ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಿಗರೇಟಿನಾಕಾರದ ಹೇರ್‌ಕ್ಲಿಪ್‌ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್; ನೆಟ್ಟಿಗರು ಏನಂದ್ರು?

ಯುವತಿಯೊಬ್ಬಳು ಸಿಗರೇಟ್ ಆಕಾರದ ಹೇರ್ ಕ್ಲಿಪ್ ಅನ್ನು ಧರಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದು ಅನೇಕ ನೆಟ್ಟಿಗರ ಗಮನಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಡಿಸೈನ್‍ ನನಗೆ ತುಂಬಾ ಇಷ್ಟವಾಗಿದೆ ಎಂದು ನೆಟ್ಟಿಗರು ಕೂಡ ಕಾಮೆಂಟ್‌ ಮಾಡಿದ್ದಾರೆ.

ಅರೇ...ಇದೇನಿದು ಹೊಸ ವಿನ್ಯಾಸದ ಹೇರ್‌ ಕ್ಲೀಪ್‌! ವಿಡಿಯೊ ನೋಡಿ

Profile pavithra Apr 9, 2025 6:45 PM

ಇದು ಫ್ಯಾಷನ್ ಜಮಾನ! ಜನರು ಫ್ಯಾಷನ್‍ ಹೆಸರಿನಲ್ಲಿ ಚಿತ್ರ ವಿಚಿತ್ರ ಪ್ರಯೋಗ ಮಾಡುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ನಾನಾ ವಿನ್ಯಾಸದ ಡ್ರೆಸ್‍ಗಳು, ಇಯರಿಂಗ್ಸ್‌, ಹೇರ್‌ ಕ್ಲಿಪ್‍ಗಳು ಮುಂತಾದವುಗಳು ಟ್ರೆಂಡ್‌ ಸೃಷ್ಟಿಸುತ್ತವೆ. ಇದೀಗ ಬಾಯಲ್ಲಿಟ್ಟು ಸೇದುವ ಸಿಗರೇಟನ್ನು ತಲೆಯಲ್ಲಿ ಇಟ್ಟುಕೊಳ್ಳುವ ಹೇರ್‌ ಕ್ಲಿಪ್‍ ಆಗಿ ವಿನ್ಯಾಸಗೊಳಿಸಲಾಗಿದೆ. ಅರೆ...ಇದೇನಿದು ಎಂದು ಆಶ್ಚರ್ಯ ಪಡುತ್ತಿದ್ದೀರಾ....? ಹೌದು ಯುವತಿಯೊಬ್ಬಳು ಸಿಗರೇಟ್ ಆಕಾರದ ಹೇರ್ ಕ್ಲಿಪ್ ಅನ್ನು ಧರಿಸಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದು ಅನೇಕ ನೆಟ್ಟಿಗರ ಗಮನ ಸೆಳೆದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ, ಯುವತಿಯೊಬ್ಬಳು ಹೇರ್‌ ಕ್ಲಿಪ್‍ವೊಂದನ್ನು ಬಳಸಿ ಕೂದಲನ್ನು ಕಟ್ಟಿ ಕೊಳ್ಳುವುದು ಸೆರೆಯಾಗಿದೆ. ಅವಳು ಸ್ಟೈಲಿಶ್ ಆಗಿ ಕಾಣಲು ಸಾಮಾನ್ಯ ಕ್ಲಿಪ್‌ನ ಬದಲು ತನ್ನ ಕೂದಲಿಗೆ ಸಿಗರೇಟ್ ಆಕಾರದ ಹೇರ್‌ ಕ್ಲಿಪ್‌ ಅನ್ನು ಹಾಕಿದ್ದಾಳೆ. ಇದು ನೋಡುವುದಕ್ಕೂ ವಿಭಿನ್ನವಾಗಿದೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, 25,000ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ಹೇರ್ ಕ್ಲಿಪ್ ಅನ್ನು ಖರೀದಿಸುವ ಆಸಕ್ತಿಯನ್ನು ವ್ಯಕ್ತಪಡಿಸಿ, “ಇದನ್ನು ಆರ್ಡರ್ ಮಾಡುವುದು ಹೇಗೆ? ಕ್ಯಾಶ್ ಆನ್ ಡೆಲಿವರಿ ಲಭ್ಯವಿದೆಯೇ?" ಎಂದು ಕೇಳಿದ್ದಾರೆ. ಇನ್ನೊಬ್ಬರು, “ಈ ಡಿಸೈನ್‍ ನನಗೆ ತುಂಬಾ ಇಷ್ಟವಾಗಿದೆ” ಎಂದಿದ್ದಾರೆ.

ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಐಪಾಡ್ ಶಫಲ್ ಅನ್ನು ಹೇರ್ ಕ್ಲಿಪ್ ಮತ್ತು ಇಯರಿಂಗ್ಸ್ ಆಗಿ ಧರಿಸಿರುವ ಹಲವಾರು ವಿಡಿಯೊಗಳು ವೈರಲ್ ಆಗಿದ್ದವು. ಐಪಾಡ್ ಶಫಲ್ ಹೇರ್‌ಕ್ಲಿಪ್‌ನ ವಿನ್ಯಾಸವನ್ನು ಹೊಂದಿತ್ತು. ಇದನ್ನು ಸ್ಪೇಸ್ ಗ್ರೇ, ಗೋಲ್ಡ್, ಸಿಲ್ವರ್, ಗುಲಾಬಿ, ನೀಲಿ ಮತ್ತು ಕೆಂಪು ಸೇರಿದಂತೆ ಹಲವಾರು ಫಂಕಿ ಬಣ್ಣಗಳಲ್ಲಿ ತಯಾರಿಸಲಾಗಿತ್ತು. ಫ್ಯಾಷನ್ ಪರಿಕರಗಳಾಗಿ ಐಪಾಡ್ ಶಫಲ್ ಅನ್ನು ಪ್ರದರ್ಶಿಸುವ ವಿಡಿಯೊಗಳು 2 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 2,68,000 ಲೈಕ್ಸ್‌ ಗಳಿಸಿತ್ತು.

ಈ ಸುದ್ದಿಯನ್ನೂ ಓದಿ:Viral Video: ಶಾಲಾ ಮಕ್ಕಳ ಬ್ಯಾಗ್‍ನಲ್ಲಿ ಕಾಂಡೋಮ್, ಚೂರಿಗಳು; ಬೆಚ್ಚಿಬಿದ್ದ ಶಿಕ್ಷಕರು

ಐಪಾಡ್ ಶಫಲ್ಸ್ ಮಾತ್ರವಲ್ಲದೆ ಇತರ ರೆಟ್ರೊ ಗ್ಯಾಜೆಟ್‍ಗಳನ್ನು ಸಹ ಫ್ಯಾಷನ್ ಪರಿಕರಗಳಾಗಿ ಬಳಸಲಾಗುತ್ತಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ವೈರ್ಡ್ ಇಯರ್ ಫೋನ್‍ಗಳನ್ನು ಹೇರ್ ಕ್ಲಿಪ್ ಆಗಿ ಬಳಸಿದ್ದರು. ಇದು ಕೂಡ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿತ್ತು.