ಅಮೆರಿಕದಿಂದ ಬಂದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು ಮೂಲದ 43 ವರ್ಷದ ವೃತ್ತಿಪರರಾದ ಶ್ರೀ ಧೀರೇನ್‌ರಿಗೆ ರಜೆಯು ದುಃಸ್ವಪ್ನವಾಯಿತು. ರಜಾ ದಿನಗಳಲ್ಲಿ ಧೀರೇನ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭೀಕರವಾಗಿ ಬಿದ್ದ ಕಾರಣ ಅವರ ಕಾಲು ತೀವ್ರ ವಾಗಿ ಮುರಿದು, ಕಣಕಾಲು ಸ್ಥಾನಭ್ರಷ್ಟವಾಗಿ, ಬೆಂಬಲವಿಲ್ಲದೆ ತೂಗಾಡುತ್ತಿತ್ತು. ವಿಪರೀತ ನೋವಿ ನೊಂದಿಗೆ ವಿದೇಶದಲ್ಲಿದ್ದ ಸೀಮಿತ ಆಯ್ಕೆಗಳ ಕಾರಣ, ಶ್ರೀ ಧೀರೇನ್ ಚಿಕಿತ್ಸೆಗಾಗಿ ಭಾರತಕ್ಕೆ ಹಿಂದಿರು ಗಲು ನಿರ್ಧರಿಸಿದರು.