ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೋಡ ನೋಡ್ತಿದ್ದಂತೆ ಫ್ಲೈಓವರ್‌ನಿಂದ ಜಾರಿಬಿತ್ತು ಕಾಂಕ್ರೀಟ್ ತುಂಡು; ಮುಂದೇನಾಯ್ತು ವಿಡಿಯೊ ನೋಡಿ!

ಇತ್ತೀಚೆಗೆ ಘಾಟ್ಕೋಪರ್‌ನಲ್ಲಿ ಓವರ್ ಹೆಡ್ ಫ್ಲೈಓವರ್‌ನಿಂದ ಕಾಂಕ್ರೀಟ್ ತುಂಡೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರಿನ ವಿಂಡ್ ಶೀಲ್ಡ್‌ ಪುಡಿ ಪುಡಿಯಾದ ಘಟನೆ ನಡೆದಿದೆ. ಇದನ್ನು ನೋಡುಗರೊಬ್ಬರು ರೆಕಾರ್ಡ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಕಾರಿನ ಮೇಲೆ ಬಿದ್ದ ಕಾಂಕ್ರೀಟ್ ತುಂಡು ಮಾಡಿದ ಅವಾಂತರವೇನು ನೋಡಿ!

Profile pavithra Apr 7, 2025 7:04 PM

ಮುಂಬೈ: ಅಧಿಕಾರಿಗಳು ಹಣದ ಆಸೆಗೆ ಫ್ಲೈಓವರ್‌ಗಳ ಕಳಪೆ ಕಾಮಗಾರಿಕೆ ಮಾಡಿ ಪ್ರಯಾಣಿಕರ ಜೀವವನ್ನು ಹೇಗೆ ಅಪಾಯಕ್ಕೆ ತಳ್ಳುತ್ತಾರೆ ಎಂಬುದನ್ನು ತೋರಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇತ್ತೀಚೆಗೆ ಘಾಟ್ಕೋಪರ್‌ನಲ್ಲಿ ಓವರ್ ಹೆಡ್ ಫ್ಲೈಓವರ್‌ನಿಂದ ಕಾಂಕ್ರೀಟ್ ತುಂಡೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರಿನ ವಿಂಡ್ ಶೀಲ್ಡ್‌ ಪುಡಿಪುಡಿಯಾದ ಘಟನೆ ನಡೆದಿದೆ. ಇದನ್ನು ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಕಾಂಕ್ರೀಟ್ ಬೀಮ್ ಕೆಳಗಿರುವ ಕಾರಿನ ಮೇಲೆ ಬಿದ್ದು ಕಾರಿನ ವಿಂಡ್ ಸ್ಕ್ರೀನ್ ಹಾಳಾಗಿದೆ. ಪೊಲೀಸ್ ಅಧಿಕಾರಿ ಸೇರಿದಂತೆ ಹಲವಾರು ಜನರು ಕಾರಿನ ಪಕ್ಕದಲ್ಲಿ ನಿಂತಿದ್ದಾರೆ.ಮೀರಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು. ವರದಿ ಪ್ರಕಾರ, ಕಾರು ಕೆಳಗೆ ಹೋಗುವಾಗ ಸಡನ್ ಆಗಿ ಬೀಮ್ ಬಿದ್ದಿದೆ. ಅದೃಷ್ಟವಶಾತ್ ಕಾರಿನ ಚಾಲಕ ಈ ದುರಂತದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಕಾರಿನ ಮೇಲೆ ಕಾಂಕ್ರೀಟ್‌ ತುಂಡು ಬಿದ್ದ ಭಯಾನಕ ವಿಡಿಯೊ ಇಲ್ಲಿದೆ ನೋಡಿ...



ಏಪ್ರಿಲ್ 4ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ದೃಶ್ಯ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ. “ಇದು ತುಂಬಾ ಭಯಾನಕವಾಗಿದೆ” ಎಂದು ಒಬ್ಬರು ಹೇಳಿದರೆ, “ಈ ಬಗ್ಗೆ ಚಾಲಕ ಮೊಕದ್ದಮೆ ಹೂಡಬಹುದು ಮತ್ತು ಲಕ್ಷಾಂತರ ರೂ ನಷ್ಟವನ್ನು ಪಡೆಯಬಹುದು. ಆದರೆ ಅಲ್ಲಿಯವರೆಗೆ ಅವನು ತನ್ನ ಕಾರನ್ನು ಸರಿಪಡಿಸಲು ಸ್ವಂತ ಹಣವನ್ನು ಖರ್ಚು ಮಾಡಬೇಕಾಗುತ್ತದೆ" ಎಂದು ಹೇಳಿದ್ದಾರೆ. "ಚಾಲಕ ಗುತ್ತಿಗೆದಾರನ ವಿರುದ್ಧ ಕೊಲೆ ಯತ್ನದ ಮೊಕದ್ದಮೆ ಹೂಡಲು ಸಾಧ್ಯವಿಲ್ಲವೇ? ಇದು ಅಪಘಾತ ಎಂದು ನನಗೆ ತಿಳಿದಿದೆ. ಆದರೆ ಗುತ್ತಿಗೆದಾರರು ಇಲ್ಲಿ ಜವಾಬ್ದಾರರಾಗಿರುತ್ತಾರೆ" ಎಂದು ಮೂರನೇಯವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಕೀ‍ ಚೈನ್‌ ಗಿಫ್ಟ್‌ ಕೊಟ್ಟ ಪತ್ನಿ ಮೇಲೆ ಪತಿ ಫುಲ್‌ ಗರಂ! ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ನೋಡಿ

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಫ್ಲೈಓವರ್‌ನ ಸ್ಲ್ಯಾಬ್

ಫ್ಲೈಓವರ್‌ನಿಂದ ಕಾಂಕ್ರೀಟ್ ವಾಹನದ ಮೇಲೆ ಬಿದ್ದು ಅಪಘಾತಕ್ಕೀಡಾದ ಘಟನೆ ನಡೆದಿದ್ದು ಇದೆ ಮೊದಲಲ್ಲ. ಈ ಹಿಂದೆ ಪಶ್ಚಿಮ ಮುಂಬೈನ ಅಂಧೇರಿಯಲ್ಲಿರುವ ಫ್ಲೈಓವರ್‌ನ ಸ್ಲ್ಯಾಬ್ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೆದ್ದಾರಿಯ ಗುಂಡಾವಳಿ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು.