Viral Video: ನಡುರಾತ್ರಿಯಲ್ಲಿ ಬರ್ತಾಳೆ..ಡೋರ್ ತಟ್ಟುತ್ತಾಳೆ- ಮಹಿಳೆಯ ಶಾಕಿಂಗ್ ವಿಡಿಯೋ ವೈರಲ್
ನಡುರಾತ್ರಿಯಲ್ಲಿಯೇ ಮಹಿಳೆಯೊಬ್ಬರು ಭಯಾನಕ ರೀತಿಯಲ್ಲಿ ಸಂಚರಿಸಿ ಮನೆಯ ಡೋರ್‌ಬೆಲ್‌ಗಳನ್ನು ಬಾರಿಸುತ್ತಾಳೆ. ಈ ಆಘಾತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇಲ್ಲಿನ ಕಾಲೋನಿ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಈ ಘಟನೆ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು ಈ ಬಗ್ಗೆ ತನಿಖೆಯು ನಡೆಯುತ್ತಿದೆ.


ಮಧ್ಯಪ್ರದೇಶ: ಕಗ್ಗತ್ತಲ್ಲ ರಾತ್ರಿಯಲ್ಲಿ ಮಹಿಳೆಯೊಬ್ಬಳ ಚಲನವಲನದ ಭಯಾನಕ ವಿಡಿಯೊದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ. ಮಧ್ಯಪ್ರದೇಶದ ಗ್ವಾಲಿಯರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಕಾಲೋನಿಯಲ್ಲಿ ಸುತ್ತಮುತ್ತ ವಾಸಿಸುವ ಜನರು ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ. ನಡುರಾತ್ರಿಯಲ್ಲಿಯೇ ಮಹಿಳೆಯೊಬ್ಬರು ಭಯಾನಕ ರೀತಿಯಲ್ಲಿ ಸಂಚರಿಸಿ ಮನೆಯ ಡೋರ್‌ಬೆಲ್‌ಗಳನ್ನು ಬಾರಿಸುತ್ತಾಳೆ. ಈ ಆಘತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇಲ್ಲಿನ ಕಾಲೋನಿ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಈ ಘಟನೆ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು ಈ ಬಗ್ಗೆ ತನಿಖೆಯು ನಡೆಯುತ್ತಿದೆ.
ವಿಡಿಯೊದಲ್ಲಿ ಮಹಿಳೆಯು ಕೆಂಪು ಬಣ್ಣದ ಉಡುಗೆಯನ್ನು ತೊಟ್ಟಿದ್ದು ಮುಖ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ, ಭಯಾನಕ ರಾತ್ರಿಯಲ್ಲಿ ಮಹಿಳೆಯು ದೆವ್ವದಂತೆ ಬೀದಿ ಬೀದಿ ಅಡ್ಡಾಡಿ ಬಳಿಕ ಮನೆಗಳ ಡೋರ್ ಬೆಲ್ ಮಾಡುವ ದೃಶ್ಯವನ್ನು ಕಾಣಬಹುದು.ಈ ದೃಶ್ಯವನ್ನು ನೋಡಿ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದು ಈ ಕಾಲೋನಿಯಲ್ಲಿರುವ ಉದ್ಯಾನವನದ ಸುತ್ತಮುತ್ತ ವಾಸಿಸುವ ಜನರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದಾಗಿ ಆ ಸ್ಥಳದ ಕಡೆ ಓಡಾಡಲು ಊರಿನ ಜನರ ಭಯ ಪಡುತ್ತಿದ್ದಾರೆ. ಆತ್ಮ ಸಂಚಾರ ಅಂತ ಗ್ರಾಮದ ಜನರಲ್ಲಿ ವದಂತಿ ಹರಿದಾಡುತ್ತಿದೆ. ಸಿಸಿಟಿವಿ ದೃಶ್ಯ ನೋಡಿ ಹಗಲಿನಲ್ಲಿಯೂ ಸಂಚರಿಸಲು ಜನ ಭಯ ಪಡುತ್ತಿದ್ದಾರೆ.
