GT vs PBKS: ಇಂದು ಗುಜರಾತ್-ಪಂಜಾಬ್ ಮುಖಾಮುಖಿ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?
ಪಂಜಾಬ್ ತಂಡದಲ್ಲಿ ಅನುಭವಿ ಮತ್ತು ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರರ ದಂಡೆ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಯಜುವೇಂದ್ರ ಚಹಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇವರೆಲ್ಲ ಕ್ಲಿಕ್ ಆದರೆ ಮಾತ್ರ ಗೆಲುವು ಸಾಧ್ಯ.


ಅಹಮದಾಬಾದ್: ಆರ್‌ಸಿಬಿಯಂತೆ ಬಲಿಷ್ಠ ಆಟಗಾರರನ್ನು ಹೊಂದಿಯೂ ಒಮ್ಮೆಯೂ ಪ್ರಶಸ್ತಿ ಜಯಿಸದ ಪಂಜಾಬ್ ಕಿಂಗ್ಸ್(GT vs PBKS) ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್(IPL 2025) 18ನೇ ಆವೃತ್ತಿಯಲ್ಲಿ ಮಂಗಳವಾರದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕಳೆದ ತಿಂಗಳು ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಗಿಲ್-ಶ್ರೇಯಸ್ ಉತ್ತಮ ಫಾರ್ಮ್‌ನಲ್ಲಿದ್ದು, ನಾಯಕರಾಗಿ ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ.
ಸ್ಫೋಟಕ ಬ್ಯಾಟರ್ ಜಾಸ್ ಬ್ಲಟ್ಲರ್ ಗುಜರಾತ್ ಸೇರಿರುವುದು ತಂಡದ ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ನಾಯಕ ಶುಭಮನ್ ಗಿಲ್‌ಗೆ ಉತ್ತಮ ಆರಂಭಿಕ ಜತೆಗಾರ ಕೂಡ ಸಿಕ್ಕಂತಾಗಿದೆ. ಉಭಯ ಆಟಗಾರರು ಪವರ್ ಪ್ಲೇ ತನಕ ಕ್ರೀಸ್ ಆಕ್ರಮಿಸಿಕೊಂಡರೆ ತಂಡದ ಬೃಹತ್ ಮೊತ್ತಕ್ಕೇನು ಅಡ್ಡಿಯಿಲ್ಲ. ಬೌಲಿಂಗ್‌ನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಕಗಿಸೊ ರಬಾಡ, ಆರ್‌ಸಿಬಿಯಿಂದ ಗುಜರಾತ್‌ಗೆ ಬಂದಿರುವ ವೇಗಿ ಮೊಹಮ್ಮದ್ ಸಿರಾಜ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದ್ದಾರೆ ಎಂಬ ಕುತೂಹಲವಿದೆ.
𝐁𝐚𝐬 𝐉𝐞𝐞𝐭𝐧𝐚 𝐇𝐚𝐢! 👊🏻#PunjabKings #IPL2025 #PBKSvGT pic.twitter.com/xmmnd4BmaM
— Punjab Kings (@PunjabKingsIPL) March 25, 2025
ಕಳೆದ ಬಾರಿ ಕೆಕೆಆರ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್‌ಗೆ ಚೊಚ್ಚಲ ಟ್ರೋಫಿಯೊಂದನ್ನು ಗೆಲ್ಲಿಸಿಕೊಡುದಾಗಿ ಟೂರ್ನಿಗೂ ಮುನ್ನ ಹೇಳಿದ್ದರು. ಈ ಮಾತನ್ನು ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಪಂಜಾಬ್ ತಂಡದಲ್ಲಿ ಅನುಭವಿ ಮತ್ತು ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರರ ದಂಡೆ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಯಜುವೇಂದ್ರ ಚಹಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇವರೆಲ್ಲಕ್ಲಿಕ್ ಆದರೆ ಮಾತ್ರ ಗೆಲುವು ಸಾಧ್ಯ.
ಇದನ್ನೂ ಓದಿ IPL 2025: ಗೋಯೆಂಕಾ ವೈಲೆಂಟ್; ಸಪ್ಪೆ ಮೋರೆ ಹಾಕಿ ನಿಂತ ಪಂತ್
ಸಂಭಾವ್ಯ ತಂಡಗಳು
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ.
ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕೊ ಜಾನ್ಸೆನ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.