Viral Video: ಚೀನಾ ವಿರುದ್ಧ ಸುಂಕ ಸಮರದ ಬೆನ್ನಲ್ಲೇ ಟ್ರಂಪ್ ಹಳೆಯ ವಿಡಿಯೊ ಫುಲ್ ವೈರಲ್- ಅಂತಹದ್ದೇನಿದೆ ಇದರಲ್ಲಿ?
Viral Video: ಚೀನಾ ಮತ್ತು ಅಮೆರಿಕ ಮಧ್ಯೆ ಸುಂಕ ಸಮರ ಪ್ರಾರಂಭವಾಗಿರುವ ಮಧ್ಯೆಯೇ ಇದೀಗ ಟ್ರಂಪ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಮೇಡ್ ಇನ್ ಚೀನಾದ ಬಗ್ಗೆ ಟ್ರಂಪ್ ಬಳಿ ಸಂದರ್ಶನಕಾರ ಡೇವಿಡ್ ಲೆಟರ್‌ಮ್ಯಾನ್ ಪ್ರಶ್ನಿಸಿರುವುದು, ಇದಕ್ಕೆ ಟ್ರಂಪ್ ಅವರು ನೀಡಿರುವ ಪ್ರತಿಯೆಗೆ ಸಾಕಷ್ಟು ಮಂದಿ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ.


ವಾಷಿಂಗ್ಟನ್: ಚೀನಾ (China) ಮತ್ತು ಅಮೆರಿಕ (america) ಮಧ್ಯೆ ಸುಂಕ ಸಮರ (Tariff War) ಪ್ರಾರಂಭವಾಗಿರುವ ಮಧ್ಯೆಯೇ ಇದೀಗ ಡೊನಾಲ್ಡ್ ಟ್ರಂಪ್ (Donald Trump) ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗುತ್ತಿವೆ. ಇದರಲ್ಲಿ ಮೇಡ್ ಇನ್ ಚೀನಾದ ಬಗ್ಗೆ ಡೊನಾಲ್ಡ್ ಟ್ರಂಪ್ ಬಳಿ ಸಂದರ್ಶನಕಾರ ಡೇವಿಡ್ ಲೆಟರ್‌ಮ್ಯಾನ್ ಪ್ರಶ್ನಿಸಿರುವುದು, ಇದಕ್ಕೆ ಟ್ರಂಪ್ ಅವರು ನೀಡಿರುವ ಪ್ರತಿಯೆಗೆ ಸಾಕಷ್ಟು ಮಂದಿ ಕಾಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಅಮೆರಿಕ ವಿಧಿಸಿದ ಸುಂಕಕ್ಕೆ ಪ್ರತಿಯಾಗಿ ಚೀನಾವು ಸುಂಕ ವಿಧಿಸಿ ತೆರಿಗೆ ಸಮರ ಪ್ರಾರಂಭಿಸಿತ್ತು. ಹೀಗಾಗಿ ಅಮೆರಿಕ ಬುಧವಾರದಿಂದ ಜಾರಿಯಾಗುವಂತೆ ಚೀನಾ ಸರಕುಗಳಿಗೆ ಶೇ. 104ರಷ್ಟು ಸುಂಕ ಹೆಚ್ಚಳವನ್ನು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದಲೇ ಇದು ಜಾರಿಯಾಗಿದೆ. ಬುಧವಾರದಿಂದ ಇದರ ಸಂಗ್ರಹ ಪ್ರಾರಂಭವಾಗಲಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆಯೇ ಡೇವಿಡ್ ಲೆಟರ್‌ಮ್ಯಾನ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಳೆಯ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಲ್ಲಿ ಲೆಟರ್‌ಮ್ಯಾನ್ ಅವರು ಟ್ರಂಪ್ ಬಳಿ ಬ್ರ್ಯಾಂಡೆಡ್ ಉತ್ಪನ್ನಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಟ್ರಂಪ್ "ಅಮೆರಿಕನ್ ಖರೀದಿ" ಎಂದು ಹೇಳಿದರೂ ಅವುಗಳಲ್ಲಿ ಹಲವು ಚೀನಾ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ತಯಾರಿಸಲ್ಪಟ್ಟಿವೆ ಎಂದಿದ್ದಾರೆ.
ಅಲ್ಲದೇ ಸಂದರ್ಶನದಲ್ಲಿ ಲೆಟರ್‌ಮ್ಯಾನ್ ಟ್ರಂಪ್ ಅವರ ಟೈ ಎಲ್ಲಿ ತಯಾರಿಸಲಾಗಿದೆ ಎಂದು ನೇರವಾಗಿ ಕೇಳಿದ್ದಾರೆ. ಅದಕ್ಕೆ ಅವರು ಅದರ ಲೇಬಲ್ ನೋಡಿ ವಿಚಿತ್ರವಾದ ನಗುವಿನೊಂದಿಗೆ "ಮೇಡ್ ಇನ್ ಚೀನಾ" ಎನ್ನುತ್ತಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ನಗುವಿಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹಲವಾರು ಮಂದಿ ವ್ಯಂಗ್ಯವಾಗಿ ಕಾಮೆಂಟ್ಸ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಈ ಹಿಂದೆ ಬಹುತೇಕ ಎಲ್ಲಾ ಆಮದುಗಳ ಮೇಲೆ ಶೇ. 10ರಷ್ಟು ಸುಂಕಗಳನ್ನು ವಿಧಿಸಿದ್ದರು. ಕೆಲವು ಸರಕುಗಳಿಗೆ ಶೇ. 50ರಷ್ಟು ಸುಂಕವಿದೆ. ಹೊಸ ಸುಂಕದಿಂದಾಗಿ ಕೆಲವು ವಸ್ತುಗಳು ಶೇ. 104ರಷ್ಟು ತೆರಿಗೆ ಪಾವತಿಸಬೇಕಿದೆ. ಇದು ಯುಎಸ್ ಇತಿಹಾಸದಲ್ಲೇ ಇದುವರೆಗಿನ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ.
Trump raised tariffs on China to 104%….so it’s a great time to revisit the time Letterman cooked him for making all his crap in China
— Wu Tang is for the Children (@WUTangKids) April 8, 2025
pic.twitter.com/SUvsor27L5
ಚೀನಾ ಏನು ಹೇಳುತ್ತದೆ?
ಅಮೆರಿಕದ ಕ್ರಮವನ್ನು ಬೆದರಿಕೆ ಎಂದು ಹೇಳಿ ಚೀನಾ ತಳ್ಳಿಹಾಕಿದೆ. ಇದರ ಅಂತ್ಯದವರೆಗೂ ಹೋರಾಡುವುದಾಗಿ ಹೇಳಿದೆ. ತನ್ನ ಮೇಲೆ ರಿಯಾಯಿತಿಗಳಿಗೆ ಒತ್ತಡ ಹೇರುವುದಿಲ್ಲ ಎಂದಿರುವ ಅದು ಅಮೆರಿಕದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಸುಂಕಗಳನ್ನು ವಿಧಿಸಿದೆ.
ಇದನ್ನೂ ಓದಿ: Donald Trump: ಚೀನಾ ಮೇಲೆ ಶೇ.104ರಷ್ಟು ಸುಂಕ ಇಂದಿನಿಂದ ಜಾರಿ ; ಜಾಗತಿಕವಾಗಿ ಇನ್ನಷ್ಟು ಹೆಚ್ಚಿದ ಆತಂಕ
ಅಮೆರಿಕ ಮತ್ತು ಚೀನಾ ನಡುವಿನ ಈ ವ್ಯಾಪಾರ ಯುದ್ಧ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಟ್ರಂಪ್ ಹೇಳಿದ್ದು, ಚೀನಾ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ. ಆದರೆ ಅದನ್ನು ಹೇಗೆ ಪ್ರಾರಂಭಿಸಬೇಕೆಂದು ಅವರಿಗೆ ತಿಳಿದಿಲ್ಲ. ನಾವು ಅವರ ಕರೆಗಾಗಿ ಕಾಯುತ್ತಿದ್ದೇವೆ. ಅದು ಖಂಡಿತಾ ಆಗುತ್ತದೆ ಎಂದು ತಿಳಿಸಿದ್ದಾರೆ.
ಸುಂಕ ಹೆಚ್ಚಳದ ಪರಿಣಾಮ
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ದದಿಂದ ಕುಸಿತದ ಹಾದಿಯಲ್ಲಿದ್ದ ಷೇರು ಮಾರುಕಟ್ಟೆಗಳು ಏಪ್ರಿಲ್ 2ರಂದು ಟ್ರಂಪ್ ಘೋಷಣೆಯ ಅನಂತರ ಸ್ವಲ್ಪ ಚೇತರಿಕೆ ಕಂಡವು. ಆದರೂ ಅದು ದೀರ್ಘಾವಧಿಯಲ್ಲಿ ಮುಂದುವರಿಯಲು ತೊಂದರೆಗಳನ್ನು ಎದುರಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಆತಂಕ ಉಂಟಾಗಿದೆ. ಈ ನಡುವೆ ಜಾಗತಿಕ ಹೂಡಿಕೆದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.