ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್‌ ಮಾಡಲು ಹಳಿಯ ಮೇಲೆ ಮಲಗಿದ್ದ ಯುವಕನ ಮೇಲೆ ಹಾದುಹೋದ ರೈಲು; ವಿಡಿಯೊ ಇಲ್ಲಿದೆ

ಉತ್ತರ ಪ್ರದೇಶದ ಉನ್ನಾವೊದಲ್ಲಿ 22 ವರ್ಷದ ಯುವಕನೊಬ್ಬ ರೈಲ್ವೆ ಹಳಿಯ ಮೇಲೆ ಮಲಗಿ ವೇಗವಾಗಿ ಬರುತ್ತಿದ್ದ ರೈಲು ತನ್ನ ಮೇಲೆ ಹಾದುಹೋಗುವಾಗ ಅದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ರೀಲ್‌ಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ ಯುವಕ; ಇದೆಂಥ ಹುಚ್ಚು ನೋಡಿ!

Profile pavithra Apr 9, 2025 6:36 PM

ಲಖನೌ: ರೀಲ್ಸ್ ತಯಾರಿಸುವುದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವುದು ಈಗಿನ ಯುವ ಜನಾಂಗದವರ ಕ್ರೇಜ್‌ ಆಗಿದೆ. ಫೇಮಸ್‌ ಆಗಲು ಅಪಾಯಕಾರಿಯಾದ ರೀಲ್ಸ್ ತಯಾರಿಸಲು ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಈ ಹಿಂದೆ ರೈಲು ನಿಲ್ದಾಣಗಳಲ್ಲಿ, ಚಲಿಸುತ್ತಿದ್ದ ರೈಲಿನಲ್ಲಿ ರೀಲ್ಸ್ ಮಾಡುತ್ತಿದ್ದರು. ಆದರೆ ಇಲ್ಲೊಬ್ಬ ಯುವಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಉತ್ತರ ಪ್ರದೇಶದ ಉನ್ನಾವೊದಲ್ಲಿ 22 ವರ್ಷದ ಯುವಕನೊಬ್ಬ ರೈಲ್ವೆ ಹಳಿಯ ಮಧ್ಯೆ ಭಾಗದ ಮೇಲೆ ಮಲಗಿದ್ದಾನೆ. ವೇಗವಾಗಿ ಬರುತ್ತಿದ್ದ ರೈಲು ಆತನ ಮೇಲೆ ಹಾದುಹೋಗುವಾಗ ಅದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ವಿಡಿಯೊ ವೈರಲ್ ಆದ ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಯುವಕನೊಬ್ಬ ತನ್ನ ಮೊಬೈಲ್ ಫೋನ್ ಹಿಡಿದು ರೈಲು ಹಳಿಗಳ ಮಧ್ಯದಲ್ಲಿ ಮಲಗಿರುವುದು ಸೆರೆಯಾಗಿದೆ. ಇಡೀ ರೈಲು ಅವನ ಮೇಲೆ ಹೋಗುವವರೆಗೂ ಆ ಯುವಕ ರೈಲ್ವೆ ಹಳಿಗಳ ಮೇಲೆ ಮಲಗಿದ್ದನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ರೀಲ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



"ಇದು ಎಡಿಟ್ ಮಾಡಿದ ವಿಡಿಯೊ ಎಂದು ನಾನು ಭಾವಿಸುತ್ತೇನೆ" ಎಂದು ಒಬ್ಬರು ಬರೆದಿದ್ದಾರೆ. "ಅವನು ಸುಮ್ಮನೆ ಮಲಗಿ ರೈಲು ಚಲಿಸುವ ವಿಡಿಯೊವನ್ನು ಅದಕ್ಕೆ ಸೇರಿಸಿ ಕೊನೆಯಲ್ಲಿ ಎದ್ದು ನಿಲ್ಲವಂತೆ ವಿಡಿಯೊ ಮಾಡಿದ್ದಾನೆ "ಎಂದು ಇನ್ನೊಬ್ಬರು ಹೇಳಿದ್ದಾರೆ. ಆದರೆ ಆ ಯುವಕನ ಮೇಲೆ ರೈಲು ಹಾದುಹೋದ ಹಾಗೇ ವಿಡಿಯೊವನ್ನು ಎಡಿಟ್ ಮಾಡಲಾಗಿದೆಯೇ ಅಥವಾ ಚಿತ್ರೀಕರಿಸಲಾಗಿದೆಯೇ ಎಂಬ ಗೊಂದಲ ಹಲವರಲ್ಲಿದೆ.

ಇಂತಹ ಅಪಾಯಕಾರಿ ರೀಲ್ಸ್ ತಯಾರಿಸಿದ ಯುವಕನನ್ನು 22 ವರ್ಷದ ರಂಜಿತ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್‌ ತನ್ನ ಮೇಲೆ ಹಾದುಹೋಗುವಂತೆ ರೀಲ್ಸ್ ಮಾಡಿದ್ದಾನೆ. ಹಾಗಾಗಿ ಆತನ ಅಜಾಗರೂಕ ಕೃತ್ಯಕ್ಕಾಗಿ ಜಿಆರ್‌ಪಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತು ಕಾನ್ಪುರ-ಲಕ್ನೋ ಮಾರ್ಗದ ಕುಸುಂಬಿ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:‌Viral Video: ಸ್ಪೀಡಾಗಿ ಬಂದು ಮಹಿಳೆ ಸೇರಿ 5 ಮಕ್ಕಳ ಮೇಲೆ ಹರಿದ ಕಾರು; ಡೆಡ್ಲಿ ಅಪಘಾತದ ವಿಡಿಯೊ ವೈರಲ್

ರೈಲು ಹಳಿಗಳ ಮೇಲೆ ನಿಂತು ರೀಲ್ಸ್ ತಯಾರಿಸಲು ಹೋಗಿ ಯುವಕರು ಅಪಾಯಕ್ಕೆ ಸಿಲುಕಿದ ಘಟನೆ ಈ ಹಿಂದೆ ಕೂಡ ವರದಿಯಾಗಿತ್ತು. ಉತ್ತರ ಪ್ರದೇಶದ ಬಾರಾಬಂಕಿಯ ಹದಿಹರೆಯದ ಯುವಕನೊಬ್ಬ ರೀಲ್‍ಗಳನ್ನು ರಚಿಸಲು ರೈಲ್ವೆ ಹಳಿಗಳ ಮೇಲೆ ಅಜಾಗರೂಕತೆಯಿಂದ ನಿಂತಿದ್ದರಿಂದ ಚಲಿಸುವ ರೈಲು ಡಿಕ್ಕಿ ಹೊಡೆದಿದೆ. 14 ವರ್ಷದ ಫರ್ಮಾನ್ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲಿಗೆ ಡಿಕ್ಕಿ ಹೊಡೆದಿದ್ದ. ಈ ಆಘಾತಕಾರಿ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.