ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist Attack: ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಬಸ್ ಅಪಹರಣ; ಒಂಬತ್ತು ಒತ್ತೆಯಾಳುಗಳ ಹತ್ಯೆ

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಶುಕ್ರವಾರ ದೃಢಪಡಿಸಿದ್ದಾರೆ. ಈ ಹತ್ಯೆಗಳಿಗೆ ಯಾವುದೇ ಗುಂಪು ಇದುವರೆಗೆ ಹೊಣೆ ಹೊತ್ತಿಲ್ಲ. ಆದಾಗ್ಯೂ, ಹಿಂದೆ ನಡೆದ ಇದೇ ರೀತಿಯ ಘಟನೆಗಳು ಪ್ರತ್ಯೇಕತಾವಾದಿ ಬಲೂಚ್ ಉಗ್ರಗಾಮಿಗಳಿಗೆ ಸಂಬಂಧಿಸಿವೆ.

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಸ್ ಅಪಹರಣ; ಒಂಬತ್ತು ಒತ್ತೆಯಾಳುಗಳ ಹತ್ಯೆ

Profile Vishakha Bhat Jul 11, 2025 10:59 AM

ಇಸ್ಲಾಮಾಬಾದ್: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ (Terrorist Attack) ವ್ಯಕ್ತಿಗಳ ಗುಂಪೊಂದು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ದೃಢಪಡಿಸಿದ್ದಾರೆ. ಪ್ರಾಂತೀಯ (Balochistan province) ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಅವರ ಪ್ರಕಾರ, ಗುರುವಾರ ಸಂಜೆ ಹಲವಾರು ಬಸ್‌ಗಳಿಂದ ಪ್ರಯಾಣಿಕರನ್ನು ಅಪಹರಿಸಲಾಗಿದೆ. ನಂತರ ದಾಳಿಕೋರರು ಅವರನ್ನು ಹತ್ತಿರದ ಪರ್ವತ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹತ್ಯೆಗಳಿಗೆ ಯಾವುದೇ ಗುಂಪು ಇದುವರೆಗೆ ಹೊಣೆ ಹೊತ್ತಿಲ್ಲ. ಆದಾಗ್ಯೂ, ಹಿಂದೆ ನಡೆದ ಇದೇ ರೀತಿಯ ಘಟನೆಗಳು ಪ್ರತ್ಯೇಕತಾವಾದಿ ಬಲೂಚ್ ಉಗ್ರಗಾಮಿಗಳಿಗೆ ಸಂಬಂಧಿಸಿವೆ. ಬಲೂಚ್ ಉಗ್ರರು ಪಾಕಿಸ್ತಾನದಲ್ಲಿ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಬಲೂಚಿಸ್ತಾನದ ಟರ್ಬತ್ ಜಿಲ್ಲೆಯ ಸ್ಯಾಟಲೈಟ್ ಪಟ್ಟಣದ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಪಾಕ್‌ ಸೈನಿಕರು ಸಾವು ಕಂಡಿರಬಹುದು ಎದು ಅಂದಾಜಿಸಲಾಗಿದೆ. ಬಲೂಚ್‌ ಲಿಬರೇಷನ್‌ ಆರ್ಮಿ ಇದರ ವಿಡಿಯೋವನ್ನು ಕೂಡ ರಿಲೀಸ್‌ ಮಾಡಿದ್ದು, ಮಿಲಿಟರಿ ಟ್ರಕ್‌ನ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ.

ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಗುರುವಾರ ಸೇನಾ ಬೆಂಗಾವಲು ಪಡೆಯ ಮೇಲೆ ರಿಮೋಟ್ ಕಂಟ್ರೋಲ್ಡ್ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ನಡೆಸಿದ ದಾಳಿಯಲ್ಲಿ ಕನಿಷ್ಠ ಹತ್ತು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ದಂಗೆಕೋರ ಚಟುವಟಿಕೆಗೆ ಹೆಸರುವಾಸಿಯಾದ ಅಸ್ಥಿರ ಪ್ರದೇಶದಲ್ಲಿ ನಡೆದ ಈ ದಾಳಿಯನ್ನು ನಿಷೇಧಿತ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ಮಾಡಿರುವುದಾಗಿ ಹೇಳಿಕೊಂಡಿದೆ. "ಆಕ್ರಮಿತ ಪಾಕಿಸ್ತಾನಿ ಸೈನ್ಯ" ವಿರುದ್ಧ ನಡೆಯುತ್ತಿರುವ ಪ್ರತಿರೋಧದ ಭಾಗವಾಗಿ ತನ್ನ "ಸ್ವಾತಂತ್ರ್ಯ ಹೋರಾಟಗಾರರು" ಈ ಸ್ಫೋಟವನ್ನು ನಡೆಸಿದ್ದಾರೆ ಎಂದು BLA ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ; Terrorist Arrested: 58 ಜನರನ್ನು ಸಾಯಿಸಿದ ಕೊಯಮತ್ತೂರು ಬಾಂಬ್‌ ಸ್ಫೋಟ ಆರೋಪಿ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಸೆರೆ!

ಬಿಎಲ್‌ಎ ಅಥವಾ ಬಲೂಚ್ ಲಿಬರೇಶನ್ ಆರ್ಮಿ, ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಉಗ್ರಗಾಮಿ ಗುಂಪು. 2000 ರಿಂದ ಸಕ್ರಿಯವಾಗಿರುವ ಅವರು, ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಚೀನಾದಿಂದ ನಡೆಸಲಾಗುತ್ತಿರುವ ಸಿಪಿಇಸಿಯಂಥ ಯೋಜನೆಗಳನ್ನೂ ಕೂಡ ಇದು ವಿರೋಧಿಸಿದೆ. ಪಾಕಿಸ್ತಾನವು ಅವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುತ್ತದೆ, ಬಿಎಲ್‌ಎ ಕೂಡ ತನ್ನ ಮಿಲಿಟರಿ ಬಲದೊಂದಿಗೆ ಪಾಕಿಸ್ತಾನದ ಸೇನೆ ಮೇಲೆ ದಾಳಿ ಮಾಡುತ್ತದೆ.