ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramdurg news: ಜಗದ್ಗುರು ರೇಣುಕಾಚಾರ್ಯ ಗುರುಕುಲ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ತಾಲೂಕಿನ ಗೊಡಚಿ ಗ್ರಾಮದ ಹತ್ತಿರ ನಿರ್ಮಿಸಲಿರುವ ಶ್ರೀ ಜಗದ್ಗುರು ರೇಣುಕಾ ಚಾರ್ಯ ಗುರುಕುಲ ನಿರ್ಮಾಣಕ್ಕೆ ಕಟಕೋಳ ಎಂ.ಚಂದರಗಿಯ ಶ್ರೀ ವೀರಭದ್ರ ಶಿವಯೋಗಿ ಶಿವಾ ಚಾರ್ಯ ಸ್ವಾಮೀಜಿ ಭೂಮಿಪೂಜೆ ಸಲ್ಲಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗುರುಕುಲ ನಿರ್ಮಾಣದಿಂದ ಈ ಭಾಗದಲ್ಲಿ ಹಲವು ವಿದ್ಯಾರ್ಥಿ ಗಳಿಗೆ ನಾಡಿನ ಸಂಸ್ಕಾರ, ಸಂಸ್ಕೃತಿಯ ಬೋಧನೆಗೆ ಸಹಕಾರಿಯಾಗಲಿದೆ

ವಿದ್ಯಾರ್ಥಿ ಗಳಿಗೆ ನಾಡಿನ ಸಂಸ್ಕಾರ, ಸಂಸ್ಕೃತಿಯ ಬೋಧನೆಗೆ ಸಹಕಾರಿ

ತಾಲೂಕಿನ ಗೊಡಚಿ ಗ್ರಾಮದ ಹತ್ತಿರ ನಿರ್ಮಿಸಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ನಿರ್ಮಾಣಕ್ಕೆ ಕಟಕೋಳ ಎಂ.ಚAದರಗಿಯ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಭೂಮಿಪೂಜೆ ಸಲ್ಲಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

Profile Ashok Nayak Mar 20, 2025 10:32 PM

ರಾಮದುರ್ಗ: ತಾಲೂಕಿನ ಗೊಡಚಿ ಗ್ರಾಮದ ಹತ್ತಿರ ನಿರ್ಮಿಸಲಿರುವ ಶ್ರೀ ಜಗದ್ಗುರು ರೇಣುಕಾ ಚಾರ್ಯ ಗುರುಕುಲ ನಿರ್ಮಾಣಕ್ಕೆ ಕಟಕೋಳ ಎಂ.ಚಂದರಗಿಯ ಶ್ರೀ ವೀರಭದ್ರ ಶಿವಯೋಗಿ ಶಿವಾ ಚಾರ್ಯ ಸ್ವಾಮೀಜಿ ಭೂಮಿಪೂಜೆ ಸಲ್ಲಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗುರುಕುಲ ನಿರ್ಮಾಣದಿಂದ ಈ ಭಾಗದಲ್ಲಿ ಹಲವು ವಿದ್ಯಾರ್ಥಿ ಗಳಿಗೆ ನಾಡಿನ ಸಂಸ್ಕಾರ, ಸಂಸ್ಕೃತಿಯ ಬೋಧನೆಗೆ ಸಹಕಾರಿಯಾಗಲಿದೆ. ತಾಲೂಕಿನ ಹಾಗೂ ಜಿಲ್ಲೆಯ ಸಮಸ್ತ ಭಕ್ತಾಧಿಗಳು ಕಟ್ಟಡ ನಿರ್ಮಾಣಕ್ಕೆ ತನು, ಮನ, ಧನದಿಂದ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Ramadurga News: ತಾಲೂಕಿನ ಜನತೆಗೆ ಮೂಲ ಸೌಲಭ್ಯ ಕಲ್ಪಿಸಲು ಅಗತ್ಯ ಅನುದಾನ ಮಂಜೂರು: ಅಶೋಕ ಪಟ್ಟಣ ಭರವಸೆ

ಈ ಸಂದರ್ಭದಲ್ಲಿ ಮುಪಯ್ಯ ಹಿರೇಮಠ, ಅಪ್ಪಯ್ಯ ಹಿರೇಮಠ, ಟಿ.ಪಿ. ಮುನೋಳಿ, ರಾಜೇಶ ಬೀಳಗಿ, ಬಸಯ್ಯ ಬನ್ನೂರಮಠ, ಬಸವರಾಜ ಸೋಮಗೊಂಡ, ಬಸವರಾಜ ಕೊಣನ್ನವರ, ಸಹಜಾ ನಂದ ಭಾವನ್ನವರ, ಈರಣ್ಣ ಕಾಮನ್ನವರ, ದುಂಡಪ್ಪ ಕಡಗದ, ಮಹಾದೇವ ಉರಳೇಗಡ್ಡಿ, ಸಂಗಪ್ಪ ಪಾಕನಟ್ಟಿ, ಶಿವನಗೌಡ ಪಾಟೀಲ, ಈರಣ್ಣ ಗೊರವ ಸೇರಿದಂತೆ ಇತರರಿದ್ದರು.