Gururaj Gantihole Column: ಗುರುತ್ವಾಕರ್ಷಣೆಯೂ, ಕುಂಭಮೇಳವೂ ಮತ್ತು ಆಧುನಿಕ ವಿಜ್ಞಾನ !
15ನೇ ಜನವರಿ 2019ರ ಪ್ರಯಾಗದಲ್ಲಿ ನಡೆದ ಅರ್ಧಕುಂಭ ಮೇಳದಲ್ಲಿ 24 ಕೋಟಿ ಜನರು ಸೇರಿದ್ದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ ಮತ್ತು ಶಾಂತಿಯಿಂದ ನಡೆದ ಅತ್ಯಂತ ದೊಡ್ಡ ಧರ್ಮ ಸಮ್ಮೇಳನ ಎಂದು ದಾಖಲಾಗಿತ್ತು. ಪ್ರಸ್ತುತ ಇದೆಲ್ಲವನ್ನೂ ಮೀರಿ ನಡೆಯುತ್ತಿರುವ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಅಧಿಕೃತವಾಗಿಯೇ 56 ಕೋಟಿ ಜನರು ಭಾಗಿಯಾಗಿದ್ದಾ ರೆಂದೂ ಈ ಹುಣ್ಣಿ ಮೆಗೆ ಮೊದಲಿನ ದಾಖಲಾತಿ
![ಗುರುತ್ವಾಕರ್ಷಣೆಯೂ, ಕುಂಭಮೇಳವೂ ಮತ್ತು ಆಧುನಿಕ ವಿಜ್ಞಾನ !](https://cdn-vishwavani-prod.hindverse.com/media/original_images/Gururaj_Gantihole_Column_130225.jpg)
ಅಂಕಣಕಾರ ಗುರುರಾಜ್ ಗಂಟಿಹೊಳೆ
![Profile](https://vishwavani.news/static/img/user.png)
ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಒಂದಾನೊಂದು ಕಾಲದಲ್ಲಿ ಇಡೀ ಜಗತ್ತಿಗೆ ಜ್ಞಾನದ ದೀವಿಗೆಯನ್ನು ಹಂಚಿದ್ದು ನಮ್ಮ ಭಾರತ ದೇಶ. ಹೌದು, ಇಂದು ನಾವೆಲ್ಲ ಭಾರತ ದೇಶದಲ್ಲಿ ನಮ್ಮ ಹಿಂದಿನ ಹಿರಿಮೆ-ಗರಿಮೆಯನ್ನು ಮರೆತು ಬದುಕುತ್ತಿದ್ದೇವೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಆಧುನಿಕ ಬದುಕಿನ ಯಾವುದೋ ಧಾವಂತ ದಲ್ಲಿ ಓಡುತ್ತಿದ್ದೇವೆ ಮತ್ತು ಧಾರ್ಮಿಕತೆ, ಗೃಹಕೃತ್ಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ತಂದೆತಾಯಿಗಳಾಗಿ ನಾವು ಸೋಲುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇತರೆ ಜನರು ತಮ್ಮ ಧರ್ಮದ ಆಚರಣೆಗಳನ್ನು ನಿರಂತರಗೊಳಿಸುತ್ತ ಸಾಗುತ್ತಿದ್ದರು. ಜನವರಿ 2010ರಲ್ಲಿ ಇರಾಕ್‌ನ ಕರ್ಬಾಲಾದಲ್ಲಿ ಸುಮಾರು 1 ಕೋಟಿಯಷ್ಟು ಜನರು ಸೇರಿದ್ದು, ಅತಿ ಹೆಚ್ಚು ಧಾರ್ಮಿಕ ಸಮ್ಮೇಳನ ಎಂದು ದಾಖಲಾಗಿತ್ತು.
