Vishweshwar Bhat Column: ಮನಸ್ಸನ್ನು ರೂಪಿಸುವ ಮನೆಗಳು
ಜಪಾನ್ ಭೂಕಂಪನ ತೀವ್ರತೆಗನುಗುಣವಾಗಿ ಮನೆ ನಿರ್ಮಾಣಕ್ಕೆ ವಿಶೇಷ ತಂತ್ರಜ್ಞಾ ನವನ್ನು ಬಳಸುತ್ತದೆ. ಮನೆಗಳ ಆಧಾರ ಭಾಗವನ್ನು ರಬ್ಬರ್ ಸಹಾಯದಿಂದ ಬಲಪಡಿಸಲಾಗುತ್ತದೆ. ಇದು ಭೂಕಂಪನದ ಶಕ್ತಿಯನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ಸಾಂಪ್ರದಾಯಿಕ ಜಪಾನ್ ಮನೆಯು ಜೆನ್ ತೋಟ ( Zen Garden) ಇಲ್ಲದೇ ಅಪೂರ್ಣ.


ಸಂಪಾದಕರ ಸದ್ಯಶೋಧನೆ
ಜಪಾನ್ ಸಾಂಪ್ರದಾಯಿಕ ಹಾಗೂ ಆಧುನಿಕತೆಗೂ ಸಮತೋಲನವನ್ನು ಕಾಯ್ದುಕೊಂಡಿ ರುವ ದೇಶ. ಅದರ ವಾಸ್ತುಶಿಲ್ಪ, ವಿನ್ಯಾಸ ಹಾಗೂ ಮನೆಗಳ ನಿರ್ಮಾಣದ ಶೈಲಿ ಅತ್ಯಂತ ವೈಶಿಷ್ಟ್ಯಪೂರ್ಣ. ಜಪಾನ್ ಮನೆಯ ವೈಶಿಷ್ಟ್ಯ ಅದರ ಸರಳತೆ, ವೈಜ್ಞಾನಿಕತೆ, ನೈಸರ್ಗಿ ಕತೆಯೊಂದಿಗೆ ಹೊಂದಾಣಿಕೆ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯ ಪ್ರಭಾವದಲ್ಲಿ ಅಡಕವಾಗಿದೆ. ಜಪಾನ್ ಮನೆಗಳು ಮಾಚಿಯ, ಮಿಂಕಾ, ಶೋಯಾ, ಇತ್ಯಾದಿ ಶೈಲಿಗಳಲ್ಲಿ ಕಂಡು ಬರು ತ್ತವೆ. ಈ ಮನೆಗಳು ವಿಶೇಷವಾಗಿ ಹಗುರವಾದ, ಪರಿಸರ ಸ್ನೇಹಿ ವಸ್ತುಗಳಿಂದ ನಿರ್ಮಾಣ ಗೊಂಡು, ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿರು ತ್ತವೆ.
ಜಪಾನಿನಲ್ಲಿ ತಾಟಾಮಿ ಕೊಠಡಿಗಳು (Tatami Rooms) ಇರುವ ಮನೆ ಜನಪ್ರಿಯ.ತಾಟಾ ಮಿ ಒಂದು ಪ್ರಾಚೀನ ಮಾದರಿಯ ನೆಲವಸವಾಗಿದ್ದು, ಇದನ್ನು ಹಾಲು ಹುಲ್ಲಿನ ( Rice Straw) ನಯಗೊಳಿಸಿದ ಹಣ್ಣಿನಿಂದ ತಯಾರಿಸಲಾಗುತ್ತದೆ. ತಾಟಾಮಿ ಕೊಠಡಿಗಳು ಅತ್ಯಂತ ಆರಾಮದಾಯಕವಾಗಿದ್ದು, ಮನೆಗೆ ಸುಗಂಧ ಹಾಗೂ ತಾಜಾತನವನ್ನು ನೀಡು ತ್ತವೆ.
ಜಪಾನಿಯರು ವಾತಾವರಣಕ್ಕೆ ಹೊಂದಿಕೊಳ್ಳುವ ಮನೆ ನಿರ್ಮಿಸುವುದರಲ್ಲಿ ನಿಸ್ಸೀಮರು. ಜಪಾನ್ ಮನೆಯು ಅವುಗಳ ಭೌಗೋಳಿಕ ಪರಿಸ್ಥಿತಿಯ ಪ್ರಕಾರ ವಿನ್ಯಾಸಗೊಂಡಿರುತ್ತವೆ. ಜಪಾನಿನಲ್ಲಿ ಭೂಕಂಪ, ಚಂಡಮಾರುತಗಳು ಮತ್ತು ಮಳೆ ಹೆಚ್ಚು ಆಗುವುದರಿಂದ, ಮನೆ ಯ ವಿನ್ಯಾಸ ಭದ್ರತೆ ಮತ್ತು ಹಗುರ ಎರಡನ್ನೂ ಒಳಗೊಂಡಿರುತ್ತದೆ. ಮನೆಗಳನ್ನು ನಿರ್ಮಿ ಸುವಾಗ ಭೂಕಂಪನ ನಿರೋಧಕ ತಂತ್ರಜ್ಞಾನಕ್ಕೆ ಮಹತ್ವ ನೀಡಲಾಗುತ್ತದೆ.
