Viral Video: ಚಲಿಸುತ್ತಿರೋ ಕಾರಿನ ಮೇಲೆ ಡೇಂಜರಸ್ ಸ್ಟಂಟ್! ಯುವಕನ ಹುಚ್ಚಾಟದ ವಿಡಿಯೊ ಫುಲ್ ವೈರಲ್
ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಯುವಕನೊಬ್ಬ ಸ್ಟಂಟ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.


ಭೋಪಾಲ್: ರೀಲ್ಸ್ ಮಾಡಲು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಬೇಗ ಫೇಮಸ್ ಆಗಬೇಕೆಂಬ ಯುವಕರು ಯಾವುದ್ಯಾವುದೋ ರೀತಿಯ ಅಪಾಯಕಾರಿ ಸ್ಟಂಟ್ ಮಾಡಲು ಮುಂದಾಗುತ್ತಾರೆ. ಇದರಿಂದ ಅವರ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಅಂತಹ ಹಲವು ಪ್ರಕರಣಗಳು ಹಿಂದೆ ನಡೆದಿದ್ದರೂ ಕೂಡ ಇನ್ನೂ ಯುವಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದು ವಿಷಾಧ. ಇದೀಗ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಯುವಕನೊಬ್ಬ ಸ್ಟಂಟ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ತನಿಖೆ ಶುರುಮಾಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಬಿಳಿ ಮಾರುತಿ ಎರ್ಟಿಗಾದಲ್ಲಿ ಒಬ್ಬ ಯುವಕ ವೇಗವಾಗಿ ಚಲಿಸುವ ಕಾರಿನ ಮೇಲ್ಭಾಗದಲ್ಲಿ ನಿಂತಿದ್ದರೆ, ಇನ್ನೊಬ್ಬ ಕಿಟಕಿಯಿಂದ ಹೊರಗೆ ವಾಲುತ್ತಿರುವುದು ರೆಕಾರ್ಡ್ ಆಗಿದೆ. ಇಬ್ಬರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡಿದ್ದಾರೆ. ಹಾಗೇ ಅವರು ಈ ಅಪಾಯಕಾರಿ ಸ್ಟಂಟ್ ಮಾಡುವಾಗ ಮೊಬೈಲ್ ಫೋನ್ ಅನ್ನು ಕೂಡ ಬಳಸಿದ್ದಾರಂತೆ.
ಕಾರಿನ ಮೇಲೆ ಅಪಾಯಕಾರಿ ಸ್ಟಂಟ್ ಮಾಡಿದ ವಿಡಿಯೊ ಇಲ್ಲಿದೆ ನೋಡಿ...
#WATCH | MP: Youth Caught Performing Stunts On Roof Of Moving Car In Gwalior#MadhyaPradesh #MPNews #Gwalior pic.twitter.com/oqVOpVXpGu
— Free Press Madhya Pradesh (@FreePressMP) April 7, 2025
ಈ ಸ್ಟಂಟ್ ಅನ್ನು ನೋಡಿದವರಲ್ಲಿ ಒಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿ ಗ್ವಾಲಿಯರ್ ನಗರದ ಪೊಲೀಸರ ಗಮನ ಸೆಳೆದಿದೆ. ಹೀಗಾಗಿ ಪೊಲೀಸರು ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಕಾರನ್ನು ಗುರುತಿಸಿದ್ದಾರೆ ಮತ್ತು ಅವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.ಈ ಯುವಕರ ಗುಂಪು ಸಂಚಾರ ಕಾನೂನುಗಳನ್ನು ಉಲ್ಲಂಘಿಸುವುದಲ್ಲದೆ, ತಮ್ಮ ಮತ್ತು ಇತರರ ಜೀವವನ್ನು ಅಪಾಯಕ್ಕೆ ತಂದೊಡ್ಡಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನದ ಮೇಲೆ ಸ್ಟಂಟ್ ಮಾಡುವ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಹೈದರಾಬಾದ್‍ನ ರಸ್ತೆಯ ಮಧ್ಯದಲ್ಲಿ ಐಷಾರಾಮಿ ಕಾರುಗಳಲ್ಲಿ ಸ್ಟಂಟ್ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಫಾರ್ಚೂನರ್, ಬಿಎಂಡಬ್ಲ್ಯು ಕಾರಿನಲ್ಲಿ ರಸ್ತೆಯ ಮಧ್ಯದಲ್ಲಿ ಸ್ಟಂಟ್ ಮಾಡಿದ ವಿಡಿಯೊ ಸೆರೆಯಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ನೋಡ ನೋಡ್ತಿದ್ದಂತೆ ಫ್ಲೈಓವರ್‌ನಿಂದ ಜಾರಿಬಿತ್ತು ಕಾಂಕ್ರೀಟ್ ತುಂಡು; ಮುಂದೇನಾಯ್ತು ವಿಡಿಯೊ ನೋಡಿ!
ಇವರು ಎಷ್ಟು ಖತರ್ನಾಕ್ ಎಂದರೆ ಸ್ಟಂಟ್ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಕಾರಿನ ನಂಬರ್ ಪ್ಲೇಟ್ ಕೂಡ ತೆಗೆದುಹಾಕಿದ್ದರು. ಆದರೆ ಅವರ ಮುಖಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಕಾರಣ ಪೊಲೀಸರು ಅವರನ್ನು ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸರು ರಾಜೇಂದ್ರನಗರ ನಿವಾಸಿ ಮೊಹಮ್ಮದ್ ಒಬೈದುಲ್ಲಾ (25) ಮತ್ತು ಮಲಕ್ ಪೇಟೆ ನಿವಾಸಿ ಜೊಹೈರ್ ಸಿದ್ದಿಕಿ (25) ಎಂದು ಗುರುತಿಸಿ ನಂತರ ಬಂಧಿಸಿದ್ದರು ಮತ್ತು ಅವರ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.