ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI Contracts: ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಟಾರ್‌ ಆಟಗಾರರಿಗೆ ಹಿಂಬಡ್ತಿ ಸಾಧ್ಯತೆ!

ಕಳೆದ ಬಾರಿ 30 ಹೆಸರುಗಳನ್ನು ಹೊಂದಿದ್ದ ಪುರುಷರ ಪಟ್ಟಿಯಲ್ಲಿ ಈ ಬಾರಿ ಎಷ್ಟು ಆಟಗಾರರಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಎ+ ವರ್ಗದಲ್ಲಿ 7 ಕೋಟಿ ರೂ. ಉಳಿಸಿಕೊಳ್ಳುವ ಶುಲ್ಕವಿದ್ದು, ನಂತರ ಎ ವಿಭಾಗದಲ್ಲಿ ಆಟಗಾರನಿಗೆ 5 ಕೋಟಿ ರೂ. ಮತ್ತು ಬಿ ಮತ್ತು ಸಿ ಗ್ರೇಡ್‌ನಲ್ಲಿರುವ ಕ್ರಿಕೆಟಿಗರಿಗೆ ಕ್ರಮವಾಗಿ 3 ಕೋಟಿ ಮತ್ತು 1 ಕೋಟಿ ರೂ. ಪಾವತಿಸಲಾಗುತ್ತದೆ.

ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಟಾರ್‌ ಆಟಗಾರರಿಗೆ ಹಿಂಬಡ್ತಿ ಸಾಧ್ಯತೆ!

Profile Abhilash BC Mar 25, 2025 9:17 AM

ಮುಂಬಯಿ: ಸೋಮವಾರ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಆಟಗಾರರ ವಾರ್ಷಿಕ ಗುತ್ತಿಗೆ(BCCI Contracts) ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇಂದು(ಮಂಗಳವಾರ) ಪುರುಷ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ರೋಹಿತ್ ಶರ್ಮಾ(Rohit Sharma), ವಿರಾಟ್ ಕೊಹ್ಲಿ(Virat Kohli) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರಿಗೆ ಹಿಂಬಡ್ತಿ ಸಿಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಬಿಸಿಸಿಐಯ ಸೂಚನೆಯ ಮೇರೆಗೂ ದೇಶಿಯ ಕ್ರಿಕೆಟ್‌ನಲ್ಲಿ ಆಡದ ಕಾರಣದಿಂದ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದ ಶ್ರೇಯಸ್‌ ಅಯ್ಯರ್‌ ಅವರನ್ನು ಈ ಬಾರಿ ಮತ್ತೆ ಗುತ್ತಿಗೆ ಪಟ್ಟಿಗೆ ಸೇರ್ಪಡಿಸುವುದು ಖಚಿತವಾಗಿದೆ. ಇತ್ತೀಚೆಗೆ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇಶಾನ್‌ ಕಿಶನ್‌ ಸೇರ್ಪಡೆ ಅನುಮಾನ.

ಕಳೆದ ಬಾರಿ 30 ಹೆಸರುಗಳನ್ನು ಹೊಂದಿದ್ದ ಪುರುಷರ ಪಟ್ಟಿಯಲ್ಲಿ ಈ ಬಾರಿ ಎಷ್ಟು ಆಟಗಾರರಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಎ+ ವರ್ಗದಲ್ಲಿ 7 ಕೋಟಿ ರೂ. ಉಳಿಸಿಕೊಳ್ಳುವ ಶುಲ್ಕವಿದ್ದು, ನಂತರ ಎ ವಿಭಾಗದಲ್ಲಿ ಆಟಗಾರನಿಗೆ 5 ಕೋಟಿ ರೂ. ಮತ್ತು ಬಿ ಮತ್ತು ಸಿ ಗ್ರೇಡ್‌ನಲ್ಲಿರುವ ಕ್ರಿಕೆಟಿಗರಿಗೆ ಕ್ರಮವಾಗಿ 3 ಕೋಟಿ ಮತ್ತು 1 ಕೋಟಿ ರೂ. ಪಾವತಿಸಲಾಗುತ್ತದೆ.

ಇದನ್ನೂ ಓದಿ IPL 2025: ಐಪಿಎಲ್‌ ಶೂನ್ಯ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್‌

ಕಳೆದ ವರ್ಷ ಎ+ ವಿಭಾಗದಲ್ಲಿ ಬುಮ್ರಾ, ರೋಹಿತ್, ಕೊಹ್ಲಿ ಮತ್ತು ಜಡೇಜಾ ಕಾಣಿಸಿಕೊಂಡಿದ್ದರು. ಆದರೆ ಈ ಪೈಕಿ ರೋಹಿತ್, ಕೊಹ್ಲಿ ಮತ್ತು ಜಡೇಜಾ ಟಿ20 ಯಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಇವರು ಈ ಬಾರಿ ಎ ಗ್ರೇಡ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ ಎ+ ವಿಭಾಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಶುಭಮನ್‌ ಗಿಲ್‌ಗೆ ಎ ಗ್ರೇಡ್ ನೀಡುವ ಸಾಧ್ಯತೆಗಳಿವೆ.