MI vs LSG: ಲಖನೌ ಸೂಪರ್ ಜಯಂಟ್ಸ್ ವಿರುದ್ದ ರೋಹಿತ್ ಶರ್ಮಾ ಆಡದೇ ಇರಲು ಕಾರಣವೇನು?
Why Rohit Sharma not Playing against LSG?: ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XIನಲ್ಲಿ ರೋಹಿತ್ ಶರ್ಮಾ ಆಡಲಿಲ್ಲ. ಇದಕ್ಕೆ ಕಾರಣವೇನೆಂದು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

ರೋಹಿತ್ ಶರ್ಮಾ

ಲಖನೌ: ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) 2025ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಟೂರ್ನಿಯ ಲಖನೌ ಸೂಪರ್ ಜಯಂಟ್ಸ್ (LSG) ವಿರುದ್ದದ ಪಂದ್ಯದಿಂದ ಮುಂಬೈ ಇಂಡಿಯನ್ಸ್ (MI) ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಯಿತು. ಪಂದ್ಯದ ಟಾಸ್ ವೇಳೆ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡದೇ ಇರಲು ಕಾರಣವೇನೆಂದು ಬಹಿರಂಗಪಡಿಸಿದರು. ರೋಹಿತ್ ಶರ್ಮಾ ಅವರ ಬದಲು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವಿಲ್ ಜ್ಯಾಕ್ಸ್ ಆಡಲಿದ್ದಾರೆ.
ಶುಕ್ರವಾರ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆ ಮೂಲಕ ಎದುರಾಳಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದರು. ಈ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
IPL 2025: ʻಎಂಎಸ್ ಧೋನಿ ನನ್ನ ತಂದೆಯಿದ್ದಂತೆʼ-ಸಿಎಸ್‌ಕೆ ದಿಗ್ಗಜನಿಗೆ ಮತೀಶ ಪತಿರಣ ಗೌರವ!
"ಇಲ್ಲಿನ ವಿಕೆಟ್ ಫ್ರೆಶ್ ಆಗಿ ಕಾಣುತ್ತಿದೆ. ಪಿಚ್ ಹೇಗೆ ವರ್ತಿಸಲಿದೆ ಎಂಬ ಬಗ್ಗೆ ಖಚಿತತೆ ಇಲ್ಲ. ನೋಡಲು ಪಿಚ್ ಯೋಗ್ಯವಾಗಿ ಕಾಣುತ್ತಿದೆ. ತಡವಾಗಿ ಇಬ್ಬನಿ ಕಾಣಬಹುದು. ಚೇಸಿಂಗ್‌ಗೆ ಇಲ್ಲಿನ ಕಂಡೀಷನ್ಸ್ ಉತ್ತಮ ಎಂದು ಭಾವಿಸುತ್ತೇನೆ. ಇಲ್ಲಿನ ವಿಕೆಟ್ ಹೇಗಿದೆ ಎಂದು ಯಾರೂ ಮಾತನಾಡಬಾರದೆಂದು ನಾವೆಲ್ಲರೂ ಅದುಕೊಂಡಿದ್ದೇವೆ. ನಾವು ಇಲ್ಲಿ ಒಳ್ಳೆಯ ಕ್ರಿಕೆಟ್ ಆಡಬೇಕೆಂದು ಭಾವಿಸಿದ್ದೇವೆ. ಈ ಬಗ್ಗೆ ನಾವೆಲ್ಲಾ ಮಾತನಾಡಿಕೊಂಡಿದ್ದೇವೆ. ಆದರೆ, ಯಾವುದೇ ಕಾರಣಕ್ಕೆ ಪಿಚ್ ಬಗ್ಗೆ ಮಾತನಾಡಬಾರದು. ಕಂಡಿಷನ್ಸ್‌ಗೆ ಹೊಂದಿಕೊಳ್ಳುವುದು ಐಪಿಎಲ್ ಟೂರ್ನಿಯ ಸಕ್ಸಸ್ ಕೀ ಸಂಗತಿ. ಸರಿಯಾದ ಯೋಜನೆಗಳನ್ನು ಬುದ್ದಿವಂತಿಕೆಯಿಂದ ಕಾರ್ಯಗತಗೊಳಿಸುವುದು ಇಲ್ಲಿ ಮುಖ್ಯ. ಸನ್ನಿವೇಶಕ್ಕೆ ತಕ್ಕಂತೆ ಆಡುವುದು ಕ್ರಿಕೆಟ್," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
🚨 Toss 🚨
— IndianPremierLeague (@IPL) April 4, 2025
Mumbai Indians won the toss and opted to bowl first against Lucknow Super Giants.
Updates ▶️ https://t.co/HHS1Gsaw71#TATAIPL | #LSGvMI | @LucknowIPL | @mipaltan pic.twitter.com/sMnXPV2Xnx
ರೋಹಿತ್ ಶರ್ಮಾ ಏಕೆ ಆಡುತ್ತಿಲ್ಲ?
"ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಅವರ ಮೊಣಕಾಲಿಗೆ ಚೆಂಡು ತಗುಲಿದೆ. ಈ ಕಾರಣದಿಂದ ಅವರು ಲಖನೌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಹಿರಿಯ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರು ಕೂಡ ಅತಿ ಶೀಘ್ರದಲ್ಲಿಯೇ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ," ಎಂದು ಮುಂಬೈ ಇಂಡಿಯನ್ಸ್ ನಾಯಕ ಮಾಹಿರಿ ನೀಡಿದ್ದಾರೆ.
ಗಾಯದಿಂದ ಗುಣಮುಖರಾಗುತ್ತಿರುವ ಬುಮ್ರಾ
ಜಸ್‌ಪ್ರೀತ್ ಬುಮ್ರಾ ಅವರು ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಬುಮ್ರಾ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿದ್ದರು. ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೂ ಜಸ್‌ಪ್ರೀತ್ ಬುಮ್ರಾ ಹೊರಬಿದ್ದಿದ್ದರು. ಇವರ ಬದಲು ನಿತೀಶ್ ರಾಣಾಗೆ ಅವಕಾಶ ನೀಡಲಾಗಿತ್ತು.
ಲಖನೌ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ವಿಲ್ ಜ್ಯಾಕ್ಸ್, ರಯಾನ್ ರಿಕೆಲ್ಟನ್ (ವಿ.ಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧಿರ್, ರಾಜ್ ಭಾವ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್, ದೀಪಕ್ ಚಹರ್, ವಿಘ್ನೇಷ್ ಪುತ್ತೂರು
ಇಂಪ್ಯಾಕ್ಟ್ ಪ್ಲೇಯರ್: ತಿಲಕ್ ವರ್ಮಾ, ಕಾರ್ಬಿನ್ ಬಾಷ್, ರಾಬಿನ್ ಮಿಂಝ್, ಸತ್ಯನಾರಾಯಣ ರಾಜು, ಕರಣ್