ಮತ್ತೆ 2017ರಲ್ಲಿ ಸುಮಾರು 1.4 ಕೋಟಿಯಷ್ಟು ಜನರು ಮತ್ತದೇ ಕರ್ಬಾಲಾದಲ್ಲಿ ಸೇರಿದ್ದು ಮತ್ತೊಂದು ದಾಖಲೆಯಾಗಿತ್ತು.
15ನೇ ಜನವರಿ 2019ರ ಪ್ರಯಾಗದಲ್ಲಿ ನಡೆದ ಅರ್ಧಕುಂಭ ಮೇಳದಲ್ಲಿ 24 ಕೋಟಿ ಜನರು ಸೇರಿದ್ದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ ಮತ್ತು ಶಾಂತಿಯಿಂದ ನಡೆದ ಅತ್ಯಂತ ದೊಡ್ಡ ಧರ್ಮ ಸಮ್ಮೇಳನ ಎಂದು ದಾಖಲಾಗಿತ್ತು. ಪ್ರಸ್ತುತ ಇದೆಲ್ಲವನ್ನೂ ಮೀರಿ ನಡೆಯುತ್ತಿರುವ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಅಧಿಕೃತವಾಗಿಯೇ 56 ಕೋಟಿ ಜನರು ಭಾಗಿಯಾಗಿದ್ದಾ ರೆಂದೂ ಈ ಹುಣ್ಣಿಮೆಗೆ ಮೊದಲಿನ ದಾಖಲಾತಿ. ಲೆಕ್ಕಕ್ಕೆ ಸಿಗದವರು ಸುಮಾರು 2 ಕೋಟಿಯಷ್ಟಿ ದ್ದಾರೆಂದು ಸ್ಥಳೀಯ ಆಡಳಿತದ ಮಾತು. ಒಟ್ಟಾರೆ, ನ ಭೂತೋ ನಭವಿಷ್ಯತಿ ಎಂಬಂತೆ ಒಂದು ಧಾರ್ಮಿಕ ಸಮ್ಮೇಳನ ಇಂದು ಭೂಮಂಡಲದ ಮೇಲೆ ನಡೆಯುತ್ತಿದೆ!
ಇದನ್ನೂ ಓದಿ: Roopa Gururaj Column: ದಾಸರ ಕೋಪಕ್ಕೆ ತಕ್ಕ ಶಾಸ್ತಿ ಮಾಡಿದ ವಿಠಲ
ಅಷ್ಟಕ್ಕೂ ಈ ಕುಂಭಮೇಳ ಎಂದರೇನು ಎಂಬುದನ್ನು ಅವಲೋಕಿಸಿದಾಗ, ಸಮುದ್ರಮಥನದ ಕಾಲದಲ್ಲಿ ಅಮೃತದ ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಕ್ಷೇತ್ರಗಳ ಮೇಲೆ ಬಿದ್ದ ಅದರ ಹಿಂದಿನ ವಿವರ ನಮಗೆಲ್ಲ ಗೊತ್ತೇ ಇದೆ. ಅದರ ಮುಂದಿನ ಭಾಗವಾಗಿ ಪ್ರತಿ ಆರು ವರ್ಷಕ್ಕೊಮ್ಮೆ ಹರಿದ್ವಾರ ಮತ್ತು ಪ್ರಯಾಗದಲ್ಲಿ ಅರ್ಧ ಕುಂಭಮೇಳವನ್ನು ಮತ್ತು ಪ್ರತಿ ಹನ್ನೆ ರಡು ವರ್ಷಗಳಿಗೊಮ್ಮೆ ಪೂರ್ಣಕುಂಭಮೇಳವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶೇಷ ದೈವಿಕ ಮುಹೂರ್ತದಲ್ಲಿ ಈ ಧಾರ್ಮಿಕ ಉತ್ಸವವನ್ನು ಹರಿದ್ವಾರದ ಗಂಗೆಯ ಮಡಿಲಿ ನಲ್ಲಿ, ನಾಸಿಕ್‌ನ ಗೋದಾವರಿ ತೀರದಲ್ಲಿ, ಉಜ್ಜಯಿನಿ ಶಿಪ್ರಾ ನದಿಯ ತಟದಲ್ಲಿ ಮತ್ತು ಗಂಗಾ- ಯಮುನಾ-ಸರಸ್ವತಿ ಸಂಗಮದ ಪವಿತ್ರಕ್ಷೇತ್ರವಾದ ಪ್ರಯಾಗದಲ್ಲಿ ಆಳರಸರ ಹಂಗಿಲ್ಲದೆ ಆಚರಿಸುತ್ತ ಬರಲಾಗುತ್ತಿದೆ. ಈ ಮೇಲಿನ ನಾಲ್ಕು ಪ್ರಮುಖ ಕ್ಷೇತ್ರಗಳೆಂದು ಪರಿಗಣಿಸಿದ್ದರೂ, ಕೋಲ್ಕತಾದ ಹೂಗ್ಲೀ ನದಿ ತೀರವಾದ ಬಾನ್ಸಬೇರಿಯಾದಲ್ಲಿ 2022ರ ಕುಂಭಮೇಳವನ್ನು ಆಚರಿಸಲಾಗಿತ್ತು.
ಸಾಮಾನ್ಯವಾಗಿ ಭಾರತದೇಶದಲ್ಲಿ ನದಿಯನ್ನು ಪವಿತ್ರ ದೇವತೆಯಾಗಿ ಪರಿಗಣಿಸಿದ್ದು, ವಿಶೇಷ ಮುಹೂರ್ತ, ಹಬ್ಬ ಹರಿದಿನಗಳಲ್ಲಿ ನದಿಸ್ನಾನ ಮಾಡುವ ಮುಖಾಂತರ ಸಂಭ್ರಮಿಸುವುದು ದೇಶದ ವಿವಿಧ ಭಾಗದಲ್ಲಿರುವ ಪದ್ಧತಿಯಾಗಿದೆ ಕೂಡ. ಮಾಘಮೇಳ, ಮಕರ ಮೇಳ ಮತ್ತು ಪ್ರತಿ 12 ವರ್ಷ ಕ್ಕೊಮ್ಮೆ ಕುಂಭಕೋಣಂನಲ್ಲಿ ನಡೆಯುವ ಮಹಾಮಾಘಂ ಕಾವೇರಿ ಸ್ನಾನವೂ ಇದಕ್ಕೆ ಉದಾಹರಣೆಯಾಗಿದೆ.
ಇದನ್ನೂ ಓದಿ: Gururaj Gantihole Column: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ನಿಮಗೆ ಗೊತ್ತೆ ?
ನಿಯೋಲಿಥಿಕ್ ರೆವಲ್ಯೂಷನ್ ( First Agricultural Revolution) ಕಾಲಘಟ್ಟವು ಆಧು ನಿಕ ಮಾನ ವನ ಇತಿಹಾಸದಲ್ಲಿ ಒಂದು ಮಹತ್ತರ ಪಾತ್ರವಹಿಸುತ್ತದೆ. ಇದು ಆಧುನಿಕ ವಿಜ್ಞಾನದ ಬೆಳವಣಿಗೆಗೆ ಬುನಾದಿ ಹಾಕಿದ ಸಂದರ್ಭವಾಗಿದೆ. 1543ರಲ್ಲಿ ನಿಕೋಲಸ್ ಕೋಪರ್ನಿ ಕಸ್, On the Revolution of the Heavenly Spheres ಎಂಬ ಪ್ರಬಂಧವನ್ನು ಪ್ರಕಟಿಸುತ್ತಾನೆ.
ಇದು ಇಡೀ ಯುರೋಪಿನ ವಿಜ್ಞಾನ, ಕೈಗಾರಿಕೆ, ಕೃಷಿ ಮತ್ತು ಖಗೋಳಶಾಸ್ತ್ರದಲ್ಲಿ ಅಪಾರ ಸಂಶೋ ಧನೆ ಕೈಗೊಳ್ಳಲು ಪ್ರೇರಣೆ ಯಾಗುತ್ತದೆ. ಈ ಒಂದು ಹಂತವನ್ನು ‘ಆಧುನಿಕ ವಿಜ್ಞಾನದ ಕ್ರಾಂತಿ ಕಾರಕ ಆರಂಭ’ ಎಂತಲೂ ಗುರುತಿಸಲಾಗುತ್ತದೆ. ಇಲ್ಲಿಂದ ನ್ಯೂಟನ್, ಐನಸ್ಟೀನ್, ಎಡಿಸನ್, ಫ್ಯಾ ರಡೆ, ನಿಕೋಲಾ ಟೆಸ್ಲಾ, ಮೇರಿಕ್ಯೂರಿ, ಒಪ್ಪೆನ್ ಐಮ್ಹರ್, ಜಗದೀಶ ಚಂದ್ರ ಬೋಸ್, ಸಿ.ವಿ. ರಾಮನ್, ಚಂದ್ರಶೇಖರ್ ಸೇರಿದಂತೆ ಬಹುತೇಕ ಪ್ರಖ್ಯಾತ ವಿಜ್ಞಾನಿಗಳು ಇಂದಿನ ಜಗತ್ತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇಲ್ಲಿಂದ ನಿಧಾನವಾಗಿ, ಸಸ್ಯಗಳಿಗೂ ಜೀವವಿರುವುದು, ರೇಡಿಯಂ, ಎಕ್ಸ್-ಕಿರಣಗಳು, ಬೆಳಕು, ಗಾಳಿ, ನೀರು, ಸಮುದ್ರ, ಖಗೋಳ, ರಾಸಾಯನಿಕ, ಗಣಿತ, ಭೌತಶಾಸ್ತ್ರ ಮತ್ತು ಗುರುತ್ವಾಕರ್ಷಣೆ, ಅಣು ಸಿದ್ಧಾಂತ, ಪೈಥಾಗೋರಸ್‌ನ ಜ್ಯಾಮಿತಿ( Geometry), ಆರ್ಥಶಾಸ್ತ್ರ, ವಿಮಾನನೌಕೆ ಸಿದ್ಧಾಂತ ಗಳು ಸಹ ಅನ್ವೇಷಣೆಗೊಳ್ಳುತ್ತವೆ. ಈ ಸಂಶೋಧನೆಗಳು ಇಡೀ ಮಾನವಕುಲವು ಎಂದೂ ಮರೆಯ ದಂತಹ ಅನನ್ಯ ಕೊಡುಗೆಗಳಾಗಿ ಉಳಿದಿವೆ. ಆದರೆ, ಜಗತ್ತಿನ ಪ್ರಮುಖ ಸಂಶೋಧನೆಗಳೆಲ್ಲವೂ ಭಾರತೀಯರಿಂದ ಅನ್ವೇಷಣೆಗೊ ಳಪಟ್ಟಿವೆ ಎಂಬುದನ್ನು ನಾವಿಲ್ಲಿ ಪ್ರಮುಖವಾಗಿ ಗಮನಿಸ ಬೇಕಾಗಿದೆ.
ಬ್ರಹ್ಮಾಂಡದ ರಹಸ್ಯ ಅರಿಯಲು ಸಹಾಯಕವೆಂದು ಪರಿಗಣಿಸಿದ ಅಣು ಸಿದ್ಧಾಂತವನ್ನು ಮೊಟ್ಟ ಮೊದಲು ಶೋಧಿಸಿ ಪ್ರತಿಪಾದಿಸಿದ್ದು, ಭಾರತೀಯ ಋಷಿ ಪರಂಪರೆಯ ಮಹರ್ಷಿ ಕಣಾದ ( Atom Eater) ಎಂದು ಕರೆಯಲ್ಪಡುವ ಕಾಶ್ಯಪ, ಉಲೂಕ ಋಷಿ. ಇವರ ಕಾಲಘಟ್ಟ ಕ್ರಿಸ್ತ ಪೂರ್ವ 5ನೇ ಶತಮಾನವಾಗಿದ್ದು, ಭಾರತೀಯ ತತ್ವಶಾಸದ ಪಿತಾಮಹನೆಂದೂ (ವೈಶೇಷಿಕ) ಕರೆಯಲಾಗುತ್ತದೆ. ಗಣಿತ, ಎಥಿಕ್ಸ್, ಫಿಜಿಕ್ಸ್ ಜೊತೆಗೆ ‘ಅಟೋಯಿಸಂ’ (ಅಣು ಸಂಶೋಧನ) ಇವರ ಪ್ರಮುಖ ಕೊಡುಗೆ ಯಾಗಿದೆ.
ಹಾಗೇಯೇ, ಗ್ರೀಕ್ ಕಾಲದ ಪೈಥಾಗೋರಸ್ ಎಂಬ ಮೇಧಾವಿ ಕಾಶಿಗೆ ಬಂದು, ತನ್ನ ಎಲ್ಲ ಮಹತ್ತರ ಅಧ್ಯಯನವನ್ನು ಗಂಗೆಯ ದಡದ ಮೇಲೆ ಪಂಡಿತೋತ್ತಮರಿಂದ ರೇಖಾಗಣಿತ, ಗಣಿತಶಾಸ್ತ್ರಗಳನ್ನು ಕಲಿತು ಬಂದುದನ್ನು ಮತ್ತು ಜಾಮೆಟ್ರಿಯ ರಚನೆಯು ಭಾರತದಿಂದಲೇ ಕಲಿತದ್ದು ಎಂದಿದ್ದಾನೆ.
ಇನ್ನು, 19-20ನೇ ಶತಮಾನದಲ್ಲಿ, ವಿಮಾನದ ಕುರಿತು, ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಕೊಟ್ಟಿ ರುವ ಮಾಹಿತಿ, ವಿವರ ಆಧರಿಸಿ ಮೊಟ್ಟಮೊದಲು ಸಂಶೋಧನೆ ಮತ್ತು ನೂರಾರು ವಿನ್ಯಾಸಗಳ ರಚನೆಗಳನ್ನು ಸಂಸ್ಕೃತದಲ್ಲಿ ಮಾಡಿದ್ದು ಪಂ.ಸುಬ್ರಾಯ ಶಾಸ್ತ್ರೀಗಳು. ಇವರ ವಿಮಾನ ಸೂತ್ರ ಗಳನ್ನು ಆಧರಿಸಿಯೇ ರೈಟ್ ಸಹೋದರರು ವಿಮಾನ ಕಂಡುಹಿದರೆಂದು ನೂರಾರು ತನಿಖಾ ವರದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇಂದು ಎಲ್ಲ ವಾಹನಗಳಲ್ಲಿ, ವಿಮಾನ, ರಾಕೆಟ್ಟುಗಳ ವಿನ್ಯಾಸದಲ್ಲಿ ಬಳಸುತ್ತಿರುವ ‘ ero dynamic rule ’ ಕೂಡ ಇವರದೇ ಆಗಿದೆ. ಹೊಲಿಗೆಯಂತ್ರವನ್ನು ಸರ್ ಜಗದೀಶ್ ಚಂದ್ರಬೋಸ್ ಅವರು ತಯಾರಿಸಿದ್ದರೂ, ಈಲಿಯಾಸ್ ಹೋವೆ ಎಂಬಾತ ಪೇಟೆಂಟ್ ಪಡೆದುಕೊಂಡ! ಒಟ್ಟಾರೆ, ನಮ್ಮ ವರು ತಮ್ಮ ಸ್ವಂತಕ್ಕೆ, ಸ್ವಾರ್ಥಕ್ಕೆ, ಕೇವಲ ಹೆಸರುವಾಸಿಯಾಗಲು ಯತ್ನಿಸದೇ ಇಡೀ ಮನು ಕುಲಕ್ಕೆ ಒಳಿತಾದರೆ ಸಾಕೆಂಬ ಭಾವದಲ್ಲಿದ್ದವರು. ಹಾಗಾಗಿ, ಯಾವ ಶೋಧನೆಯಲ್ಲೂ ತಮ್ಮ ತನವನ್ನು ನಮೂದಿಸಲು ಪ್ರಯತ್ನಿಸಿಲ್ಲವೆನ್ನಬಹುದು.
ಹೀಗೆ ಇನ್ನೂ ಆಧುನಿಕ ವಿeನ ಹುಟ್ಟುವ ಮೊದಲೇ ನಮ್ಮ ಹಿರಿಯರು, ಋಷಿಮುನಿಗಳು ವಿಜ್ಞಾನ ವನ್ನು ಧಾರ್ಮಿಕವಾಗಿ, ಸಹಜ ಜೀವನದಲ್ಲಿ ಆಚರಿಸುವ ಹಬ್ಬಗಳಲ್ಲಿ ಮೇಳೈಸಿ ಎಲ್ಲರ ಒಳಿತು ಬಯಸಿ ಬರೆದಿದ್ದರು. ಹಾಗಾಗಿ, ಅನಾದಿ ಕಾಲದಿಂದಲೂ, ಹಿಂದೂ ಆಚರಣೆಗಳು ಅತ್ಯಂತ ಶುದ್ಧ ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿದ್ದು, ಇಂದಿಗೂ ಬಳಕೆಯಲ್ಲಿವೆ ಮತ್ತು ಇಂದಿನ ವಿಜ್ಞಾನವನ್ನೂ ಕೌತುಕಗೊಳಿಸುತ್ತಿವೆ.
ನಾಸಾದಂತಹ ಸಂಸ್ಥೆಗಳು ಕೆಲ ತಿಂಗಳು ಮುಂಚೆ ಮಾತ್ರ ಹೇಳಬಲ್ಲ ಗ್ರಹಣ ಇತ್ಯಾದಿ ಮಾಹಿತಿ ಯನ್ನು ನಮ್ಮ ಶಾಸಪಾಲಕರು ನೂರು ವರ್ಷಕ್ಕೂ ಮೊದಲೇ ಗ್ರಹಣ ಇತ್ಯಾದಿ ಖಗೋಳ ಮಾಹಿತಿ ಯನ್ನು ಪಂಚಾಂಗ, ಕ್ಯಾಲೆಂಡರ್‌ನಲ್ಲಿ ಮುಂಚಿತವಾಗಿಯೇ ಪ್ರಕಟಿಸುತ್ತಾರೆ. ಹೀಗೆ, ಜನಸಾಮಾನ್ಯ ರಲ್ಲಿ ಹಾಸುಹೊಕ್ಕಿರುವ ಭಾರತೀಯ ವಿeನವನ್ನು ನಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆ ಗಳಿಂದ ಬೇರ್ಪಡಿಸಿ ನೋಡುವುದು ಸಹ ಅಸಾಧ್ಯವೆಂತಲೇ ಹೇಳಬಹುದು.
ಇದಕ್ಕೆ ಇಂದು ನಡೆಯುತ್ತಿರುವ ವಿಶ್ವಮಟ್ಟದ ಕುಂಭಮೇಳ ಮಹೋತ್ಸವವೇ ಸಾಕ್ಷಿ. ಇದರ ಸಿದ್ಧತೆ ಯೇ ಒಂದು ವಿಶ್ವರೋಚಕವಾದುದು! ಇದಕ್ಕಾಗಿ, ಇಲ್ಲಿನ ಪ್ರಶಾಶನಕ್ಕೆ ಎಂತಹ ಪ್ರಶಸ್ತಿ ಕೊಟ್ಟು ಗೌರವಿಸಿದರೂ ಕಡಿಮೆಯೇ! 12 ಸಾವಿರ ಎಕರೆಯ ವಿಶಾಲ ಜಾಗದಲ್ಲಿ ಕೃತಕವಾಗಿ ನಿರ್ಮಿಸಿರುವ ಇಂದ್ರನ ಅರಮನೆಯಂತೆ ಎಲ್ಲೂ ಲಕ್ಷ ಲಕ್ಷ ಟೆಂಟುಗಳಲ್ಲಿ ಕಂಗೊಳಿಸುತ್ತಿರುವ ಪ್ರಯಾಗವು ನೂರು ದಾಖಲೆಗಳ ಸಂಗಮವೂ ಆಗಿದೆ.
ಒಂದು ಕಬ್ಬಿಣದ ಘನಗಟ್ಟಿ ಹಲಗೆಯ ಅಳತೆ 5 ಅಡಿ ಅಗಲ, 22 ಅಡಿ ಉದ್ದವಿದ್ದು, ಒಂದು ಮಾರ್ಗದಲ್ಲಿ ಇಂಥವುಗಳನ್ನು ನಾಲ್ಕು ಸಾಲುಗಳಲ್ಲಿ ಹಾಕಲಾಗಿದ್ದು, ಇದರ ಉದ್ದ 651 ಕಿ.ಮೀ. ಇದೆ. ಅಂದರೆ, 2600 ಕಿ.ಮೀನಷ್ಟು ಉದ್ದದ ಕಬ್ಬಿಣ ಹಲಗೆಯ ಮಾರ್ಗ ಬಳಸಿರುವುದು ಮಾತ್ರ ಅಸಾಧ್ಯ ಕಾರ್ಯವೇ! ಇದು ಕೇವಲ ಒಂದು ವಿಷಯವಾಯಿತು.
ಕುಡಿಯುವ ಶುದ್ಧನೀರು, ಶೌಚಾಲಯ ಇತ್ಯಾದಿ ಜನರಿಗೆ ಅಗತ್ಯವಿರುವ ಇಂತಹ ನೂರಾರು ಸುವ್ಯವಸ್ಥೆಗಳು ಇಡೀ ಕುಂಭಮೇಳದಲ್ಲಿ ನಮಗೆ ಕಂಡುಬರುತ್ತವೆ. ಇನ್ನುಳಿದಂತೆ, 13ಕ್ಕೂ ಹೆಚ್ಚು ಅಖಾಡಗಳಿಂದ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ತಮ್ಮ ಭಕ್ತಾದಿಗಳಿಗೆ ಏರ್ಪಡಿಸಿವೆ.
ಹಾಗೆಯೇ, ಸ್ಥಳೀಯ ಸಾವಿರಾರು ಯುವಜನತೆಗೆ ಉದ್ಯೋಗ, ಸ್ವಯಂ ಸಂಪಾದನೆ, ಹೊಟೆಲ್ ಮುಂತಾದ ಉದ್ದಿಮೆಗಳೂ ಇಲ್ಲಿ ಸರಾಗವಾಗಿ ನಡೆದಿವೆ. Modern science ಹೇಳಿದಂತೆ, ಸೌರ ಮಂಡಲದಲ್ಲಿ ದೊಡ್ಡಕಾಯ ಗುರು ಗ್ರಹವಾಗಿದ್ದು, ಇದು ಕ್ಷುದ್ರಗ್ರಹ, ಧೂಮಕೇತು, ಇತ್ಯಾದಿ ಹಾನಿಕಾರಕ ಆಕಾಶಕಾಯಗಳನ್ನು ತನ್ನತ್ತ ಸೆಳೆದು ಭೂಮಿಗೆ ಆಗಬಹುದಾದ ಅಪಾಯವನ್ನು ತಪ್ಪಿಸುತ್ತ ಬರುತ್ತಿದೆ. ಇದನ್ನು ನಮ್ಮ ಪುರಾತನ ಋಷಿಮುನಿಗಳು, ಆಚಾರ್ಯರು ಅರಿತು, ಅದಕ್ಕೇ ಶಾಸದಲ್ಲಿ ಗುರು ಗ್ರಹಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದು ಕಂಡುಬರುತ್ತದೆ.
