ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ನಕಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ನೀಡುತ್ತಿದ್ದ ಮೂವರ ಬಂಧನ

ಸ್ಟಡಿ ಸೆಂಟರ್​ನಲ್ಲಿ ಕರೆಸ್ಪಾಂಡಿಂಗ್ ವ್ಯಾಸಂಗ ಮಾಡುವವರನ್ನು ದಾಖಲಿಸಿಕೊಳ್ಳುತ್ತಿದ್ದರು. ನಂತರ ಕಲವೇ ದಿನಗಳಲ್ಲಿ ಇವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತಿದ್ದರು. ಆರೋಪಿಗಳು ಧಾರವಾಡದಲ್ಲಿ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದೆ.

ನಕಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ನೀಡುತ್ತಿದ್ದ ಮೂವರ ಬಂಧನ

ಹರೀಶ್‌ ಕೇರ ಹರೀಶ್‌ ಕೇರ Mar 26, 2025 7:13 AM

ಬೆಂಗಳೂರು: ಪಿಯುಸಿ (PUC) ಮತ್ತು ಎಸ್​ಎಸ್​ಎಲ್​​ಸಿ (SSLC) ತತ್ಸಮಾನ ಎಂದು ನಕಲಿ ಅಂಕಪಟ್ಟಿ (marks sheet) ನೀಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು (Fraud Case) ಬಂಧಿಸಿದ್ದಾರೆ. ಆರೋಪಿಗಳು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ಟಡಿ ಸೆಂಟರ್​ಗಳನ್ನು ತೆರೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಅಲ್ಲದೇ, ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ಆರೋಪಿಗಳು ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿದ್ದುಕೊಂಡು ಈ ಅಕ್ರಮ ದಂಧೆ ನಡೆಸುತ್ತಿದ್ದರು.

ಸ್ಟಡಿ ಸೆಂಟರ್​ನಲ್ಲಿ ಕರೆಸ್ಪಾಂಡಿಂಗ್ ವ್ಯಾಸಂಗ ಮಾಡುವವರನ್ನು ದಾಖಲಿಸಿಕೊಳ್ಳುತ್ತಿದ್ದರು. ನಂತರ ಕಲವೇ ದಿನಗಳಲ್ಲಿ ಇವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತಿದ್ದರು. ಆರೋಪಿಗಳು ಧಾರವಾಡದಲ್ಲಿ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳು ಸುಮಾರು 350 ಜನರಿಗೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದುಬಂದಿದೆ.

ಇವರಿಂದ ನಕಲಿ ಅಂಕಪಟ್ಟಿ ಪಡೆದವರು ಸಾರಿಗೆ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಆರೋಪಿಗಳು 5ರಿಂದ 10 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಸರ್ಕಾರಿ ಇಲಾಖೆಗಳು ಕೆಲಸ ನೀಡುವ ಮೊದಲು ಪರಿಶೀಲನೆ ಮಾಡಿದಾಗ ಸಹ ಇದು ಅಸಲಿ ಅಂಕಪಟ್ಟಿ ಎಂದು ಆರೋಪಿಗಳು ಮಾಹಿತಿ ನೀಡಿದ್ದರು. ಈ ಮಾದರಿಯ ಅಂಕಪಟ್ಟಿ ಎಲ್ಲಿಯಾದರೂ ಸಲ್ಲಿಕೆಯಾಗಿದ್ದಲ್ಲಿ ಸಿಸಿಬಿಗೆ ಮಾಹಿತಿ ನೀಡುವಂತೆ ಪೊಲೀಸರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Identify Fake Garlic: ಮಾರುಕಟ್ಟೆಗೆ ಬಂದಿದೆ ನಕಲಿ ಬೆಳ್ಳುಳ್ಳಿ; ಖರೀದಿಸುವ ಮುನ್ನ ಹೀಗೆ ಪರಿಶೀಲಿಸಿ