Self Harming: ಬೆಳಗಾವಿ ಪಿಜಿಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆ; ಯುವತಿ ಸಾವಿಗೆ ಕಾರಣವಾಯ್ತಾ ಲವ್ ಬ್ರೇಕಪ್?
Self Harming: ಎಂಬಿಎ ಪದವಿ ಓದಿದ್ದ ಯುವತಿ ಕಳೆದ ಮೂರು ತಿಂಗಳಿನಿಂದ ಬೆಳಗಾವಿ ನಗರದ ಪಿಜಿಯಲ್ಲಿದ್ದಕೊಂಡು, ಖಾಸಗಿ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಳು. ಮಂಗಳವಾರ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಬೆಳಗಾವಿ: ಕುಂದಾನಗರಿಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿಯ ನೆಹರು ನಗರದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಸೈಡ್‌ಗೆ ಲವ್ ಬ್ರೇಕಪ್ ಕಾರಣವಾವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯ ಐಶ್ವರ್ಯಲಕ್ಷ್ಮೀ ಗಲಗಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಆತ್ಮಹತ್ಯೆಗೂ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಮ್‌ಗೆ ಹೋಗಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಂಬಿಎ ಪದವಿ ಓದಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ಸಾಯಿಕೃಪಾ ಪಿಜಿಯಲ್ಲಿದ್ದಕೊಂಡು, ಬೆಳಗಾವಿಯ ಎಕಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಳು. ಆದರೆ, ಮಂಗಳವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದಕ್ಕೂ ಮುನ್ನಾ ಗೆಳತಿಯೊಂದಿಗೆ ಐಶ್ವರ್ಯ ಮಾತನಾಡಿ ಕಾಲ್ ಕಟ್ ಮಾಡಿದ್ದಳು. ನಂತರ ಪೋನ್ ರಿಸೀವ್ ಮಾಡದಿದ್ದಕ್ಕೆ ಪಿಜಿಗೆ ಗಾಬರಿಯಿಂದ ಬಂದಿದ್ದ ಸ್ನೇಹಿತ. ಸಿಸಿಟಿವಿಯಲ್ಲಿ ಐಶ್ವರ್ಯ ಸ್ನೇಹಿತ ಪಿಜಿಗೆ ಬರೋ ದೃಶ್ಯ ಸೆರೆಯಾಗಿದೆ. ಪಿಜಿ ರೂಮ್ ಬಾಗಿಲು ಒಡೆದು ನೋಡಿದಾಗ ಐಶ್ವರ್ಯಲಕ್ಷ್ಮೀ ಸೂಸೈಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದು, ಐಶ್ವರ್ಯ ಮೊಬೈಲ್ ಕಾಲ್ ಡಿಟೈಲ್ಸ್ ಪರಿಶೀಲನೆಗೆ ಮುಂದಾಗಿದ್ದಾರೆ. ಪಿಜಿಗೆ ಬಂದು ಹೋದ ಯುವತಿಯ ಸ್ನೇಹಿತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಫೇಲ್ ಆಗುವ ಭಯದಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಫಾರೆಸ್ಟ್ ಕಾಲನಿಯಲ್ಲಿ ನಡೆದಿದೆ. ದೀಪಿಕಾ ರಾಜೇಂದ್ರ ಬಡಿಗೇರ (16) ಮೃತ ವಿದ್ಯಾರ್ಥಿನಿ. ಪರೀಕ್ಷೆ ಬರೆದು ಬಂದಿದ್ದ ದೀಪಿಕಾ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗುವ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಸೋಮವಾರ ಎರಡನೇ ವಿಷಯದ ಪರೀಕ್ಷೆ ಬರೆದು ಬಂದಿದ್ದಳು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Honey trap Case: ಹನಿಟ್ರ್ಯಾಪ್ ತನಿಖೆಗೆ ಕೋರಿದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್
ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟ ಎಂಇಎಸ್ ಮುಖಂಡ ಬಂಧನ

ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗೆ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಎಂಇಎಸ್ ಯುವ ಮುಖಂಡ ಶುಭಂ ಶೆಳಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಾಳಮಾರುತಿ ಠಾಣೆ ಪೊಲೀಸರು ಶುಭಂ ಶೆಳಕೆಯನ್ನು ಬಂಧಿಸಿ, ಜಿಲ್ಲಾಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಗೆ ಗಡಿ, ಭಾಷೆಯ ಪ್ರಸ್ತಾಪ ಮಾಡಿ ಪ್ರಚೋದನಕಾರಿ ಭಾಷಣ ಮಾಡಿದ ಪರಿಣಾಮ ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿ ಬಳಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಶುಭಂ ತನ್ನ ಫೇಸ್‌ಬುಕ್ ಖಾತೆಯಲ್ಲಿ ಸಮರ್ಥಿಸಿಕೊಂಡಿದ್ದರು. 'ಕರ್ನಾಟಕದಲ್ಲಿರುವ ಕನ್ನಡ ಸಂಘಟನೆಗಳು ನಾಲಾಯಕ್' ಎಂದು ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟು, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸೌಹಾರ್ದತೆ ಕದಡಲು ಯತ್ನಿಸಿದ್ದರು ಎಂಬ ಆರೋಪದಡಿ ಮಾಳಮಾರುತಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು.
ಅಲ್ಲದೇ, ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಕಿಣಿಯೆ ಗ್ರಾಮದ ಪಿಡಿಒಗೆ ಬೆದರಿಕೆ ಹಾಕಿದ ತಿಪ್ಪಣ್ಣ ಡೋಕ್ರೆ ಎಂಬಾತನನ್ನು ಸನ್ಮಾನಿಸಿದ್ದರು. ಮೇಲಿಂದ ಮೇಲೆ ಕನ್ನಡ ವಿರೋಧಿ ಹಾಗೂ ಭಾಷಾ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Pralhad Joshi: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಪ್ರಲ್ಹಾದ್ ಜೋಶಿ