Viral Video: ಅಬ್ಬಾ... ಎಂಥಾ ಭೀಕರ ದೃಶ್ಯ! ಆಟೋ ಚಾಲಕನ ಹುಚ್ಚಾಟಕ್ಕೆ ಎಲ್ಲರೂ ಸುಸ್ತೋ ಸುಸ್ತು- ವಿಡಿಯೊ ನೋಡಿ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಓವರ್‌ಲೋಡ್ ಆಗಿದ್ದ ಆಟೋ ರಿಕ್ಷಾವೊಂದು ಕೆಲವು ಪ್ರಯಾಣಿಕರನ್ನು ಮೇಲ್ಛಾವಣಿಯ ಮೇಲೆ ಕೂರಿಸಿಕೊಂಡು ವೇಗವಾಗಿ ಚಲಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.


ಲಖನೌ: ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಸಂಚಾರಿ ನಿಯಮಗಳನ್ನು ಜಾರಿಗೆ ತಂದರೂ ಕೂಡ ಚಾಲಕರು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಜೀವದ ಜೊತೆಗೆ ಇತರರ ಜೀವಕ್ಕೂ ಅಪಾಯವನ್ನು ತಂದೊಡ್ಡುತ್ತಾರೆ. ಇದೀಗ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಟೋವೊಂದು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಅಪಾಯಕಾರಿ ಘಟನೆ ನಡೆದಿದೆ. ಓವರ್‌ಲೋಡ್ ಆಗಿದ್ದ ಆಟೋ ರಿಕ್ಷಾದ ಮೇಲ್ಛಾವಣಿಯ(ರೂಫ್) ಮೇಲೆ ಒಂದಷ್ಟು ಪ್ರಯಾಣಿಕರು ಕುಳಿತಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಇದು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ವರದಿ ಪ್ರಕಾರ, ಓವರ್‌ಲೋಡ್ ಆಗಿದ್ದ ಈ ಆಟೋ ನಗರದ ಜೈಲ್ ಸ್ಕ್ವೇರ್ ಕಡೆಗೆ ವೇಗವಾಗಿ ಚಲಿಸುತ್ತಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆಯಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಇದು ಝಾನ್ಸಿ ಪೊಲೀಸರ ಗಮನ ಸೆಳೆದು ಅವರು ಈ ಕುರಿತು ತಕ್ಷಣದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದೃಢಪಡಿಸಿದ್ದಾರೆ. "ಈ ವಿಷಯಕ್ಕೆ ಸಂಬಂಧಿಸಿದಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಚಾರ ಉಸ್ತುವಾರಿಗೆ ನಿರ್ದೇಶಿಸಲಾಗಿದೆ" ಎಂದು ಪೊಲೀಸರು ತಮ್ಮ ಅಧಿಕೃತ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
झांसी: नियमों की धज्जियां उड़ाते हुए एक ऑटो का वीडियो वायरल हुआ है, जिसमें ऑटो की छत पर भी सवारी लदी हुई हैं।
— भारत समाचार | Bharat Samachar (@bstvlive) March 7, 2025
ऑटो के अंदर और छत पर सवारियों से भरा यह ऑटो जेल चौराहे पर फर्राटे भरते हुए नजर आया।
यह घटना यातायात नियमों का उल्लंघन करती है और यात्री सुरक्षा को खतरे में डालती है।… pic.twitter.com/o1PKp3ieXt
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ರೀತಿಯ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಫೆಬ್ರವರಿ 15 ರಂದು ಆಟೋದಲ್ಲಿ ಮಿತಿಯನ್ನು ಮೀರಿದ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಬರುಸಾಗರ್ ಪೊಲೀಸ್ ಠಾಣೆಯ ವಾಡಿಕೆಯ ಸಂಚಾರ ತಪಾಸಣೆಯ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಗಳು ಪ್ರಯಾಣಿಕರಿಗೆ ಒಬ್ಬೊಬ್ಬರಾಗಿ ಆಟೋದಿಂದ ಕೆಳಗಿಳಿಯುವಂತೆ ಆದೇಶಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಝಾನ್ಸಿ ಪೊಲೀಸರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಷ್ಟು ಚಿಕ್ಕ ಆಟೋರಿಕ್ಷಾದಲ್ಲಿ ಒಟ್ಟು 19 ಮಂದಿ ಪ್ರಯಾಣಿಕರಿರುವುದನ್ನು ಕಂಡು ನೆಟ್ಟಿಗರು ದಂಗಾಗಿದ್ದರು.ಆಟೋವನ್ನು ತಕ್ಷಣವೇ ವಶಪಡಿಸಿಕೊಳ್ಳಲಾಗಿದ್ದು, ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಆಟೋರಿಕ್ಷಾ ಚಾಲಕನ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಅಡ್ಡಾದಿಡ್ಡಿ ಕಾರು ಚಲಾಯಿಸಿ ಚಾಲಕನ ಹುಚ್ಚಾಟ- ಈ ಭೀಕರ ದೃಶ್ಯ ನೋಡಿದ್ರೆ ಶಾಕ್ ಆಗುತ್ತೆ!
ರಸ್ತೆ ಸುರಕ್ಷತೆ ಬಗ್ಗೆ ಎಷ್ಟೇ ಹೇಳಿದ್ರೂ ಮತ್ತದೇ ತಪ್ಪುಗಳು ಮರುಕಳಿಸುತ್ತಾ ಇರುತ್ತವೆ. ಇತ್ತೀಚೆಗೆ ವಿದ್ಯಾರ್ಥಿಗಳಿಂದ ಕಿಕ್ಕಿರಿದ ರಸ್ತೆಯಲ್ಲಿ ಥಾರ್ ಕಾರೊಂದು ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದುದ್ದಲ್ಲದೇ ನಂತರ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ರಾಜಸ್ಥಾನದ ಸಿಕಾರ್‌ನ ಪಿಪ್ರಾಲಿ ಪ್ರದೇಶದಲ್ಲಿ ನಡೆದಿದೆ. ಇದರಿಂದ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡು ಸುಮಾರು 8 ಗಂಟೆಗಳ ಕಾಲ ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಗಿತ್ತು.