ಗುರು ಗ್ರಹವು ತನ್ನ ಸುತ್ತ ಒಂದು ಸುತ್ತುಹಾಕಲು 12 ವರ್ಷ ತೆಗೆದುಕೊಳ್ಳುತ್ತದೆ. ಹೀಗೆ, ಒಂದು ನಿಗದಿತ ಮುಹೂರ್ತಕಾಲಕ್ಕೆ ಇದನ್ನು ಗುರುತಿಸಿ, ಕುಂಭಮೇಳವನ್ನು ಸಾವಿರಾರು ವರ್ಷಗಳಿಂದ ಆಚರಿಸುತ್ತ ಬರಲಾಗುತ್ತಿದೆ. ಹಾಗೆಯೇ, ನಮ್ಮ ಜ್ಯೋತಿಷ್ಯ ಶಾಸದಲ್ಲಿ ಬರುವ 12 ರಾಶಿಗಳ ಪ್ರತಿನಿಧಿತ್ವದಂತೆ 12 ಕುಂಭಮೇಳ ನಡೆದ ಕಾಲವನ್ನು ಪರಿಗಣಿಸಿ, 144 ವರ್ಷಕ್ಕೆ ಒಮ್ಮೆ ಮಹಾ ಕುಂಭ ಮಹೋತ್ಸವವನ್ನು ಆಚರಿಸುತ್ತ ಬರಲಾಗುತ್ತಿದೆ.
ಇಷ್ಟೊಂದು ವೈಜ್ಞಾನಿಕ ಪದ್ಧತಿಯ ಮೂಲಕ ತನ್ನ ಧರ್ಮ ಸಿದ್ಧಾಂತವನ್ನು ಆಚರಿಸುತ್ತ ಬರುತ್ತಿರುವುದು ಸನಾತನ ಹಿಂದೂ ಧರ್ಮ ಮಾತ್ರ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುವ ಆಪಲ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ನ ಪತ್ನಿ ಲಾರೆನ್ ಪಾವೆಲ್, ಇದೇ ಮಹಾಕುಂಭ ಮೇಳದಲ್ಲಿ ಹಿಂದೂ ಧರ್ಮಕ್ಕೆ ಅವರು ತಮ್ಮನ್ನು ಅರ್ಪಿಸಿಕೊಂಡು ಕಮಲಾ ಆಗಿದ್ದಾರೆ.
ಹೀಗೆ ಜಗತ್ತಿನ ಮೂಲೆಮೂಲೆಗೂ ತಲುಪುತ್ತಿರುವ ಸನಾತನ ಆಚರಣೆಯ ಪದ್ಧತಿಯು ಯಾರನ್ನೂ ಬಲವಂತವಾಗಿ ತನ್ನತ್ತ ಧರ್ಮಾಂತರ ಮಾಡಿಕೊಳ್ಳದೇ ತನ್ನ ಆಧ್ಯಾತ್ಮಕ ಶಕ್ತಿಯಿಂದಲೇ ವಿಶ್ವ ಪ್ರಸಿದ್ಧಿ ಗಳಿಸುತ್ತ ಹೋಗುತ್ತಿರುವುದು ಇದರ ಹಿರಿಮೆಯಾಗಿದೆ. ಇದು ನಮ್ಮೆಲ್ಲರ ಗೌರವ, ಗರಿಮೆ ಯೂ ಹೌದು!