಬಳು 30 ವರ್ಷದ ಗೆಳೆಯನೊಂದಿಗೆ ಸೇರಿ ತನ್ನ 3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ನಡೆದಿದೆ.


ಚಂಡೀಗಢ: 29 ವರ್ಷದ ಮಹಿಳೆಯೊಬ್ಬಳು 30 ವರ್ಷದ ಗೆಳೆಯನೊಂದಿಗೆ ಸೇರಿ ತನ್ನ 3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ನಡೆದಿದೆ. ಖರಾರ್ (Kharar)ನ ಈ ಮಹಿಳೆ ಮಗಳ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾಳೆ (Physical Abuse). ಸದ್ಯ ಆಕೆ ಮತ್ತು ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ (ಮಾ. 21) ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ವಿಚಾರಣೆ ನಡೆಯುತ್ತಿದೆ.
ಬಾಲಕಿಯ ತಂದೆ ಅನುಮಾನಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಈ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವಿಚಾರ ದೇಶಾದ್ಯಂತ ವ್ಯಾಪಕ ಆಕ್ರೋಶ ಹುಟ್ಟು ಹಾಕಿದ್ದು, ಮಾನವೀಯತೆಯನ್ನೇ ಮರೆತ ಮಹಿಳೆಗೆ ಕಠಿಣ ಶಿಕ್ಷೆ ನೀಡುವಂತೆ ಹಲವರು ಆಗ್ರಹಿಸಿದ್ದಾರೆ.
पंजाब के मोहाली में माँ और बच्चो के रिश्ते को कलंकित करती यहा घटना बड़ी क्रूरता से भरी पड़ी है। माँ ओर उसके आशिक़ ने 3 साल की मासूम बच्ची के साथ शोषण कर विडियो भी बनाया। इस जैसे माँ और आशिक को सख्त से सख्त सजा मिलनी चाहिए। pic.twitter.com/oQxKBGZsVz
— Sachin Jatav (@ASP4Sachin) March 22, 2025
ಈ ಸುದ್ದಿಯನ್ನೂ ಓದಿ: Pune Horror: ಪುಣೆಯಲ್ಲೊಂದು ಹೃದಯ ವಿದ್ರಾವಕ ಘಟನೆ; ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ಟೆಕ್ಕಿ
ಘಟನೆಯ ಹಿನ್ನೆಲೆ
ಸಂತ್ರಸ್ತೆ ಬಾಲಕಿಯ ತಂದೆ ಉದ್ಯಮಿಯಾಗಿದ್ದು, ಆಗಾಗ ವಿದೇಶ ಸೇರಿದಂತೆ ವಿವಿಧ ಕಡೆ ಪಯಣ ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಮನೆಯ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯೆ ಆಕಸ್ಮಿಕವಾಗಿ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ತನ್ನ ಮಗಳ ಆಘಾತಕಾರಿ ವಿಡಿಯೊ ಕಂಡು ಮೊಹಾಲಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಪತ್ನಿಯ ಕರಾಳ ಮುಖದ ಪರಿಚಯವಾಗಿತ್ತು.
ಪೊಲೀಸ್ ಅಧಿಕಾರಿ ಹೇಳಿದ್ದೇನು?
ಮೊಹಾಲಿ ಪೊಲೀಸ್ ಠಾಣೆಯ ಅಧಿಕಾರಿ ಬಲ್ಜಿಂದರ್ ಕೌರ್ ಸೈನಿ ಈ ಬಗ್ಗೆ ಮಾಹಿತಿ ನೀಡಿ, ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿದ್ದಾರೆ. ಸೆಕ್ಷನ್ 65/2 (12 ವರ್ಷದೊಳಗಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ), 204 (ಸರ್ಕಾರಿ ಅಧಿಕಾರಿ ಹೆಸರಲ್ಲಿ ವಂಚನೆ), 351/2 (ಕ್ರಿಮಿನಲ್ ಬೆದರಿಕೆ) ಮತ್ತು ಪೋಸ್ಕೋ ಕಾಯ್ದೆಯಡಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಹೇಳಿಕೆ ದಾಖಲಿಸಲಾಗಿದೆ. ಬಾಲಕಿಯ ಪಾಪಿ ತಾಯಿ ಕಳೆದ 1 ವರ್ಷದಿಂದ ತನ್ನ ಗೆಳೆಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮಹಿಳೆಯ ಸ್ನೇಹಿತ ತಾನು ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಅವರ ಸಂಬಂಧದ ಬಗ್ಗೆ ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಆತ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುವ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆʼʼ ಎಂದು ಬಲ್ಜಿಂದರ್ ಕೌರ್ ಸೈನಿ ವಿವರಿಸಿದ್ದಾರೆ.
ಸದ್ಯ ಮಹಿಳೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆಗಾಗಿ ಫಾರೆನ್ಸಿಕ್ ಲ್ಯಾಬ್‌ಗೆ ಕಳಿಹಿಸಲಾಗಿದೆ. ಅಲ್ಲದೆ ಆರೋಪಿ ಬಳಸಿರುವ ಪೊಲೀಸ್ ಸಮವಸ್ತ್ರ ಎಲ್ಲಿಂದ ಬಂತು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. "ಆಘಾತದಿಂದ ಹೊರ ಬರಲು ಬಾಲಕಿಗೆ ಮನೋವೈದ್ಯರ ಸಮಾಲೋಚನೆ ನೀಡಲಾಗಿದೆ. ಇದೀಗ ಆಕೆಯನ್ನು ಅಜ್ಜಿಯ ಮನೆಗೆ ಕಳುಹಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.