Career After PUC: ಪಿಯುಸಿ ಮುಗೀತು.. ಮುಂದೇನು? ಈ ಕೋರ್ಸ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?
Career After PUC: ಪಿಯುಸಿ ಫಲಿತಾಂಶವನ್ನು ಕೈಯಲ್ಲಿಟ್ಟುಕೊಂಡಿರುವ ವಿದ್ಯಾರ್ಥಿ ಹಾಗೂ ಅವರ ಪೋಷಕರಿಗೆ ಪಿಯುಸಿ ನಂತರ ಏನು ಮಾಡಬೇಕು? ಯಾವ ವಿಷಯ ಆಯ್ಕೆಗೆ ಹೆಚ್ಚು ಬೇಡಿಕೆ ಇದೆ? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ಸರಿಯಾದ ನಿರ್ಧಾರ ಬಹಳ ಮುಖ್ಯ. ಆದಾಗ್ಯೂ ಪಿಯುಸಿ ನಂತರದ ಕೋರ್ಸ್ ಆಯ್ಕೆ ಬಗ್ಗೆ ಸ್ವಲ್ಪ ಗೊಂದಲವಾಗುವುದು ಸಾಮಾನ್ಯ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ ಉತ್ತರ ಇಲ್ಲಿದೆ ನೋಡಿ


ಬೆಂಗಳೂರು: ಈ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿದ್ದು, ಎಸ್‌ಎಸ್‌ಎಲ್‌ಸಿ(SSLC) ಹಾಗೂ ಪಿಯುಸಿ(PUC) ಬಹಳ ಮಹತ್ವದ ಘಟ್ಟವಾಗಿದೆ. ಅದರಲ್ಲೂ ದ್ವಿತೀಯ ಪಿಯುಸಿ ಮುಗಿಸಿದ(Career After PUC) ಬಳಿಕ ಮುಂದಿನ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ, ಭವಿಷ್ಯದ ಬಗ್ಗೆ ಯೋಚಿಸಿ ನಂತರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಗಳ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದ್ದು, ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳುವ ಕೋರ್ಸ್ (Course) ನಮ್ಮ ಜೀವನವನ್ನು ರೂಪಿಸುತ್ತದೆ.
ಸದ್ಯ ಪಿಯುಸಿ ಫಲಿತಾಂಶವನ್ನು ಕೈಯಲ್ಲಿಟ್ಟುಕೊಂಡಿರುವ ವಿದ್ಯಾರ್ಥಿ ಹಾಗೂ ಅವರ ಪೋಷಕರಿಗೆ ಪಿಯುಸಿ ನಂತರ ಏನು ಮಾಡಬೇಕು? ಯಾವ ವಿಷಯ ಆಯ್ಕೆಗೆ ಹೆಚ್ಚು ಬೇಡಿಕೆ ಇದೆ? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ಸರಿಯಾದ ನಿರ್ಧಾರ ಬಹಳ ಮುಖ್ಯ. ಆದಾಗ್ಯೂ ಪಿಯುಸಿ ನಂತರದ ಕೋರ್ಸ್ ಆಯ್ಕೆ ಬಗ್ಗೆ ಸ್ವಲ್ಪ ಗೊಂದಲವಾಗುವುದು ಸಾಮಾನ್ಯ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ ಉತ್ತರ ಇಲ್ಲಿದೆ ನೋಡಿ..
ಸೈನ್ಸ್ ತೆಗೆದುಕೊಂಡವರಿಗೆ ಈ ಕೋರ್ಸ್ ಗಳು
ಪಿಯುಸಿಯಲ್ಲಿ ವಿಜ್ಞಾನ ಓದಿದ ವಿದ್ಯಾರ್ಥಿಗಳಿಗೆ ನಂತರದಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಪದವಿಯಂತಹ ಪ್ರಮುಖ ಫೀಲ್ಡ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶಗಳಿವೆ. ದ್ವಿತೀಯ ಪಿಯುಸಿ ಹಂತದಲ್ಲಿ ವಿದ್ಯಾರ್ಥಿಯು ತಾನು ಓದುವಾಗಲೇ ಮುಂದಿನ ನನ್ನ ಹಾದಿ ಯಾವುದು ಎಂದು ತಿಳಿದಿರಬೇಕು. ಆಗ ಮಾತ್ರ ತನ್ನ ಆಯ್ಕೆಗಳ ಬಗ್ಗೆ ಅಲೋಚಿಸಲು ಅವಕಾಶ. ದ್ವಿತೀಯ ಪಿಯುಸಿ ನಂತರ ಯಾವೆಲ್ಲಾ ಪಾಪ್ಯುಲರ್ ಕೋರ್ಸ್‌ಗಳಿಗೆ ಸೇರಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪಿಯುಸಿ ನಂತರ ವಿಜ್ಞಾನ ಓದಿದ ವಿದ್ಯಾರ್ಥಿಗಳು ಬಿಸಿಎ, ಐಟಿ ಮತ್ತು ಸಾಫ್ಟ್‌ವೇರ್, ಫಾರ್ಮಸಿ, ಆಂಥ್ರಾಪಾಲಜಿ, ಆಕುಪೇಶನಲ್ ಥೆರಪಿ, ಫಿಸಿಯೋಥೆರಪಿ, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಎಕಾನಾಮಿಕ್ಸ್, ಜೂವಾಲಜಿ / ಬಾಟನಿ, ಬಯೋಕೆಮಿಸ್ಟ್ರಿ, ಮೈಕ್ರೋಬಯೋಲಜಿ, ಬಯೋಮೆಡಿಕಲ್ ಸೈನ್ಸ್, ಬಯೋಟೆಕ್ನಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್ ಡಿಗ್ರಿ ಕೋರ್ಸ್‌ಗಳನ್ನು ಓದಬಹುದು. ಇದಲ್ಲದೇ ವಿಜ್ಞಾನ ಪಿಯುಸಿ ಓದಿದವರು ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಇಎಂಎಸ್, ಹೋಮಿಯೋಪತಿ, ಯುನಾನಿ ಮತ್ತು ಇತರೆ ವೈದ್ಯಕೀಯ ಕೋರ್ಸ್‌ಗಳನ್ನು ಕಲಿಯಲು ಅವಕಾಶವಿದ್ದು, ಇಂಜಿನಿಯರಿಂಗ್ ಕೋರ್ಸ್ ಗಳಾದ ಸಿವಿಲ್, ಮೆಕ್ಯಾನಿಕ್ಸ್, ಸಿಎಸ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ ಮತ್ತು ಇತರೆ ವಿಭಾಗಗಳಲ್ಲಿ ಬಿಇ, ಬಿ.ಟೆಕ್ ಹಾಗೂ ಬಿ ಆರ್ಚ್ ಅಧ್ಯಯನ ಮಾಡಬಹುದಾಗಿದೆ.
ಇದರ ಹೊರತಾಗಿ ಆ ಬ್ರ್ಯಾಂಚ್ ಹೊರತಾಗಿಯೂ ಅನೇಕ ಬ್ರ್ಯಾಂಚ್‌ಗಳು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿವೆ. ಡಿಪ್ಲೊಮ ಇಂಜಿನಿಯರಿಂಗ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆರ್ಕಿಟೆಕ್ಚರ್, ಬೇಕರಿ ಮತ್ತು ಕನ್ಪೆಕ್ಷನರಿ, ಫುಡ್ ಪ್ರೋಡಕ್ಷನ್, ಫ್ಯಾಷನ್ ಡಿಸೈನ್, ಬಿಜಿನೆಸ್, ಹೋಟೆಲ್ ಮ್ಯಾನೇಜ್ಮೆಂಟ್ ಹೀಗೆ ಹಲವು ಆಯ್ಕೆಗಳಿವೆ.
ಕಲಾ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳು ಬೆಸ್ಟ್
ಪಿಯುಸಿಯಲ್ಲಿ ಕಲಾ ವಿಭಾಗಗಳಲ್ಲಿ ಹಲವಾರು ಕಾಂಬಿನೇಷನ್‌ಗಳು ಅಧ್ಯಯನಕ್ಕೆ ಲಭ್ಯವಿದ್ದು, ಈ ಕೋರ್ಸ್‌ಗಳಲ್ಲಿ ದ್ವಿತೀಯ ಪಿಯುಸಿ ಓದಿದವರಿಗೆ ಪದವಿ ಹಂತದಲ್ಲೂ ಅಷ್ಟೇ ಹೆಚ್ಚಿನ ಆಯ್ಕೆಗಳು ಇವೆ. ಆರ್ಟ್ಸ್ ಅಥವಾ ಮಾನವಿಕ ವಿಭಾಗದಲ್ಲಿ ಇತಿಹಾಸ, ಭೂಗೋಳಶಾಸ್ತ್ರ, ಪೊಲಿಟಿಕಲ್ ಸೈನ್ಸ್, ಮನೋವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ಇತರೆ ಕೆಲವು ಸಬ್ಜೆಕ್ಟ್‌ಗಳು ಪದವಿ ಪಡೆದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತವೆ. ಆರ್ಟ್ಸ್ ವಿದ್ಯಾರ್ಥಿಗಳು ಪತ್ರಿಕೋದ್ಯಮ, ಫ್ಯಾಷನ್, ಏವಿಯೇಷನ್, ಕಾನೂನು ಮತ್ತು ಇತರೆ ಹಲವು ಕೋರ್ಸ್‌ಗಳಿಗೆ ಸಹ ಪ್ರವೇಶ ಪಡೆಯಬಹುದಾಗಿದ್ದು, ಪಿಯುಸಿ ಆರ್ಟ್ಸ್ ಓದಿದ ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಯಾವೆಲ್ಲಾ ಕೋರ್ಸ್‌ಗಳಿಗೆ ಸೇರಬಹುದು, ಯಾವೆಲ್ಲಾ ಬೆಸ್ಟ್ ಕಾಂಬಿನೇಷನ್‌ಗಳು ಲಭ್ಯ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ), ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA) , ಬ್ಯಾಚುಲರ್ ಆಫ್ ಡಿಸೈನ್ , ಬಿಎ ಜರ್ನಲಿಸಮ್ , ಬಿಎ ಮನೋವಿಜ್ಞಾನ , ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ (B.SW) , ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆಯ್ಕೆಗಳಿದ್ದು, ಈ ಕೋರ್ಸ್‌ಗಳು ಮಾತ್ರವಲ್ಲದೇ ಕಾನೂನು, ಅನಿಮೇಷನ್ ಮತ್ತು ಮಲ್ಟಿಮಿಡಿಯಾ, ಏವಿಯೇಷನ್, ಫ್ಯಾಷನ್ ಡಿಸೈನಿಂಗ್ ಮತ್ತು ಇತರೆ ಹಲವಾರು ಕೋರ್ಸ್‌ಗಳನ್ನು ಪಿಯುಸಿ ಆರ್ಟ್ಸ್ ಓದಿದವರು ತೆಗೆದುಕೊಳ್ಳಬಹುದು.
ಈ ಸುದ್ದಿಯನ್ನು ಓದಿ: 2nd PUC Results 2025: ಲಾರಿ ಚಾಲಕನ ಮಗಳು ರಾಜ್ಯಕ್ಕೇ ಟಾಪರ್; ವಿಜಯನಗರ ಜಿಲ್ಲೆ ವಿದ್ಯಾರ್ಥಿನಿಯರಿಗೆ ಮೊದಲೆರಡು ಸ್ಥಾನ
ವಾಣಿಜ್ಯಶಾಸ್ತ್ರದ ನಂತರ ನೀವು ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಮಾರುಕಟ್ಟಯಲ್ಲಿ ಕಾಮರ್ಸ್ ಬಹುಬೇಡಿಕೆಯ ವಿಷಯವಾಗಿದ್ದು, ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಮುಂದೆ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಪದವಿ ಓದಲು ಹಾಗೂ ಉನ್ನತ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳಿವೆ. ಕಾಮರ್ಸ್ ಮುಗಿದ ಮೇಲೆ ಎಲ್ಲರು ಮೊದಲ ಯೋಚನೆ ಮಾಡುವುದು ಬಿ.ಕಾಂ. ಪದವಿ. ಆದರೆ ಬಿ.ಕಾಂ. ಪದವಿ ಜೊತೆಗೆ ಅನೇಕ ಕೋರ್ಸ್‌ಗಳು ಇದ್ದು. ಕಾಮರ್ಸ್ ವಿದ್ಯಾರ್ಥಿಗಳು ಕಲಾ ವಿಭಾಗದ ಪದವಿ, ಮ್ಯಾನೇಜ್‌ಮೆಂಟ್ ಸಂಬಂಧಿಸಿದ ಕೋರ್ಸ್‌ಗಳನ್ನು ಸಹ ಅಧ್ಯಯನ ಮಾಡಬಹುದಾಗಿದೆ.
ಇದರ ಹೊರತಾಗಿ ಬಿಬಿಎ (BBA) , ಬಿಸಿಎ (BCA), ಬ್ಯಾಚುಲರ್ ಆಫ್ ಎಕನಾಮಿಕ್ಸ್ (BE) ಬ್ಯಾಚುಲರ್ ಆಫ್ ಅಕೌಂಟಿಂಗ್ ಅಂಡ್ ಫೈನಾನ್ಸ್ (BAF) , ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಬ್ಯಾಂಕಿಂಗ್ ಅಂಡ್ ಇನ್ಶೂರೆನ್ಸ್ (BBI), ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಫೈನಾನ್ಸಿಯಲ್ ಮಾರ್ಕೆಟ್ (BFM), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಇಂಟರ್ನ್ಯಾಷನಲ್ ಬಿಸಿನೆಸ್ (BBA-IB), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಕಂಪ್ಯೂಟರ್ ಅಪ್ಲಿಕೇಶನ್ (BBA-CA), ಇಂಡಸ್ಟ್ರಿ ಓರಿಎಂಟೆಡ್ ಇಂಟಿಗ್ರೇಟೆಡ್ ಕೋರ್ಸಿಸ್, ಚಾರ್ಟರ್ಡ್ ಅಕೌಂಟೆನ್ಸಿ, ಕಂಪನಿ ಸೆಕ್ರೆಟರಿ (CS), ಬಿಕಾಂ ಮಾರ್ಕೆಟಿಂಗ್, ಬಿಕಾಂ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್ ಅಧ್ಯಯನ ವಿಷಯಗಳನ್ನು ಆರಿಸಿಕೊಳ್ಳಬಹುದಾಗಿದೆ.