SRH vs LSG: ಇಂದು ಲಕ್ನೋ ವಿರುದ್ಧ 300 ರನ್ ಬಾರಿಸಿತೇ ಹೈದರಾಬಾದ್?
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹೈದರಾಬಾದ್ ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಲಕ್ನೋ 3 ಪಂದ್ಯಗಳನ್ನು ಗೆದ್ದಿದೆ. ಹೈದರಾಬಾದ್ ಒಂದರಲ್ಲಿ ಜಯಿಸಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಮುಂದಿದ್ದರೂ ಈ ಬಾರಿ ತಂಡದ ಬೌಲಿಂಗ್ ಕಳಪೆಯಾಗಿರುವ ಕಾರಣ ಹಿಂದಿನಂತೆ ಹಿಡಿತ ಸಾಧಿಸುವುದು ಕೊಂಚ ಕಷ್ಟ.


ಹೈದರಾಬಾದ್: ಇಂದು(ಗುರುವಾರ) ನಡೆಯಲಿರುವ ಐಪಿಎಲ್(IPL 2025) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(SRH Vs LSG) ಮತ್ತು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಸೆಣಸಾಟ ನಡೆಸಲಿವೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ನಡೆಸಿದರೆ 300 ರನ್ ಬಾರಿಸುವುದು ಖಚಿತ ಎಂದು ಪಂದ್ಯ ಆರಂಭಕ್ಕೂ ಮುನ್ನವೇ ಕೆಲ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಹೀಗಾಗಿ ಈ ಇಂದಿನ ಪಂದ್ಯ ಬಾರೀ ಕುತೂಹಲ ಕೆರಳಿಸಿದೆ.
ಪಿಚ್ ರಿಪೋರ್ಟ್
ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಪಂದ್ಯವನ್ನು ಹೈ ಸ್ಕೋರಿಂಗ್ ನಿರೀಕ್ಷಿಸಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ.
ಮುಖಾಮುಖಿ
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹೈದರಾಬಾದ್ ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಲಕ್ನೋ 3 ಪಂದ್ಯಗಳನ್ನು ಗೆದ್ದಿದೆ. ಹೈದರಾಬಾದ್ ಒಂದರಲ್ಲಿ ಜಯಿಸಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಮುಂದಿದ್ದರೂ ಈ ಬಾರಿ ತಂಡದ ಬೌಲಿಂಗ್ ಕಳಪೆಯಾಗಿರುವ ಕಾರಣ ಹಿಂದಿನಂತೆ ಹಿಡಿತ ಸಾಧಿಸುವುದು ಕೊಂಚ ಕಷ್ಟ.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಕ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲಾ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ್ದರು. ಇಶನ್ ಕಿಶನ್ ಶತಕ ಬಾರಿಸಿದರೆ, ಟ್ರಾವಿಸ್ ಹೆಡ್ ಅರ್ಧಶತಕ ಬಾರಿಸಿದ್ದರು. ಉಳಿದಂತೆ ಅಭಿಷೇಕ್ ಶರ್ಮ, ನಿತೀಶ್ ಕುಮಾರ್ ರೆಡ್ಡಿ ಮತ್ತು ಹೆನ್ರಿಚ್ ಕ್ಲಾಸೆನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಈ ಪಂದ್ಯ ಕೂಡ ತವರಿನಲ್ಲೇ ನಡೆಯುತ್ತಿರುವ ಕಾರಣ ತವರಿನ ಲಾಭ ಕೂಡ ಇರಲಿದೆ. ಬೌಲಿಂಗ್‌ನಲ್ಲಿ ಶಮಿ, ಕಮಿನ್ಸ್, ಜಂಪಾ ಇದ್ದರೂ ಕೂಡ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಇವರು ತಮ್ಮ ಎಸೆತಗಳಿಗೆ ಸಾಣೆ ಹಿಡಿಯಲೇ ಬೇಕು.
ಇದನ್ನೂ ಓದಿ IPL 2025: ಮಹಿಳಾ ಭದ್ರತಾ ಅಧಿಕಾರಿಯ ತೊಡೆಗೆ ಬಡಿದ ಸಿಕ್ಸರ್ ಚೆಂಡು; ವಿಡಿಯೊ ವೈರಲ್
ಲಕ್ನೋ ತಂಡದಲ್ಲಿ ಅನುಭವಿ ಬೌಲರ್‌ಗಳು ಇಲ್ಲದಿದ್ದರೂ ಕೂಡ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಮ್, ಬದೋನಿ, ನಿಕೋಲಸ್ ಪೂರಣ್ ಮತ್ತು ಡೇವಿಡ್ ಮಿಲ್ಲರ್ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ನಾಯಕ ರಿಷಭ್ ಪಂತ್ ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದರೂ ಈ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಇರುವುದರಲ್ಲಿ ಶಾರ್ದೂಲ್ ಠಾಕೂರ್ ಮತ್ತು ರವಿ ಬಿಷ್ಣೋಯ್ ಇಬ್ಬರೆ ಅನುಭವಿ ಬೌಲರ್‌ಗಳು. ಗಂಟೆಗೆ 150 ರ ವೇಗದಲ್ಲಿ ಬೌಲಿಂಗ್ ನಡೆಸಬಲ್ಲ ಮಯಾಂಕ್ ಯಾದವ್ ಮತ್ತು ಅವೇಶ್ ಖಾನ್ ತಂಡ ಸೇರಿದರೆ ತಂಡದ ಬೌಲಿಂಗ್ ಚೇತರಿಕೆ ಕಾಣಲಿದೆ. ಆದರೆ ಇವರು ಗಾಯದಿಂದ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ.
ಸಂಭಾವ್ಯ ತಂಡಗಳು
ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಸಿಮರ್ಜೀತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.
ಲಕ್ನೋ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ದಿಗ್ವೇಶ್ ರಾಠಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಮಣಿಮಾರನ್ ಸಿದ್ಧಾರ್ಥ್.