ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಹೂಡಿಕೆದಾರರಿಗೆ ಗುಡ್‌ನ್ಯೂಸ್‌; ಸೆನ್ಸೆಕ್ಸ್‌ 1,078 ಅಂಕ ಜಿಗಿತ, 5 ಲಕ್ಷ ಕೋಟಿ ಲಾಭ

Stock Market: ಸೆನ್ಸೆಕ್ಸ್‌ 1,078 ಅಂಕ ಏರಿಕೊಂಡು 77,984 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 307 ಅಂಕ ಏರಿಕೆಯಾಗಿ 23,658ಕ್ಕೆ ಸ್ಥಿರವಾಯಿತು. ಇವತ್ತು ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿಎಸ್‌ಇಯಲ್ಲಿರುವ ಎಲ್ಲ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 418 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದ್ದು, 5 ಲಕ್ಷ ಕೋಟಿ ರುಪಾಯಿ ಸೇರ್ಪಡೆಯಾಗಿದೆ.

ಸೆನ್ಸೆಕ್ಸ್‌ 1,078 ಅಂಕ ಜಿಗಿತ, 5 ಲಕ್ಷ ಕೋಟಿ ಲಾಭ

Profile Rakshita Karkera Mar 24, 2025 4:38 PM

ಮುಂಬೈ: ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯ ಏರಿಕೆ ದಾಖಲಿಸಿದ್ದು ಸತತ 6 ದಿನಗಳಿಂದ ಏರುಗತಿಯಲ್ಲಿದೆ(Stock Market). ಬ್ಯಾಂಕಿಂಗ್‌ ಮತ್ತು ಐಟಿ ಸ್ಟಾಕ್‌ಗಳು ಸೋಮವಾರ ಹೆಚ್ಚಿನ ಲಾಭ ಗಳಿಸಿತು. ಸೆನ್ಸೆಕ್ಸ್‌ 1,078 ಅಂಕ ಏರಿಕೊಂಡು 77,984 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 307 ಅಂಕ ಏರಿಕೆಯಾಗಿ 23,658ಕ್ಕೆ ಸ್ಥಿರವಾಯಿತು. NSE ನಲ್ಲಿ ಟ್ರಾನ್ಸ್‌ಫಾರ್ಮರ್ಸ್‌ ಆಂಡ್‌ ರೆಕ್ಟಿಫೈರ್ಸ್‌, ಸೆನ್ಕೊ ಗೋಲ್ಡ್‌, ಕೋಟಕ್‌, ಜೆಎಸ್‌ಡಬ್ಲ್ಯು ಹೋಲ್ಡಿಂಗ್ಸ್‌, IGIL, ಕಾಫಿ ಡೇ ಎಂಟರ್‌ಪ್ರೈಸಸ್‌ ಸೇರಿದಂರೆ 183 ಷೇರುಗಳು ಇವತ್ತು ಅಪ್ಪರ್‌ ಸರ್ಕೂಟ್‌ ಅನ್ನು ಮುಟ್ಟಿವೆ.

ಕಳೆದ ಶುಕ್ರವಾರ ಅಂದ್ರೆ ಮಾರ್ಚ್‌ 22ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 7,470 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದ್ದು, ಇದು ಕಳೆದ 4 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟದ ಹೂಡಿಕೆಯಾಗಿದೆ. ಇದರೊಂದಿಗೆ ಷೇರು ಪೇಟೆಗೆ ಫಾರಿನ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ ಮರಳುತ್ತಿರುವುದು ಖಚಿತವಾದಂತಾಗಿದೆ. ಜತೆಗೆ ವಿದೇಶಿ ಹೂಡಿಕೆಯ ಈ ಪುನರಾಗಮನದಿಂದಾಗಿ ಷೇರು ಸೂಚ್ಯಂಕಗಳು ಏರುಗತಿಯಲ್ಲಿವೆ. ಕಳೆದ ವರ್ಷ ಸೆಪ್ಟೆಂಬರ್‌ ಕೊನೆಯ ವಾರದಿಂದ ವಿದೇಶಿ ಹೂಡಿಕೆದಾರರು ನಿರಂತರವಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದರು. ಇದರ ಪರಿಣಾಮ ಷೇರು ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಗಿತ್ತು.

ಇವತ್ತು ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿಎಸ್‌ಇಯಲ್ಲಿರುವ ಎಲ್ಲ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 418 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದ್ದು, 5 ಲಕ್ಷ ಕೋಟಿ ರುಪಾಯಿ ಸೇರ್ಪಡೆಯಾಗಿದೆ.

ಸೆನ್ಸೆಕ್ಸ್‌ ಪ್ಯಾಕ್‌ನಲ್ಲಿ ಪವರ್‌ ಗ್ರಿಡ್‌, L&T, ಕೋಟಕ್‌ ಮಹೀಂದ್ರಾ ಬ್ಯಾಂಕ್‌, NTPC, ಟೆಕ್‌ ಮಹೀಂದ್ರಾ ಹೆಚ್ಚಿನ ಲಾಭ ಗಳಿಸಿತು. ಮಹೀಂದ್ರಾ & ಮಹೀಂದ್ರಾ, ಅಲ್ಟ್ರಾ ಟೆಕ್‌ ಸಿಮೆಂಟ್‌, ಟೈಟನ್‌, ಇನ್ಫೋಸಿಸ್‌ ಮಂದಗತಿಯಲ್ಲಿತ್ತು. L&T ಷೇರಿನ ದರದಲ್ಲಿ 3% ಏರಿಕೆಯಾಯಿತು. 3,515 ರುಪಾಯಿಗೆ ಏರಿತು. ಕಂಪನಿಯ ಆಡಳಿತ ಮಂಡಳಿಯು 12,000 ಕೋಟಿ ರುಪಾಯಿಗಳ ಭಾರಿ ಫಂಡ್‌ ರೈಸಿಂಗ್‌ಗೆ ಅನುಮೋದನೆ ನೀಡಿದ ಬಳಿಕ ಷೇರು ದರ ಜಿಗಿದಿದೆ. NTPC ಷೇರಿನ ದರದಲ್ಲಿ 4.61% ಏರಿಕೆಯಾಗಿದ್ದು, 367 ರುಪಾಯಿಗೆ ಏರಿತು.

