ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೀ ವ್ಯೂವ್‌ ರೂಂ ಎಂದು ಹೊಟೇಲ್‌ ಬುಕ್‌ ಮಾಡಿದ ಟೂರಿಸ್ಟ್‌ಗೆ ಕಾದಿತ್ತು ಬಿಗ್‌ ಶಾಕ್‌!

ಹೋಟೆಲ್ ರೂಂಗೆ ಸಂಬಂಧಪಟ್ಟ ಆಘಾತಕಾರಿ ಹಗರಣವೊಂದರ ಬಗ್ಗೆ ಪ್ರವಾಸಿಗನೊಬ್ಬನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಆತ ಸೀ ವ್ಯೂವ್‍ ಇರುವ ರೂಂ ಬುಕ್ ಮಾಡಿದ್ದಾನೆ. ಆದರೆ ಅಲ್ಲಿಗೆ ಬಂದು ನೋಡಿದಾಗ ಅದು ವಾಲ್‍ ಪೇಪರ್ ಆಗಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಸೀ ವ್ಯೂವ್‌ ರೂಂ ಬುಕ್‌ ಮಾಡಿದ ಟೂರಿಸ್ಟ್‌ಗೆ ಕಾದಿತ್ತು ಶಾಕ್‌!

Profile pavithra Mar 24, 2025 10:58 AM

ನವದೆಹಲಿ: ಸಾಮಾನ್ಯವಾಗಿ ಯಾವುದಾದರೂ ಸ್ಥಳಗಳಿಗೆ ಹೋಗುವಾಗ ಮೊದಲು ಅಲ್ಲಿನ ಜಾಗ, ಅದರ ವಿಶೇಷತೆ ಬಗ್ಗೆ ಸರಿಯಾಗಿ ವಿಚಾರಿಸುತ್ತೇವೆ. ಹಾಗೇ ರೂಂ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಮೊದಲೇ ಜನರು ತಮಗೆ ಇಷ್ಟವಾದ ಹೋಟೆಲ್ ರೂಂಗಳನ್ನು ಮೊದಲೇ ಬುಕ್ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಇದರಿಂದಲೇ ದೊಡ್ಡ ಮೋಸವಾಗಿದೆ. ಹೌದು, ಇತ್ತೀಚೆಗೆ, ಸೋಶಿಯಲ್ ಮಿಡಿಯಾದಲ್ಲಿ ಹೋಟೆಲ್ ರೂಂಗೆ ಸಂಬಂಧಪಟ್ಟ ಆಘಾತಕಾರಿ ಹಗರಣವೊಂದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ವ್ಯಕ್ತಿ ಅದನ್ನು ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಆದರೆ ಘಟನೆ ನಡೆದ ನಿಖರವಾದ ಸ್ಥಳವನ್ನು ವರದಿ ಮಾಡಿಲ್ಲ. ಪ್ರವಾಸಿಗನೊಬ್ಬ ಸೀ ವ್ಯೂವ್‍ ಇರುವ ಹೋಟೆಲ್ ರೂಂ ಅನ್ನು ಬುಕ್ ಮಾಡಿದ್ದಾನೆ. ಆದರೆ ನಂತರ ಆತ ಆ ರೂಂಗೆ ಬಂದಾಗ ಅವನಿಗೆ ಅಲ್ಲಿ ಒಂದು ಶಾಕ್ ಕಾದಿತ್ತು. ಅದೇನೆಂದರೆ ಆ ಸೀ ವ್ಯೂವ್‍ ದೃಶ್ಯ ಒಂದು ವಾಲ್ ಪೇಪರ್ ಎಂದು ಗೊತ್ತಾಗಿ ಆತ ಶಾಕ್‌ ಆಗಿದ್ದಾನೆ.

ಪ್ರವಾಸಿಗನ ವಿಡಿಯೊ ಇಲ್ಲಿದೆ ನೋಡಿ...

ವೈರಲ್ ವಿಡಿಯೊದಲ್ಲಿ ಅವನು ಗೋಡೆಯ ಕಡೆಗೆ ಮುಖ ಮಾಡಿ ನಿಂತು ಹೋಟೆಲ್ ಸಿಬ್ಬಂದಿಯನ್ನು ವಾಲ್ ಪೇಪರ್ ಬಗ್ಗೆ ಪ್ರಶ್ನಿಸುವುದು ರೆಕಾರ್ಡ್ ಆಗಿದೆ. ಅವನು ತಮ್ಮ ಫೋನ್‍ನಲ್ಲಿ ಬುಕಿಂಗ್ ಮಾಡುವಾಗ ನೋಡಿದ ರೂಂ ಪೋಟೊವನ್ನು ಅವಳಿಗೆ ತೋರಿಸಿ ಈ ರೂಂನ ಕಿಟಕಿಯ ಹೊರಗೆ ಸಮುದ್ರದ ವ್ಯೂವ್‍ ಬದಲು ವಾಲ್‍ ಪೇಪರ್ ಇದೆ ಎಂದು ಕೋಪದಿಂದ ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸಮವಸ್ತ್ರ ಧರಿಸಿದ ಹೋಟೆಲ್ ಸಿಬ್ಬಂದಿಯೊಬ್ಬಳು , ರೂಂ ಬುಕಿಂಗ್ ಪೋರ್ಟಲ್‍ನಲ್ಲಿ ಹೇಗಿದೆಯೋ ಹಾಗೇ ಇದೆ ಎಂದು ಹೇಳಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral Video: ಪ್ರವಾಸಿಗನ ಕಂಜೂಸ್‌ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್‌ ವಿಡಿಯೊ!

ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಹಾಗೇ ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ನೆಟ್ಟಿಗರು ಟೂರಿಸ್ಟ್ ಸ್ಕ್ಯಾಮ್ ಬಗ್ಗೆ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ನೆಟ್ಟಿಗರು “ಇಂತಹ ಹೋಟೆಲ್‍ಗಳಿಗೆ ಪ್ರವಾಸಿಗರು ಕರೆನ್ಸಿ ನೋಟುಗಳ ಚಿತ್ರಗಳನ್ನು ಪಾವತಿಸಬೇಕು” ಎಂದು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ. ಅಂತೆಯೇ, ಇನ್ನೊಬ್ಬರು , “@wild_hares_world ಇಂತಹ ಹಗರಣಗಳು ಸಾಮಾನ್ಯವಾಗಿದೆ” ಎಂದು ಗಮನಸೆಳೆದರು ಮತ್ತು ಈಜಿಪ್ಟ್‌ನಲ್ಲಿ ತನಗೆ ಇದೇ ರೀತಿಯ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. “ಅಲ್ಲಿನ ಹೋಟೆಲ್‍ಗಳು ಪಿರಮಿಡ್ ದೃಶ್ಯಗಳಿರುವ ರೂಂ ಇರುವಂತೆ ತೋರಿಸುತ್ತವೆ. ಆದರೆ ಅದು ಗೋಡೆಯ ಮೇಲಿನ ವಾಲ್‍ಪೇಪರ್‌ ಆಗಿರುತ್ತದೆ” ಎಂದು ಹೇಳಿದ್ದಾರೆ.