ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VickyPedia Vikas: ಆರ್‌ಸಿಬಿ ಸೇರಿದ 'ನಾನು ನಂದಿನಿ' ಖ್ಯಾತಿಯ ವಿಕಿಪೀಡಿಯಾ ವಿಕಾಸ್!

RCB: ನಟ ಡ್ಯಾನಿಶ್ ಸೇಠ್ ಆರ್‌ಸಿಬಿಯ ಮಿಸ್ಟರ್‌ ನ್ಯಾಗ್ಸ್‌(Mr. Nags) ಇನ್‌ಸೈಡರ್ ಶೋ ಎಂಬ ಕಾರ್ಯಕ್ರಮದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ನೀಡಲು ಫ್ರಾಂಚೈಸಿ ವಿಕಿಪೀಡಿಯಾ ವಿಕಾಸ್(VickyPedia Vikas) ಅವರನ್ನು ಕರೆತಂದಿದೆ

ಆರ್‌ಸಿಬಿ ಸೇರಿದ 'ನಾನು ನಂದಿನಿ' ಖ್ಯಾತಿಯ ವಿಕಿಪೀಡಿಯಾ ವಿಕಾಸ್!

Profile Abhilash BC Mar 31, 2025 3:28 PM

ಬೆಂಗಳೂರು: ಕನ್ನಡಿಗರ ನೆಚ್ಚಿನ ಐಪಿಎಲ್‌(IPL 2025) ಫ್ರಾಂಚೈಸಿ ಆರ್‌ಸಿಬಿ(RCB) ತಂಡ ಪ್ರತಿ ಆವೃತ್ತಿಯಲ್ಲೂ ಒಂದಲ್ಲ ಒಂದು ಹೊಸ ಪ್ರಯೋಗದ ಮೂಲಕ ತನ್ನ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸುತ್ತಲೇ ಇರುತ್ತದೆ. ನಟ ಡ್ಯಾನಿಶ್ ಸೇಠ್ ಆರ್‌ಸಿಬಿಯ ಮಿಸ್ಟರ್‌ ನ್ಯಾಗ್ಸ್‌(Mr. Nags) ಇನ್‌ಸೈಡರ್ ಶೋ ಎಂಬ ಕಾರ್ಯಕ್ರಮದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ನೀಡಲು ಫ್ರಾಂಚೈಸಿ ವಿಕಿಪೀಡಿಯಾ ವಿಕಾಸ್(VickyPedia Vikas) ಅವರನ್ನು ಕರೆತಂದಿದೆ. ಸೋಮು ಅಂಕಲ್ ಹೆಸರಿನಲ್ಲಿ ವಿಕಾಸ್ ಆರ್‌ಸಿಬಿ ಅಭಿಮಾನಿಗಳಿಗೆ ರಂಜನೆ ನೀಡಲಿದ್ದಾರೆ. ವಿಕಾಸ್ ಅವರನ್ನು ಮೆಂಟರ್‌ ಮತ್ತು ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಆರ್‌ಸಿಬಿಗೆ ಸ್ವಾಗತಿಸಿದ್ದಾರೆ.

‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಹಾಡಿನ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ವಿಕಿಪೀಡಿಯಾ ವಿಕಾಸ್ ಹಲವಾರು ಇದೇ ರೀತಿಯ ಹಾಡುಗಳನ್ನು ರಚಿಸಿ ಖ್ಯಾತಿ ಗಳಿಸಿದ್ದರು. ಇದೀಗ ಆರ್‌ಸಿಬಿ ತಂಡವನ್ನು ಸೇರಿದ್ದು ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದ್ದಾರೆ.

ಈ ಕುರಿತು ವಿಡಿಯೊ ಹಂಚಿಕೊಂಡಿರುವ ಆರ್‌ಸಿಬಿ, 'ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ?'. ಸಮಾಚಾರ ಸೋಮು-ಚಾರ ಮುಂದುವರೆಯುತ್ತದೆ ಎಂದು ಬರೆದಿದೆ.

ಇದನ್ನೂ ಓದಿ IPL 2025: ಪಂದ್ಯ ಗೆದ್ದರೂ ದಂಡಕ್ಕೆ ಗುರಿಯಾದ ರಾಜಸ್ಥಾನ್‌ ನಾಯಕ

ಆರ್‌ಸಿಬಿ ಹಂಚಿಕೊಂಡ ವಿಡಿಯೊದಲ್ಲಿ ಸೋಮು ಅಂಕಲ್ ಆಗಿರುವ ವಿಕಾಸ್, ಸ್ಟೇಡಿಯಂನಲ್ಲಿ ನಿಂತು ತಂಡವನ್ನು ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಹಿಂದೆ ನಿಂತಿರುವ ಭದ್ರತಾ ಸಿಬ್ಬಂದಿ ಅಲ್ಲಾ ಸರ್, ಇವರು ಆರ್‌ಸಿಬಿಗೆ ಬರಲು ಯಾರ್ ಯಾರೋ ತುಂಬಾ ಕಷ್ಟ ಪಡುತ್ತಾರೆ. ಹೀಗಿರುವಾಗ ಇಷ್ಟು ಸುಲಭವಾಗಿ ಅಂಕಲ್ ಹೇಗೆ ಬಂದ್ರು ಅಂತ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿ, ಮೊನ್ನೆ ಅಂಕಲ್ ಜತೆ ಮೀಟಿಂಗ್‌ನಲ್ಲಿ ಏನಾಯ್ತು ಅಂತ ಗೊತ್ತಿಲ್ವಾ ನಿಮಗೆ.. ಇಲ್ಲ ಏನಾಯ್ತು? ಎನ್ನುತ್ತಾರೆ.



ಸಭೆ ನಡೆಯುತ್ತಿದ್ದ ಜಾಗಕ್ಕೆ ಬರುವ ಸೋಮು ಅಂಕಲ್, ನಾನು ಆರ್‌ಸಿಬಿಗೆ ಸೇರಬೇಕು ಅಂತಾರೆ. ಅದಕ್ಕೆ ಅಲ್ಲಿದ್ದವರು ನಿಮಗೆ ಆರ್‌ಸಿಬಿ ಬಗ್ಗೆ ಏನು ಗೊತ್ತು ಎಂದು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ವೇಳೆ ಸೋಮು ಅಂಕಲ್, ನನಗೆ ಆರ್‌ಸಿಬಿ ಬಗ್ಗೆ ಎಲ್ಲ ಗೊತ್ತು. ಏನ್ ಬೇಕಾದರು ಕೇಳಿ ಅಂತಾರೆ. ಆಗ ಅಲ್ಲಿದ್ದವರೆಲ್ಲರೂ RCB ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೋಮು ಅಂಕಲ್ ಫಟಾ ಫಟ್ ಅಂತ ಉತ್ತರ ಕೊಡುವ ಮೂಲಕ ಅಲ್ಲಿದ್ದವರನ್ನು ದಂಗಾಗುವಂತೆ ಮಾಡುತ್ತಾರೆ. ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ. ವೆಲ್ ಕಮ್ ಟು ಆರ್‌ಸಿಬಿ ಎಂದು ಫ್ರಾಂಚೈಸಿಗೆ ಸೇರ್ಪಡೆ ಮಾಡುತ್ತಾರೆ. ಸದ್ಯ ಆರ್‌ಸಿಬಿ ಕುಟುಂಬ ಸೇರಿರುವ ವಿಕಾಸ್‌ ಯಾವೆಲ್ಲ ಹೊಸ ಕಂಟೆಂಟ್‌ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.