ಸೆಕ್ಟರ್‌ವೈಸ್‌ ನೋಡೋದಿದ್ದರೆ, ನಿಫ್ಟಿ ಬ್ಯಾಂಕ್‌, ಫೈನಾನ್ಷಿಯಲ್‌ ಸರ್ವೀಸ್‌, ಆಟೊಮೊಬೈಲ್‌, ಐಟಿ ಸೂಚ್ಯಂಕಗಳು 0.5%ರಿಂದ 1% ತನಕ ಏರಿಕೆಯಾಯಿತು. ಬ್ರಾಡರ್‌ ಮಾರ್ಕೆಟ್‌ನಲ್ಲಿ ನಿಫ್ಟಿ ಮಿಡ್‌ ಕ್ಯಾಪ್‌ 100 ಸೂಚ್ಯಂಕವು 1.1%, ನಿಫ್ಟಿ ಸ್ಮಾಲ್‌ ಕ್ಯಾಪ್‌ 100 ಇಂಡೆಕ್ಸ್‌ 1.6% ಏರಿತು.

ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್‌ 3,000 ಅಂಕ ಜಿಗಿತ- ಹೂಡಿಕೆದಾರರಿಗೆ 22 ಲಕ್ಷ ಕೋಟಿ ಲಾಭ; ಷೇರು ಮಾರಿ ಲಾಭ ಮಾಡ್ಬೋದಾ?

ಹಾಗಾದ್ರೆ ಸೆನ್ಸೆಕ್ಸ್‌, ನಿಫ್ಟಿಯ ಈ ಭಾರಿ ಏರಿಕೆಗೆ ಕಾರಣ ಏನು ಎಂಬುದನ್ನು ತಿಳಿಯೋಣ. ಮೊದಲ ಕಾರಣ ಏನೆಂದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಭಾರತೀಯ ಸ್ಟಾಕ್‌ ಮಾರ್ಕೆಟ್‌ನಲ್ಲಿ ಆಸಕ್ತಿಯಿಂದ ಹೂಡಿಕೆ ಮಾಡತೊಡಗಿದ್ದಾರೆ. ಭಾರತೀಯ ಆರ್ಥಿಕತೆಯ ಚೇತರಿಕೆ, ಉತ್ತಮ ಮೌಲ್ಯ ಸಿಕ್ಕಿರುವುದರಿಂದ ವಿದೇಶಿ ಹೂಡಿಕೆದಾರರು ಕಳೆದ ನಾಲ್ಕು ದಿನಗಳಿಂದ ನೆಟ್‌ ಸೆಲ್ಲರ್‌ ಬದಲಿಗೆ ನೆಟ್‌ ಬೈಯರ್ಸ್‌ ಆಗಿದ್ದಾರೆ.

ಮಾರುಕಟ್ಟೆ ಈಗ ಬುಲ್ಲಿಶ್‌ ಆಗಿದ್ದರೂ, ಗೂಳಿಯ ಅಬ್ಬರ ಇದ್ದರೂ, ಷೇರು ಹೂಡಿಕೆದಾರರು ಏಪ್ರಿಲ್‌ 2ರ ತನಕ ಕಾದು ನಿರ್ಧರಿಸುವುದು ಉತ್ತಮ. ಏಕೆಂದರೆ ಅಂದು ಭಾರತ ಸೇರಿದಂತೆ ಕೆಲ ದೇಶಗಳ ವಿರುದ್ಧ ಟ್ರಂಪ್‌ ಸರಕಾರದ ರೆಸಿಪ್ರೊಕಲ್‌ ಟಾರಿಫ್‌ಗಳು ಜಾರಿಯಾಗಲಿದೆ ಎನ್ನುತ್ತಾರೆ ಕೆಲವು ತಜ್ಞರು.

ಎರಡನೆಯದಾಗಿ ಷೇರುಗಳ ವಾಲ್ಯುಯೇಶನ್‌ ಕೂಡ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈ ಹಿಂದಿನ ಓವರ್‌ ವಾಲ್ಯುಯೇಶನ್‌ ಈಗ ಇಲ್ಲವಾಗಿದ್ದು, ಖರೀದಿಗೆ ಪ್ರೇರೇಪಣೆ ನೀಡುತ್ತಿದೆ.

ಮೂರನೆಯದಾಗಿ ಅಮೆರಿಕದ ಟ್ರೆಶರಿ ಯೀಲ್ಡ್ಸ್‌ನಲ್ಲಿ 40 ಬೇಸಿಸ್‌ ಪಾಯಿಂಟ್ಸ್‌ನಷ್ಟು ಕಡಿಮೆಯಾಗಿದೆ. 4.27%ಕ್ಕೆ ಇಳಿಕೆಯಾಗಿದೆ. ಟ್ರೆಶರಿ ಯೀಲ್ಡ್ಸ್‌ ಕಡಿಮೆ ಆದ್ರೆ ಹೂಡಿಕೆದಾರರು ಭಾರತದಂತಹ ಪ್ರಗತಿಶೀಲ ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಾರೆ.