ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಲಾ ಮಕ್ಕಳ ಬ್ಯಾಗ್‍ನಲ್ಲಿ ಕಾಂಡೋಮ್, ಚೂರಿಗಳು; ಬೆಚ್ಚಿಬಿದ್ದ ಶಿಕ್ಷಕರು

ನಾಸಿಕ್‍ನ ಘೋಟಿಯ ಶಾಲೆಯೊಂದರಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಕಾಂಡೋಮ್ ಪ್ಯಾಕೆಟ್‍ಗಳು, ಚಾಕುಗಳು, ಪ್ಲೇಯಿಂಗ್ ಕಾರ್ಡ್‍ಗಳು ಮತ್ತು ಇತರ ಹಲವಾರು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.

ಶಾಲಾ ಬ್ಯಾಗ್‌ನಲ್ಲಿ ಕಾಂಡೋಮ್‌! ಏನಿದು ಘಟನೆ?

Profile pavithra Apr 8, 2025 9:23 PM

ಮುಂಬೈ: ಶಾಲೆಗೆ ಹೋಗುವ ಮಕ್ಕಳು ಬ್ಯಾಗ್‍ನಲ್ಲಿ ಪುಸ್ತಕ, ಪೆನ್ನು,ಪೆನ್ಸಿಲ್‌ ಇರುತ್ತದೆ. ಅಬ್ಬಬ್ಬಾ ಅಂದ್ರೆ ಚಾಕೋಲೆಟ್‌, ಬಿಸ್ಕೇಟ್‌ ಕಂಡುಬರುತ್ತದೆ. ಆದರೆ ಇದೀಗ ನಾಸಿಕ್‍ನ ಘೋಟಿಯ ಶಾಲೆಯೊಂದರಲ್ಲಿ 7ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಕಾಂಡೋಮ್ ಪ್ಯಾಕೆಟ್‍ಗಳು, ಚಾಕುಗಳು, ಪ್ಲೇಯಿಂಗ್ ಕಾರ್ಡ್‍ಗಳು ಮತ್ತು ಇತರ ಹಲವಾರು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ.

ಶಾಲಾ ಮಕ್ಕಳ ಬ್ಯಾಗ್‌ನ ವಿಡಿಯೊ ಇಲ್ಲಿದೆ ನೋಡಿ...



ಘಟನೆಯ ಹಿಂದಿನ ಕಾರಣವೇನು?

ಅಪರಾಧ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳದಂತೆ ವಿದ್ಯಾರ್ಥಿಗಳನ್ನು ತಡೆಯಲು ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರು ಪ್ರತಿದಿನ ಅವರ ಬ್ಯಾಗ್‍ಗಳನ್ನು ಪರಿಶೀಲಿಸುವ ಪದ್ಧತಿ ರೂಢಿಸಿಕೊಂಡಿದ್ದರಂತೆ. ವಿದ್ಯಾರ್ಥಿಗಳ ಬ್ಯಾಗ್‍ಗಳನ್ನು ಪರಿಶೀಲಿಸುವ ಶಾಲೆಯ ಉಪಕ್ರಮಕ್ಕೆ ಪೋಷಕರು ಕೂಡ ಒಪ್ಪಿಗೆ ಸೂಚಿಸಿದ್ದರಂತೆ. ಹೀಗಾಗಿ ಪ್ರತಿದಿನ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗಳ ಬ್ಯಾಗ್‍ಗಳನ್ನು ಪರಿಶೀಲಿಸುತ್ತಿದ್ದಾರಂತೆ. ಆ ವೇಳೆ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‍ಗಳಲ್ಲಿ ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿವೆ. ವಿದ್ಯಾರ್ಥಿಗಳ ಪೋಷಕರನ್ನು ಶಿಕ್ಷಕರು ಶಾಲೆಗೆ ಕರೆದು ಈ ಬಗ್ಗೆ ವಿವರಿಸಿದ್ದಾರೆ. ಶಿಕ್ಷಕರ ಜಾಗೃತಿಯಿಂದಾಗಿ ಈ ಘಟನೆ ಬೆಳಕಿಗೆ ಬಂದಿದ್ದರೂ, ಅಂತಹ ವಸ್ತುಗಳು ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಕಂಡುಬರುತ್ತಿರುವುದು ಕಳವಳಕಾರಿ ವಿಚಾರ ಎನ್ನುತ್ತಾರೆ ಶಿಕ್ಷಕರು.

ವಿದ್ಯಾರ್ಥಿಗಳ ಬ್ಯಾಗ್‍ಗಳಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರುವುದು ಶಿಕ್ಷಣ ಕ್ಷೇತ್ರವನ್ನು ಬೆಚ್ಚಿ ಬೀಳಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳನ್ನು ಶಿಸ್ತುಬದ್ಧಗೊಳಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ. ಪೋಷಕರು ತಮ್ಮ ಮಗುವಿನ ಚೀಲವನ್ನು ಮನೆಯಲ್ಲಿ ಪರಿಶೀಲಿಸಬೇಕೆಂದು ವಿನಂತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಶ್ರೀಮಂತ ಪುರುಷರನ್ನು ಬುಟ್ಟಿಗೆ ಹಾಕೋಳೋದು ಹೇಗೆ? ಸೋಶಿಯಲ್‌ ಮೀಡಿಯಾದಲ್ಲಿ ಈ ಲವ್‌ಗುರುದ್ದೇ ಫುಲ್‌ ಹವಾ!

ಈ ಹಿಂದೆ ಬೆಂಗಳೂರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‍ಗಳನ್ನು ಪರಿಶೀಲಿಸುವಾಗ ಕಾಂಡೋಮ್, ಗರ್ಭ ನಿರೋಧಕಗಳು, ಸಿಗರೇಟುಗಳು ಪತ್ತೆಯಾಗಿದ್ದವು. ಹಾಗಾಗಿ ಆ ವಿದ್ಯಾರ್ಥಿಗಳನ್ನು 10 ದಿನಗಳ ರಜೆಯ ಮೇಲೆ ಹೊರಗೆ ಕಳುಹಿಸಲು ಶಾಲೆಗಳು ನಿರ್ಧರಿಸಿತ್ತು. ಮತ್ತು ಮಾಹಿತಿಯನ್ನು ಗೌಪ್ಯವಾಗಿಡಲು ಮತ್ತು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿತ್ತು.