BCCI central contract: ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು?, ಆಟಗಾರರಿಗೆ ಸಿಗುವ ಸೌಲಭ್ಯಗಳೇನು?
What is a BCCI central contract?: ಬಿಸಿಸಿಐ ಕೇಂದ್ರ ಒಪ್ಪಂದದಡಿಯಲ್ಲಿರುವ ಯಾವುದೇ ಆಟಗಾರನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉಚಿತವಾಗಿ ತಮ್ಮ ಚೇತರಿಕೆಯನ್ನು ಮಾಡಿಕೊಳ್ಳಬಹುದು. ಅವರು ಪ್ರಯಾಣ ಮರುಪಾವತಿ ಮತ್ತು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವಿಶ್ವ ದರ್ಜೆಯ ತರಬೇತಿ ಸೌಲಭ್ಯವನ್ನು ಸಹ ಪಡೆಯುತ್ತಾರೆ.


ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೇಂದ್ರೀಯ(BCCI central contract) ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟವಾಗುವ ನಿರೀಕ್ಷೆಯಿದ್ದು, ಬಿಸಿಸಿಐ(BCCI ) ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಮತ್ತೆ ಮರಳುವ ನಿರೀಕ್ಷೆ ಇದೆ. ಇದೀಗ ಈ ಪಟ್ಟಿ ಪ್ರಕಟಕ್ಕೂ ಮುನ್ನ ಬಿಸಿಸಿಐ ಕೇಂದ್ರ ಒಪ್ಪಂದ(What is a BCCI central contract?) ಎಂದರೇನು? ಶ್ರೇಣಿಗಳು, ಸಂಬಳ, ಆಟಗಾರರಿಗೆ ಸಿಗುವ ಪ್ರಯೋಜನಗಳೇನು ಎನ್ನುವ ಬಗ್ಗೆ ತಿಳಿಯೋಣ.
ಬಿಸಿಸಿಐ ಕೇಂದ್ರ ಒಪ್ಪಂದ ಎಂದರೆ, ಆಟಗಾರರನ್ನು ವಾರ್ಷಿಕವಾಗಿ ಉಳಿಸಿಕೊಳ್ಳುವ ವ್ಯವಸ್ಥೆಯಾಗಿದೆ. ಇದು ಕ್ರಿಕೆಟಿಗರ ಪ್ರದರ್ಶನ ಮತ್ತು ಭಾರತೀಯ ಕ್ರಿಕೆಟ್ ವ್ಯವಸ್ಥೆಗೆ ನೀಡಿದ ಕೊಡುಗೆಗಳ ಆಧಾರದ ಮೇಲೆ ವರ್ಗೀಕರಿಸುತ್ತದೆ. ಆಟಗಾರರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಎ+, ಎ, ಬಿ ಮತ್ತು ಸಿ. ಕಳೆದ ವರ್ಷ, ಒಟ್ಟು 30 ಕ್ರೀಡಾಪಟುಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿಯು ಕೇಂದ್ರ ಒಪ್ಪಂದಗಳನ್ನು ನೀಡಿತ್ತು.
ಬಿಸಿಸಿಐ ಕೇಂದ್ರ ಒಪ್ಪಂದದಡಿಯಲ್ಲಿರುವ ಯಾವುದೇ ಆಟಗಾರನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉಚಿತವಾಗಿ ತಮ್ಮ ಚೇತರಿಕೆಯನ್ನು ಮಾಡಿಕೊಳ್ಳಬಹುದು. ಅವರು ಪ್ರಯಾಣ ಮರುಪಾವತಿ ಮತ್ತು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವಿಶ್ವ ದರ್ಜೆಯ ತರಬೇತಿ ಸೌಲಭ್ಯವನ್ನು ಸಹ ಪಡೆಯುತ್ತಾರೆ.
ಆಟಗಾರರು ಎಷ್ಟು ಹಣ ಗಳಿಸುತ್ತಾರೆ?
A+: ರೂ. 7 ಕೋಟಿ
A: ರೂ. 5 ಕೋಟಿ
B: ರೂ. 3 ಕೋಟಿ
C: ರೂ. 1 ಕೋಟಿ
ಬಿಸಿಸಿಐ ಪಂದ್ಯ ಶುಲ್ಕ ರಚನೆ
ಟೆಸ್ಟ್: ರೂ. 15 ಲಕ್ಷ
ಏಕದಿನ: ರೂ. 6 ಲಕ್ಷ
ಟಿ20ಐ: ರೂ. 3 ಲಕ್ಷ
ಬಿಸಿಸಿಐ ಕೇಂದ್ರ ಒಪ್ಪಂದ ಅರ್ಹತೆ
ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಗೆ ಸೇರ್ಪಡೆಯಾಗಲು ಇರುವ ಮಾನದಂಡವೆಂದರೆ, 3 ಟೆಸ್ಟ್ ಪಂದ್ಯಗಳು ಅಥವಾ 8 ಏಕದಿನ ಪಂದ್ಯಗಳು ಅಥವಾ 10 ಟಿ20 ಗಳಲ್ಲಿ ಭಾಗವಹಿಸಿರುವ ಆಟಗಾರರಿಗೆ ಕೇಂದ್ರ ಒಪ್ಪಂದವನ್ನು ನೀಡಲಾಗುತ್ತದೆ. ನಿವೃತ್ತಿಯಾದ ಆಟಗಾರರಿಗೆ ಅವಕಾಶವಿಲ್ಲ.
ಇದನ್ನೂ ಓದಿ BCCI Contracts: ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಟಾರ್ ಆಟಗಾರರಿಗೆ ಹಿಂಬಡ್ತಿ ಸಾಧ್ಯತೆ!
2023-24ರಲ್ಲಿ ಬಿಸಿಸಿಐ ಒಪ್ಪಂದ ಮಾಡಿಕೊಂಡ ಆಟಗಾರರು
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ: ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ: ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್, ಸರ್ಫರಾಜ್ ಜುರೆಲ್ ಮತ್ತು ಧ್ರುವ್ ಜುರೆಲ್.