ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Schools: ಅತಿಹೆಚ್ಚು ಅಂತರಾಷ್ಟ್ರೀಯ ಶಾಲೆ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ!

International Schools: ಮಕ್ಕಳಿಗೆ ಪಾಶ್ಚಾತ್ಯ ಬೋಧನ ಕ್ರಮ, ವಿದೇಶಿ ಪಠ್ಯ ಅನುಸರಿಸಬೇಕೆ ಇಲ್ಲ ದೇಶಿಯ ಶಿಕ್ಷಣ ಮಂಡಳಿಂದ ಮಾನ್ಯತೆ ಪಡೆದ ದೇಶಿಯ ಪಠ್ಯಕ್ರಮ ಅನುಸರಿಸಬೇಕೆ? ಎಂಬ ಬಗ್ಗೆ ಅನೇಕ ವರ್ಷಗಳಿಂದಲೂ ಚಿಂತನೆ ನಡೆಯುತ್ತಿತ್ತು. ಎರಡಕ್ಕೂ ಅನುಕೂಲವಾಗುವ ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಭಾರತದಲ್ಲಿ ಪ್ರಚಲಿತವಾಗಿದ್ದು ಈಗ ಜಗತ್ತಿನಲ್ಲೇ ಅಂತಾರಾಷ್ಟ್ರೀಯ ಶಾಲೆ ಹೊಂದಿದ್ದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನಕ್ಕೆ ತಲುಪಿದೆ.

ಅಂತರಾಷ್ಟ್ರೀಯ ಶಾಲೆಗಳ ಸಂಖ್ಯೆ ಹೆಚ್ಚಳ! ಭಾರತಕ್ಕೆ ದ್ವಿತೀಯ ಸ್ಥಾನ

Profile Pushpa Kumari Apr 1, 2025 4:50 PM

ನವದೆಹಲಿ: ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ಪೋಷಕರ ಮನದಾಸೆಯಾಗಿರುತ್ತದೆ. ಹೀಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ (International Schools) ಮಟ್ಟದಲ್ಲಿ ಮಾನ್ಯತೆ ಪಡೆದ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಿಂದೆಲ್ಲ ಹಣಕಾಸಿನ ವ್ಯವಸ್ಥೆ ಉತ್ತಮವಾಗಿ ಇದ್ದವರು ಮಾತ್ರವೇ ತಮ್ಮ ಮಕ್ಕಳನ್ನು ಅಂತಾರಾಷ್ಟ್ರೀಯ ಶಾಲೆಗಳಿಗೆ ದಾಖಲಿಸುತ್ತಿದ್ದರು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿ ಸಾಮಾನ್ಯ, ಮಧ್ಯಮ ಬಡವರ್ಗದವರು ಕೂಡ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಖುಷಿಯ ವಿಚಾರ. ಹೀಗಾಗಿ ಭಾರತವು ಇಂದು ಗರಿಷ್ಠ ಅಂತಾರಾಷ್ಟ್ರೀಯ ಶಾಲೆಗಳನ್ನು ಹೊಂದಿರುವ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಜಾಗತಿಕ ಶಿಕ್ಷಣ ಮಂಡಳಿಗಳಿಂದ ಭಾರತಕ್ಕೆ ವಿಶೇಷ ಮಾನ್ಯತೆ ದೊರೆತಿದೆ.

ಮಕ್ಕಳಿಗೆ ಪಾಶ್ಚಾತ್ಯ ಬೋಧನ ಕ್ರಮ, ವಿದೇಶಿ ಪಠ್ಯ ಅನುಸರಿಸಬೇಕೆ ಇಲ್ಲ ದೇಶಿಯ ಶಿಕ್ಷಣ ಮಂಡಳಿಂದ ಮಾನ್ಯತೆ ಪಡೆದ ದೇಶಿಯ ಪಠ್ಯಕ್ರಮ ಅನುಸರಿಸಬೇಕೆ? ಎಂಬ ಬಗ್ಗೆ ಅನೇಕ ವರ್ಷಗಳಿಂದಲೂ ಚಿಂತನೆ ನಡೆಯುತ್ತಿತ್ತು. ಎರಡಕ್ಕೂ ಅನುಕೂಲವಾಗುವ ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಭಾರತದಲ್ಲಿ ಪ್ರಚಲಿತವಾಗಿದ್ದು ಈಗ ಜಗತ್ತಿನಲ್ಲೇ ಅಂತಾರಾಷ್ಟ್ರೀಯ ಶಾಲೆ ಹೊಂದಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನಕ್ಕೆ ತಲುಪಿದೆ.

ನಮ್ಮ ದೇಶದಲ್ಲಿ ಆರಂಭಿಕ ಹಂತದಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದ ಕಾಲಘಟ್ಟದಲ್ಲಿ ಕೇವಲ 8 ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಿತ್ತು. ಐಬಿ ಶಿಕ್ಷಣ ಕೋರ್ಸ್ ಐಜಿಸಿಎಸ್ಇ ನೀಡುತ್ತಿದ್ದ ಕ್ಯಾಂಬ್ರಿಡ್ಜ್ ಕೋರ್ಸ್ ಕೂಡ ಬಹಳ ಕಡಿಮೆ ಸಂಖ್ಯೆಯಲ್ಲಿ ಇತ್ತು. 2011ರ ಬಳಿಕ ಕ್ಯಾಂಬ್ರಿಡ್ಜ್ ಅಂತಾರಾಷ್ಟ್ರೀಯ ಶಾಲೆ ಸಂಖ್ಯೆ 197 ಮತ್ತು ಅಂತಾರಾಷ್ಟ್ರೀಯ ಬ್ಯಾಚುಲರೆಟ್‌ ಶಾಲೆಯ ಸಂಖ್ಯೆ 99 ಆಗಿದ್ದವು. ಇದೀಗ ಪ್ರಪಂಚದ ಅಂತಾರಾಷ್ಟ್ರೀಯ ಶಾಲೆಗಳ ದಾಖಲೆಯ ಮರುಪರಿಶೀಲನೆ ಆಗಿದೆ.

