ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiger Shroff Summer Lifestyle: ಜಿಮ್‌ ಪ್ರಿಯ ಟೈಗರ್‌ ಶ್ರಾಫ್‌ ಸಮ್ಮರ್‌ ಲೈಫ್‌ಸ್ಟೈಲ್‌ ಮಂತ್ರ

Bollywood Star Summer Lifestyle: ಸಮ್ಮರ್‌ ಸೀಸನ್‌ ನನಗಿಷ್ಟ ಎನ್ನುವ ಬಾಲಿವುಡ್‌ನ ಯಂಗ್‌ & ಎನರ್ಜೆಟಿಕ್‌ ಹಾಗೂ ಫಿಟ್ನೆಸ್‌ ಫ್ರೀಕ್‌ ನಟ ಟೈಗರ್‌ ಶ್ರಾಫ್‌ ಸೀಸನ್‌ಗೆ ತಕ್ಕಂತೆ ತಮ್ಮ ರುಟಿನ್‌ ಬದಲಿಸಿಕೊಳ್ಳುತ್ತಾರಂತೆ. ಅದು ಧರಿಸುವ ಫ್ಯಾಷನ್‌ವೇರ್‌ ಆಗಬಹುದು ಅಥವಾ ಡಯಟ್‌ನಲ್ಲಾಗಬಹುದು. ಅವರ ಈ ಸೀಸನ್‌ನಲ್ಲಿ ಫಾಲೋ ಮಾಡುವ ಲೈಫ್‌ಸ್ಟೈಲ್‌ ಮತ್ತು ಫ್ಯಾಷನ್‌ ಕುರಿತಂತೆ ಇಲ್ಲಿದೆ ಝಲಕ್‌.

ಜಿಮ್‌ ಪ್ರಿಯ ಟೈಗರ್‌ ಶ್ರಾಫ್‌ ಸಮ್ಮರ್‌ ಲೈಫ್‌ಸ್ಟೈಲ್‌ ಮಂತ್ರ

ಚಿತ್ರಗಳು: ಟೈಗರ್‌ ಶ್ರಾಫ್‌, ಬಾಲಿವುಡ್‌ ನಟ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಸೀಸನ್‌ ಯುವಕರ ಬಾಡಿ ಮಾಸ್‌ ಇಂಡೆಕ್ಸ್‌ ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ. ಅದಕ್ಕೆ ತಕ್ಕಂತೆ ನಾವು ಕೂಡ ನಮ್ಮ ಫಿಟ್ನೆಸ್‌ ತೋರ್ಪಡಿಸುವ ಫ್ಯಾಷನ್‌ವೇರ್‌ ಧರಿಸಬೇಕು ಎನ್ನುತ್ತಾರೆ ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ (Bollywood Star Summer Lifestyle). ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಲೈಫ್‌ಸ್ಟೈಲ್‌ ಬಗ್ಗೆ ಮಾತನಾಡಿರುವ ಟೈಗರ್‌ ಶ್ರಾಫ್‌, ಸದ್ಯ ಬಾಲಿವುಡ್‌ನ ಯಂಗ್‌ ನಾಯಕ ನಟ ಮಾತ್ರವಲ್ಲ, ತಮ್ಮ ಫಿಟ್ನೆಸ್‌ ಬಾಡಿಯಿಂದಲೇ ಅಭಿಮಾನಿಗಳನ್ನು ಗಳಿಸಿರುವ ಯುವ ನಟ ಎನ್ನಬಹುದು.

ಈ ಸೀಸನ್‌ನಲ್ಲಿ ಬಾಡಿ ಬಿಲ್ಡ್‌ ಮಾಡುವುದು ಸುಲಭ. ನನಗಂತೂ ಈ ಸೀಸನ್‌ ಅಂದ್ರೆ ಖುಷಿ ನೀಡುತ್ತದೆ. ಮೊದಲಿನಂತೆ ಹುಡುಗರು ಸುಂದರ ಎಂದರೆ, ಕೇವಲ ಮುಖ ಚರ್ಯೆಯಲ್ಲ! ಬದಲಿಗೆ ಬಾಡಿಯ ಫಿಟ್ನೆಸ್‌ ಕೂಡ ಮುಖ್ಯವಾಗುತ್ತದೆ. ಮೊದಲೆಲ್ಲಾ ಹುಡುಗರು ಹೇಗಿದ್ದರೂ ಸರಿಯೇ, ಎಂಬ ತಪ್ಪು ಕಲ್ಪನೆ ಇದೀಗ ಬದಲಾಗಿದೆ. ಯುವಕರು ಕೂಡ ತಮ್ಮ ಕೇರ್‌ ತೆಗೆದುಕೊಳ್ಳಬೇಕಾಗುತ್ತದೆ. ಜಿಮ್‌ಗೆ ಹೋಗಬೇಕಾಗುತ್ತದೆ. ಫಿಟ್‌ ಬಾಡಿ ಪಡೆಯಬೇಕಾಗುತ್ತದೆ. ಉತ್ತಮ ಸೀಸನ್‌ ಫ್ಯಾಷನ್‌ವೇರ್‌ ಧರಿಸಬೇಕಾಗುತ್ತದೆ ಎನ್ನುತ್ತಾರೆ ನಟ ಟೈಗರ್‌ ಶ್ರಾಫ್‌.

