Saturday, 18th May 2024

ನನಗೆ ಮತ ಹಾಕಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ: ಡಾ.ಪ್ರಭಾ ಮಲ್ಲಿಕಾರ್ಜುನ್

ಹರಪನಹಳ್ಳಿ: ಹರಪನಹಳ್ಳಿ ತಾಲೂಕು ಅಭಿವೃದ್ದಿಯಾಗಲು ನನಗೆ ಮತ ಹಾಕಿ ಗೆಲ್ಲಿಸಿ ನಿಮ್ಮ ಧ್ವನಿಯಾಗಿ ಅಭಿವೃದ್ದಿ ಮಾಡುತ್ತೇನೆ ಈ ಹಿಂದೆ ಲೋಕಸಭಾ ಸದಸ್ಯರಾಗಿ ಅಧಿಕಾರ ಅನುಭವಿಸಿದ ಬಿಜೆಪಿ ಸಂಸದರ ಸಾಧನೆ ಶೂನ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಆರೋಪಿಸಿದರು.

ಪಟ್ಟಣದಲ್ಲಿ ಹರಿಹರ ವೃತ್ತದಿಂದ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಪ್ರವಾಸಿ ಮಂಧಿರ ವೃತ್ತಕ್ಕೆ ತೆರದ ವಾಹನದಲ್ಲಿ ತೆರಳಿ ತಾಲೂಕಿನ ಮತದಾರರ ಸಮ್ಮುಖದಲ್ಲೇ ಬಹಿರಂಗಸಭೆಯಲ್ಲಿ ಮಾತನಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಏಂಟು ಜನ ಶಾಸಕರಲ್ಲಿ ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ಆದರೆ ಕಾಂಗ್ರೆಸ್ ಪಕ್ಷದ ಸಂಸದರ ಕೊರತೆ ಎದ್ದು ಕಾಣುತ್ತಿದ್ದು, ಆ ಕೊರತೆಯನ್ನು ಈ ಬಾರಿ ನನಗೆ ಮತ ಹಾಕುವುದರ ಮೂಲಕ ನೀಗಿಸಬೇಕು ಎಂದು ಅವರು ಮತದಾರರಲ್ಲಿ ಕೋರಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ನಂಬಿಕೆ ಇದ್ದು, ಬಡವರ, ಮಹಿಳೆಯರ ಪರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ನಾನು ಸಹ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ ಕಳೆದ ೧೧ ತಿಂಗಳಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿ ದ್ದೇನೆ. ಹರಪನಹಳ್ಳಿ ಪಟ್ಟಣಕ್ಕೆ ೧೦೦ಕೋಟಿ ರೂ. ಅನುದಾನ ತಂದಿದ್ದೇನೆ. ಅದರಲ್ಲಿ ಪಟ್ಟಣದ ಅಯ್ಯನಕೆರೆ ಸ್ವಚ್ಚತೆ ಸೇರಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿಗಳಿAದ ಬಡವರ ಬದುಕು ಹಸನಾಗಿದ್ದು, ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಆದ್ದರಿಂದ ಎಲ್ಲರೂ ಕಾAಗ್ರೆಸ್ ಅಭ್ಯರ್ಥಿ ಡಾ.ಪ್ರಭ ಮಲ್ಲಿಕಾರ್ಜುನ ಅವರಿಗೆ ಹರಪನಹಳ್ಳಿ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕಾರಿಯಾಗಬೇಕು ಎಂದು ಕೋರಿದರು.

ಕಾಂಗ್ರೆಸ್ ಮುಖಂಡ ಎನ್.ಕೊಟ್ರೇಶ್ ಮಾತನಾಡಿ ಕೇಂದ್ರದಲ್ಲಿ ೧೦ ವರ್ಷ ಆಡಳಿತ ಮಾಡಿದ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆಗಳ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದು, ಬರೀ ಧರ್ಮ, ಧರ್ಮಗಳ ನಡುವೆ ಕೋಮುಭಾವನೆಯನ್ನು ಮೂಡಿಸುತ್ತಿದೆ ಎಂದು ಆರೋಪಿಸಿದರು.

ಇದಕ್ಕೂ ಪೂರ್ವದಲ್ಲಿ ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆಯ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೂ ಬೃಹತ್ ಜನಸ್ತೋಮದೊಂದಿಗೆ ರೋಡ್ ಶೋ ನಡೆಸಿ, ಮತಯಾಚಿಸಲಾಯಿತು.

ಈ ಮೆರವಣಿಗೆಯಲ್ಲಿ ಮಹಾತ್ಮಗಾಂಧಿ ವೇಷದಾರಿಯೊಬ್ಬ ಎಲ್ಲರ ಗಮನ ಸೆಳೆದರು, ದಾರಿಯುದ್ದಕ್ಕು ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅAಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಗೌಡ, ಮುಖಂಡರಾದ ಹೆಚ್.ಎಂ. ಮಲ್ಲಿಕಾರ್ಜುನ, ಬೇಲೂರು ಅಂಜಪ್ಪ, ಶಶಿಧರ ಪೂಜಾರ, ಹೆಚ್. ಕೆ.ಹಾಲೇಶ್, ವಸಂತಪ್ಪ, ಪುರಸಭೆ ಸದಸ್ಯರಾದ ಟಿ.ವೆಂಕಟೇಶ್, ಲಾಟಿ ದಾದಾಪೀರ, ಜಾಕೀರ್ ಹುಸೇನ್, ಹೆಚ್.ಕೊಟ್ರೇಶ್, ಉದ್ದಾರ ಗಣೇಶ್, ಟಿ.ಎಚ್.ಎಂ.ಮAಜುನಾಥ, ಹಲಗೇರಿ ಮಂಜಪ್ಪ, ಎಲ್. ಮಂಜ್ಯನಾಯ್ಕ, ದಂಡಿನ ಹರೀಶ್, ಮಲ್ಲಿಕಾರ್ಜುನ ಕಲ್ಮಠ, ಹುಲಿಕಟ್ಟಿ ಚಂದ್ರಪ್ಪ, ಮತ್ತೂರು ಬಸವರಾಜ, ಇಟ್ಟಿಗುಡಿ ಆಂಜಿನಪ್ಪ, ಎನ್. ಶಂಕರ್, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!