ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harbhajan Singh: ಕಪ್ಪು ಟ್ಯಾಕ್ಸಿಗೆ ಹೋಲಿಸಿ ಆರ್ಚರ್‌ಗೆ ಜನಾಂಗೀಯ ನಿಂದನೆ ಮಾಡಿದ ಹರ್ಭಜನ್

IPL 2025: ಆರ್ಚರ್​ ಎಸೆದ ಸನ್​ರೈಸರ್ಸ್​ ಇನಿಂಗ್ಸ್​ನ 18ನೇ ಓವರ್​ನಲ್ಲಿ ಹೆನ್ರಿಕ್​ ಕ್ಲಾಸೆನ್​ ಸತತ 2 ಬೌಂಡರಿ ಬಾರಿಸಿದಾಗ ಹರ್ಭಜನ್ ಲಂಡನ್​ನಲ್ಲಿ ಕಪ್ಪು ಟ್ಯಾಕ್ಸಿಗಳ ಮೀಟರ್​ ಬಹಳ ವೇಗವಾಗಿ ಓಡುತ್ತದೆ ಮತ್ತು ಇಲ್ಲಿ ಆರ್ಚರ್​ ಅವರ ಮೀಟರ್​ ಕೂಡ ವೇಗವಾಗಿ ಓಡುತ್ತಿದೆ ಎಂದು ಹೇಳಿದ್ದರು. ಇದೀಗ ಹರ್ಭಜನ್​ರನ್ನು ಕೂಡಲೇ ಐಪಿಎಲ್​ ಕಾಮೆಂಟರಿಯಿಂದ ನಿಷೇಧಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಆರ್ಚರ್‌ಗೆ ಜನಾಂಗೀಯ ನಿಂದನೆ ಮಾಡಿದ ಹರ್ಭಜನ್

Profile Abhilash BC Mar 25, 2025 9:55 AM

ನವದೆಹಲಿ: ಜನಾಂಗೀಯ ನಿಂದನೆ ಎನ್ನುವುದು ವಿಶ್ವಕ್ಕೆ ಅಂಟಿದ ಕಳಂಕ. ಇಪ್ಪತ್ತೂಂದನೇ ಶತಮಾನದಲ್ಲಿದ್ದರೂ ಈ ಪಿಡುಗಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕ್ರೀಡಾ ಕ್ಷೇತ್ರದಲ್ಲೂ ಜನಾಂಗೀಯ ನಿಂದನೆ ಪ್ರಕರಣಗಳು ಹೆಚ್ಚುತ್ತಿವೆ. ಪಸಕ್ತ ಸಾಗುತ್ತಿರುವ ಐಪಿಎಲ್(IPL 2025)​ನಲ್ಲಿ ಭಾನುವಾರ ನಡೆದಿದ್ದ ರಾಜಸ್ಥಾನ್‌ ಮತ್ತು ಹೈದರಾಬಾದ್‌ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ರನ್ನು ಲಂಡನ್​ನ ಕಪ್ಪು ಟ್ಯಾಕ್ಸಿಗೆ(London's kaali taxi') ಹೋಲಿಸಿ ಜನಾಂಗೀಯ ನಿಂದನೆ ಮಾಡಿದ ಹರ್ಭಜನ್​ ಸಿಂಗ್(Harbhajan Singh) ವಿರುದ್ಧ​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆರ್ಚರ್​ ಎಸೆದ ಸನ್​ರೈಸರ್ಸ್​ ಇನಿಂಗ್ಸ್​ನ 18ನೇ ಓವರ್​ನಲ್ಲಿ ಹೆನ್ರಿಕ್​ ಕ್ಲಾಸೆನ್​ ಸತತ 2 ಬೌಂಡರಿ ಬಾರಿಸಿದಾಗ ಹರ್ಭಜನ್ ಲಂಡನ್​ನಲ್ಲಿ ಕಪ್ಪು ಟ್ಯಾಕ್ಸಿಗಳ ಮೀಟರ್​ ಬಹಳ ವೇಗವಾಗಿ ಓಡುತ್ತದೆ ಮತ್ತು ಇಲ್ಲಿ ಆರ್ಚರ್​ ಅವರ ಮೀಟರ್​ ಕೂಡ ವೇಗವಾಗಿ ಓಡುತ್ತಿದೆ ಎಂದು ಹೇಳಿದ್ದರು. ಇದೀಗ ಹರ್ಭಜನ್​ರನ್ನು ಕೂಡಲೇ ಐಪಿಎಲ್​ ಕಾಮೆಂಟರಿಯಿಂದ ನಿಷೇಧಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬಾಲ್‌ ಟ್ಯಾಂಪರಿಂಗ್‌ ಆರೋಪ! ವಿಡಿಯೊ

ಹರ್ಭಜನ್​ ಈ ಹಿಂದೆ ಭಾರತ ತಂಡದಲ್ಲಿ ಆಡುತ್ತಿದ್ದ ವೇಳೆ 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ​ ಆಸೀಸ್​ ಆಲ್ರೌಂಡರ್​ ಆಂಡ್ರೋ ಸೈಮಂಡ್ಸ್ ಅವರನ್ನು 'ಮಂಗ' ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದರು. ಈ ಪ್ರಕರಣ ಮಂಕಿಗೇಟ್ ಎಂದೇ ಜನಪ್ರಿಯವಾಗಿತ್ತು. ಹರ್ಭಜನ್ ವಿರುದ್ಧ ಆಸೀಸ್‌ ಆಟಗಾರರು ಐಸಿಸಿಗೆ ದೂರು ಕೂಡ ನೀಡಿದ್ದರು. ಆದರೆ​ ನಿಷೇಧ ಶಿಕ್ಷೆಯಿಂದ ಅಂದು ಹರ್ಭಜನ್‌ ಪಾರಾಗಿದ್ದರು. ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡ 21 ವರ್ಷ ಅಮಾನತ್ತುಗೊಂಡಿದ್ದು.

ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ ಎದುರಿನ ವೆಲ್ಲಿಂಗ್ಟನ್‌ ಟೆಸ್ಟ್‌ ವೇಳೆ ಅಭಿಮಾನಿಯೊಬ್ಬನಿಂದ ಜನಾಂಗೀಯ ನಿಂದನೆಗೊಳಗಾಗಿದ್ದರು. ಇದು ಕೂಡ ಭಾರೀ ಸುದ್ದಿಯಾಗಿತ್ತು.

ಏನಿದು ಜನಾಂಗೀಯ ನಿಂದನೆ?

ಒಂದು ನಿರ್ದಿಷ್ಟ ಜನಾಂಗದ ಮೇಲೆ ಮಾಡುವ ಅವಹೇಳನವನ್ನು ಜನಾಂಗೀಯ ನಿಂದನೆ ಎಂದು ಕರೆಯುತ್ತಾರೆ. ವ್ಯಕ್ತಿಯ ಧರ್ಮ, ಬಣ್ಣ, ಜಾತಿ, ದೇಶ, ಭಾಷೆ, ಸಂಸ್ಕೃತಿಯನ್ನು ಅವಹೇಳನ ಮಾಡುವುದು ಅಪರಾಧ. ಅದೆಲ್ಲವೂ ಜನಾಂಗೀಯ ನಿಂದನೆ ಎಂದು ಪರಿಗಣಿಸಲ್ಪಡುತ್ತದೆ.