8

ಸೀಸನ್‌ಗೆ ತಕ್ಕಂತೆ ಪಾರ್ಟಿ ಡ್ರೆಸ್‌ಕೋಡ್‌

ನನಗೆ ಸಮ್ಮರ್‌ ಪಾರ್ಟಿಗಳೆಂದರೆ ಇಷ್ಟ. ಕಾರಣ ಫ್ರೆಂಡ್ಸ್‌ ಎಲ್ಲರೂ ಒಟ್ಟಾಗಿ ಸೇರಲು ಕಾರಣ ಸಿಗುತ್ತದೆ. ಅಷ್ಟೇ ಅಲ್ಲದೇ ಹರಟೆ ಹೊಡೆಯಬಹುದು. ಸ್ನೇಹಿತರೊಂದಿಗೆ ಕ್ವಾಲಿಟಿ ಸಮಯ ಕಳೆಯಬಹುದು. ಅದರಲ್ಲೂ ಬೀಚ್‌ ಪಾರ್ಟಿಯಲ್ಲಿ ನೀರಿನಲ್ಲಿ ಆಟವಾಡಬಹುದು. ಇನ್ನು, ಈ ಸೀಸನ್‌ನಲ್ಲಿ ಪಾರ್ಟಿಗಳಿಗೆ ಹೋಗುವಾಗ ಹೇಗೆ ಬೇಕೋ ಹಾಗೆ ಹೋಗುವುದು ಸರಿಯಲ್ಲ. ಇದಕ್ಕಾಗಿ ಡ್ರೆಸ್‌ಕೋಡ್‌ ಪಾಲನೆ ಮಾಡುವುದು ಮುಖ್ಯ. ಹಾಗಾಗಿ ಬೀಚ್‌ ಪಾರ್ಟಿಗಳಿಗೆ ನಾನಂತೂ ಸಿಂಪಲ್‌ ಟೀ ಶರ್ಟ್‌ ಹಾಗೂ ಬರ್ಮುಡಾದಲ್ಲಿ ಹೋಗುತ್ತೇನೆ. ಇತರೆ ಸಮಯದಲ್ಲಿ ಸಿಂಪಲ್‌ ಟೀ ಶರ್ಟ್‌ ಹಾಗೂ ಲೂಸಾಗಿರುವ ಪ್ಯಾಂಟ್‌ಗಳು ನನ್ನನ್ನು ಸವಾರಿ ಮಾಡುತ್ತವೆ ಎನ್ನುತ್ತಾರೆ ಟೈಗರ್‌ ಶ್ರಾಫ್‌.

9

ಯುವಕರ ಸ್ಮಾರ್ಟ್‌ ಲುಕ್‌ಗೆ ಟೈಗರ್‌ ಶ್ರಾಫ್‌ ಸಲಹೆ

  • ಸಮ್ಮರ್‌ನಲ್ಲಿ ಯುವಕರು ಸಿಂಪಲ್‌ ವೈಟ್‌ ಟೀ ಶರ್ಟ್‌ ಜತೆಗೆ ಬ್ಲ್ಯೂ ಜೀನ್ಸ್‌ ಧರಿಸಿ ಲೂಫರ್ಸ್‌ ಧರಿಸಿದರೇ ಸಾಕು. ನೋಡಲು ಆಕರ್ಷಕವಾಗಿ ಕಾಣಿಸುವುದು.
  • ಆದಷ್ಟೂ ಸಮ್ಮರ್‌ನಲ್ಲಿ ಬ್ಲೇಝರ್‌ ಹಾಗೂ ಲೇಯರ್‌ ಲುಕ್‌ ಅವಾಯ್ಡ್‌ ಮಾಡಿ.
  • ಜಿಮ್‌ ಔಟ್‌ಫಿಟ್ಸ್‌ ಲೂಸಾಗಿರಲಿ.
  • ದೊಗಲೆ ಔಟ್‌ಫಿಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಟ್ರೈ ಮಾಡಿ ನೋಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Sheer Fashion: ಬೇಸಿಗೆಯಲ್ಲಿ ಶೀರ್‌ ಫ್ಯಾಷನ್‌ ವೇರ್ಸ್ ಹಂಗಾಮ