Saturday, 14th December 2024

ಎಲಿಮಿನೇಟರ್ ಪಂದ್ಯ ಇಂದು: ಆರ್‌ಸಿಬಿಗೆ ಸನ್‌ರೈಸರ‍್ಸ್‌ ಸವಾಲು

ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಶುಕ್ರವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಎಲಿಮಿ ನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ.

ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ 14 ಅಂಕ ಪಡೆದು (+0.608) ನೆಟ್ ರನ್ ರೇಟ್ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬೌಲಿಂಗ್ ನಲ್ಲಿ ಈ ತಂಡ ಸಾಕಷ್ಟು ಬಲಿಷ್ಠವಾಗಿದೆ.

ಕೊಹ್ಲಿ ನಾಯಕತ್ವದ ಆರ್.ಸಿ.ಬಿ. ತಂಡ 14 ಪಾಯಿಂಟ್ ಗಳಿಸಿದ್ದು (-0.172) ನೆಟ್ ರನ್ ರೇಟ್ ಗಳಿಸುವ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜಯಗಳಿಸಿದರೆ ತನ್ನ ಚೊಚ್ಚಲ ಐಪಿಎಲ್ ಕಪ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.