ಐಎಸ್ಇ ಸಂಶೋಧನೆಯ ಪ್ರಕಾರ 2019ರಲ್ಲಿ 884 ಅಂತಾರಾಷ್ಟ್ರೀಯ ಶಾಲೆಗಳಿದ್ದವು. ಇದೀಗ 2025ಕ್ಕೆ ಈ ಶಾಲೆಯ ಸಂಖ್ಯೆ 972ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಐಜಿಸಿಎಸ್ಇ ಶಾಲೆಗಳಿದ್ದು, ಅದರಲ್ಲಿ 210 ಶಾಲೆಗಳಿಗೆ ಐಬಿ ಮಾನ್ಯತೆ ಸಹ ಸಿಕ್ಕಿದೆ. ಇದೇ ತರ ಕರ್ನಾಟಕ, ತೆಲಂಗಾಣ, ತಮಿಳುನಾಡಿನಲ್ಲಿ ಕೂಡ ಅಂತಾರಾಷ್ಟ್ರೀಯ ಶಾಲೆಗಳ ಸಂಖ್ಯೆ ಏರಿಕೆಯಾಗಿವೆ. ಈ ಮೂಲಕ ಒಟ್ಟು ಅಂತಾರಾಷ್ಟ್ರೀಯ ಶಾಲೆಗಳ ಸಂಖ್ಯೆ 14833ಕ್ಕೆ ಏರಿಕೆಯಾಗಿದೆ.

ಕಾರಣ ಏನು?

  • ಭಾರತದಲ್ಲಿ ಅನಿವಾಸಿಗಳ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಅಂತಾರಾಷ್ಟ್ರೀಯ ಶಾಲೆಗಳಿಗೆ ಮಾನ್ಯತೆ ನೀಡುತ್ತಿದೆ.
  • ವಿದೇಶದಲ್ಲಿ ನೆಲೆಸಿರುವ ಕುಟುಂಬಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಭಾರತದಲ್ಲಿ ಅಂತಾರಾಷ್ಟ್ರೀಯ ಶಾಲೆಗಳ ಮೇಲೆ ಅವಲಂಬಿತವಾಗಿದೆ.
  • ಮುಂಬೈ, ಬೆಂಗಳೂರು, ಹೈದ್ರಾಬಾದ್ ಇತರ ಭಾಗದಲ್ಲಿ ಅಂತಾರಾಷ್ಟ್ರೀಯ ಶಾಲೆಗಳ ಮೇಲೆ ಹೂಡಿಕೆ ಮಾಡುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ.
  • ಇತ್ತೀಚಿನ ಜನಾಂಗ ವಿದ್ಯಾವಂತರಾಗಿದ್ದು ಅಧಿಕ ಆದಾಯ ಹೊಂದಿದ್ದಾರೆ. ಹೀಗಾಗಿ ಮಕ್ಕಳ ಶಿಕ್ಷಣ ಉಜ್ವಲವಾಗಿರಲು ಬಯಸುತ್ತಾರೆ ಹಾಗಾಗಿ ಕೂಡ ಅಂತಾರಾಷ್ಟ್ರೀಯ ಶಾಲೆಗಳ‌ ಸಂಖ್ಯೆ ಹೆಚ್ಚಾಗಿದೆ.

ಇದನ್ನು ಓದಿ: Moral Education: ಈ ವರ್ಷದಿಂದಲೇ ಪ್ರೌಢಶಾಲೆ ಮಕ್ಕಳಿಗೆ ನೈತಿಕ, ಲೈಂಗಿಕ ಶಿಕ್ಷಣ

  • ಮಕ್ಕಳು ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಲಿತರೆ ಪಾಶ್ಚಾತ್ಯ ದೇಶದಲ್ಲಿ ಇರಬಹುದು, ಜಾಗತಿಕ ಅವಕಾಶಗಳನ್ನು ಬಹಳ ಸುಲಭವಾಗಿ ಪಡೆಯಲು ಸಬಲರಾಗುತ್ತಾರೆ ಎಂಬ ಕಾರಣಕ್ಕೂ ಪೋಷಕರು ತಮ್ಮ ಮಕ್ಕಳಿಗೆ ಅಂತಾರಾಷ್ಟ್ರೀಯ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದಾರೆ.
  • ನಗರಗಳು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದಂತೆ ರಾಷ್ಟ್ರೀಯ ಪಠ್ಯಕ್ರಮಗಳು ಕೂಡ ಅಂತಾರಾಷ್ಟ್ರೀಯ ಪಠ್ಯಕ್ರಮದ ಜೊತೆಗೆ ಸಾಗುತ್ತಿದ್ದು ಇದು ಕೂಡ ಅಂತಾರಾಷ್ಟ್ರೀಯ ಶಾಲೆಯ ಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಾಗಲು ಕಾರಣವಾಗಿದೆ ಎನ್ನಬಹುದು.