ಜಪಾನ್ ಭೂಕಂಪನ ತೀವ್ರತೆಗನುಗುಣವಾಗಿ ಮನೆ ನಿರ್ಮಾಣಕ್ಕೆ ವಿಶೇಷ ತಂತ್ರಜ್ಞಾ ನವನ್ನು ಬಳಸುತ್ತದೆ. ಮನೆಗಳ ಆಧಾರ ಭಾಗವನ್ನು ರಬ್ಬರ್ ಸಹಾಯದಿಂದ ಬಲಪಡಿ ಸಲಾಗುತ್ತದೆ. ಇದು ಭೂಕಂಪನದ ಶಕ್ತಿಯನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ಸಾಂಪ್ರದಾಯಿಕ ಜಪಾನ್ ಮನೆಯು ಜೆನ್ ತೋಟ (Zen Garden) ಇಲ್ಲದೇ ಅಪೂರ್ಣ. ಇದು ಸಂಯಮ, ಶಾಂತಿ ಮತ್ತು ಸಮತೋಲನವನ್ನು ತಲುಪಲು ನೆರವಾಗುವಂತೆ ವಿನ್ಯಾಸಗೊಳಿಸಲಾಗುತ್ತದೆ.
ಚಿಕ್ಕ ಗುಡ್ಡ, ಮರಳು, ನೀರು ಹಾಗೂ ಕಲ್ಲುಗಳ ಬಳಕೆಯಿಂದ ಸಮುದ್ರದ ಛಾಯೆಯನ್ನು ತರುತ್ತಾರೆ. ಜಪಾನ್ ಮನೆಯಲ್ಲಿ ಪ್ರತ್ಯೇಕ ಚಹಾ ಕೊಠಡಿ ಇರುತ್ತದೆ. ಇಲ್ಲಿ ಚಹಾ ಪಾನ ಸಂಸ್ಕೃತಿ ( Tea Ceremony ) ನೆರವೇರಿಸುವ ಪರಿಪಾಠವಿದೆ. ಇದು ಆತಿಥ್ಯ ಮತ್ತು ಗೌರವದ ಸಂಕೇತವಾಗಿದೆ. ಸಾಂಪ್ರದಾಯಿಕತೆಗಿಂತ, ಆಧುನಿಕ ಜಪಾನ್ ಮನೆಗಳು ಕಡಿಮೆ ಜಾಗ ದಲ್ಲಿ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿ ವಿನ್ಯಾಸಗೊಳ್ಳುತ್ತವೆ. ಮಿನಿಮಲಿಸ್ಟ್ ( Minimalist) ಶೈಲಿಯ ವಿನ್ಯಾಸವು ಜಪಾನ್ ಮನೆಗಳಿಗೆ ಹತ್ತಿರದ ಪರಿಕಲ್ಪನೆಯಾಗಿದೆ.
ಜಪಾನ್ ಮನೆಗಳಲ್ಲಿ ಕಡಿಮೆ ಸ್ಥಳದಲ್ಲಿ ಹೆಚ್ಚು ಬಳಕೆ ಸಾಧ್ಯವಾಗುವಂತೆ ಮಲ್ಟಿ-ಫಂಕ್ಷನ್ ವಿನ್ಯಾಸವಿರುತ್ತದೆ. ಉದಾಹರಣೆಗೆ, ಹಾಸಿಗೆ ಮತ್ತು ಮಂಚವನ್ನು ಮಡಚುವ ವ್ಯವಸ್ಥೆ ಯಿಂದ ಜಾಗವನ್ನು ಗರಿಷ್ಠ ಮಟ್ಟಕ್ಕೆ ಬಳಸಿಕೊಳ್ಳಬಹುದು. ಆಧುನಿಕ ಜಪಾನ್ ಮನೆ ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಕಲ್ಲು, ಮರ ಮತ್ತು ನೈಸರ್ಗಿಕ ವಸ್ತುಗಳ ಬಳಕೆ ಹೆಚ್ಚಿಸಲಾಗಿದೆ. ಸೌರಶಕ್ತಿ ವ್ಯವಸ್ಥೆ, ಜಲ ಸಂರಕ್ಷಣೆ ತಂತ್ರeನಗಳ ಮೂಲಕ ಪರಿ ಸರಕ್ಕೆ ತಕ್ಕಂತೆ ಮನೆಯನ್ನು ವಿನ್ಯಾಸಗೊಳಿಸುತ್ತಾರೆ. ಮಾ ಎಂಬುದು ಜಪಾನ್ ಮನೆಯ ಪ್ರಮುಖ ತತ್ವವಾಗಿದೆ. ಇದನ್ನು ಆಂತರಿಕ ಶಾಂತಿ, ವಿಶಾಲತೆ ಮತ್ತು ಹಾಳು ಜಾಗದ ಮಹತ್ವ ಎಂದೂ ಹೇಳಬಹುದು. ಅನಗತ್ಯ ಸಾಮಾನುಗಳನ್ನು ಕಡಿಮೆ ಇಟ್ಟು, ಶುದ್ಧ ಮನಸ್ಥಿತಿಯನ್ನು ರೂಪಿಸುವ ಸಂಪ್ರದಾಯ ಇದಾಗಿದೆ.