ಮಹಿಳೆ ಡೋಲ್ ಬೆಲ್ ಮಾಡುತ್ತಿರುವ ವಿಡಿಯೊ ಇಲ್ಲಿದೆ
#WATCH | MP: Mysterious Woman Caught Ringing Bell Of Residences Late Night In Gwalior#MadhyaPradesh #gwalior #MPNews pic.twitter.com/ruJ2F6P8BZ
— Free Press Madhya Pradesh (@FreePressMP) March 22, 2025
ವೀಡಿಯೊದಲ್ಲಿನ ಮತ್ತೊಂದು ಭಯಾನಕ ದೃಶ್ಯ ಅಂದ್ರೆ ಮಹಿಳೆಯ ವಿಚಿತ್ರ ಚಲನವಲನ ಕಂಡು ಬೀದಿಯಲ್ಲಿದ್ದ ಸಾಕು ಪ್ರಾಣಿಗಳು ಇದ್ದಕ್ಕಿದ್ದಂತೆ ಓಡುವ ದೃಶ್ಯ ಕಾಣಬಹುದು. ಹೀಗಾಗಿ ಇದು ಮತ್ತಷ್ಟು ನಿಗೂಢತೆಯನ್ನು ಉಂಟು ಮಾಡುತ್ತಿದೆ. ಕೆಲವರು ಈ ದೃಶ್ಯ ಕಂಡು ಯಾವುದೋ ಅಗೋಚರ ಶಕ್ತಿ ಇರುವಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಮಧ್ಯರಾತ್ರಿ ನಡೆದ ಈ ಭಯಾನಕ ದೃಶ್ಯ ಕಂಡ ಜನ ಭಯದಲ್ಲೇ ರಾತ್ರಿ ಕಳೆದಿದ್ದಾರೆ. ಕೈಯಲ್ಲಿ ಟಾರ್ಚ್, ಮೊಬೈಲ್ ಇಟ್ಟುಕೊಂಡು ಜೊತೆಗೆ ಮನೆ ಮಂದಿಯೆಲ್ಲ ಕಣ್ಣು ಬಿಟ್ಟುಕೊಂಡು ಬೆಳಗಾಗಿಸಿದ್ದಾರೆ. ಅಷ್ಟಕ್ಕೂ ಮಹಿಳೆ ಜೊತೆ ಮನೆಯೊಳಗಿರುವ ಜನರು ಮಾತನಾಡಿಸಿದ್ದರೂ ಮಹಿಳೆ ಪ್ರತಿ ಕ್ರಿಯೆ ನೀಡದೆ ಮನೆಯ ಡೋರ್ ಬೆಲ್ ಮಾಡಿ ತೆರಳಿದ್ದಾಳೆ. ಹಾಗಾಗಿ ಇಲ್ಲಿನ ಜನರು ದೆವ್ವ ಇದಿಯಾ? ದೆವ್ವ ಇಲ್ಲ ಅಂತಾದರೆ ಜನ ರಾತ್ರಿ ಕಂಡಿದ್ದೇನು? ಎಂದು ಈ ದೃಶ್ಯ ಬಗ್ಗೆ ಯೋಚಿಸುವಂತೆ ಮಾಡಿದೆ.
ಇದನ್ನು ಓದಿ: Viral Video: ಚಲಿಸುತ್ತಿದ್ದ ಟ್ರೇನ್‌ಗೆ ಎಸ್‌ಯುವಿ ಕಾರು ಡಿಕ್ಕಿ; ಸಿಐಎಸ್ಎಫ್ ಪೊಲೀಸರು ಪ್ರಾಣಾಪಾಯದಿಂದ ಪಾರು, ವಿಡಿಯೋ ಇದೆ
ಸದ್ಯ ಕಾಲೋನಿ ಮತ್ತು ಸುತ್ತ ಮುತ್ತಲಿನ ಜನರು ಸೂರ್ಯಾಸ್ತದ ನಂತರ ಮನೆಯಿಂದ ಹೊರ ಬರುವುದನ್ನು ತಪ್ಪಿಸಲು ಪ್ರಾರಂಭಿಸಿದ್ದು ಇಲ್ಲಿ ವಾಸಿ ಸುವ ಜನರು ಕೂಡ ಕತ್ತಲಾದ ನಂತರ ಆ ಪ್ರದೇಶಕ್ಕೆ ಹೋಗಲು ಭಯ ಪಡುತ್ತಿದ್ದಾರೆ.ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಈ ಬಗ್ಗೆ ಬಳಕೆದಾರರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ವಿಡಿಯೊ ನೋಡಿ ಇದು ಆತ್ಮ ನಡೆದಾಡುವ ದೃಶ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ಮಹಿಳೆ ನಡೆದಾಡುವ ದೃಶ್ಯವೇ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.