Vishweshwar Bhat Column: ಲಗೇಜ್ ನಿರ್ವಹಣೆ
ಜಪಾನಿನ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆ, ವಿಶ್ವದ ಇತರ ದೇಶ ಗಳ ವಿಮಾನ ನಿಲ್ದಾಣಗಳೊಂದಿಗೆ ಹೋಲಿಸಿದಾಗ ಅತ್ಯಂತ ಪರಿಣಾಮಕಾರಿ ಮತ್ತು ನಿಖರವಂತೆ. ಟೋಕಿಯೋ ನಾರಿಟಾ, ಹನೇಡಾ ಮತ್ತು ಕಾನ್ಸಾಯಿ ವಿಮಾನ ನಿಲ್ದಾಣಗಳು ತಮ್ಮ ಉನ್ನತ ಮಟ್ಟದ ಲಗೇಜ್ ಹ್ಯಾಂಡ್ಲಿಂಗ್ ಸೇವೆಗಳಿಗಾಗಿ ಪ್ರಸಿದ್ಧವಾಗಿವೆಯಂತೆ.


ಸಂಪಾದಕರ ಸದ್ಯಶೋಧನೆ
ಜಗತ್ತಿನಲ್ಲಿಯೇ ಪ್ರಯಾಣಿಕರ ಲಗೇಜ್ ನಿರ್ವಹಣೆ (ಹ್ಯಾಂಡ್ಲಿಂಗ್) ಯಲ್ಲಿ ಶ್ರೇಷ್ಠತೆ ಸಾಧಿಸು ವವರೆಂದರೆ ಜಪಾನಿಗರು. ಅಲ್ಲಿನ ಯಾವ ವಿಮಾನ ನಿಲ್ದಾಣದಲ್ಲಿಯೂ ಸಿಬ್ಬಂದಿ ಪ್ರಯಾ ಣಿಕರ ಸೂಟ್‌ಕೇಸುಗಳನ್ನು ಎಸೆಯುವುದಿಲ್ಲ. ಬೇರೆ ವಿಮಾನ ನಿಲ್ದಾಣಗಳಲ್ಲಿ ಲಗೇಜುಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಂತೆ ಎಸೆಯುತ್ತಾರೆ. ಕೆಲವೊಮ್ಮೆ ಈ ಕಾರಣ ಕ್ಕಾಗಿಯೇ ಸೂಟ್ ಕೇಸುಗಳು ಒಡೆದು ಹೋಗುತ್ತವೆ, ಗಾಯಗಳಾಗುತ್ತವೆ"- ಹೀಗಂತ ನನಗೆ ಹೇಳಿದ ವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಗೇಜ್ ನಿರ್ವಹಣಾ ವಿಭಾಗ ದಲ್ಲಿ ಕೆಲ ವರ್ಷಗಳಿಂದ ಉನ್ನತ ಹುದ್ದೆಯಲ್ಲಿರುವ ಕನ್ನಡಿಗರಾದ ಸುಂದರರಾಜ್ ಅವರು.
ಜಪಾನಿನ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆ, ವಿಶ್ವದ ಇತರ ದೇಶ ಗಳ ವಿಮಾನ ನಿಲ್ದಾಣಗಳೊಂದಿಗೆ ಹೋಲಿಸಿದಾಗ ಅತ್ಯಂತ ಪರಿಣಾಮಕಾರಿ ಮತ್ತು ನಿಖರವಂತೆ. ಟೋಕಿಯೋ ನಾರಿಟಾ, ಹನೇಡಾ ಮತ್ತು ಕಾನ್ಸಾಯಿ ವಿಮಾನ ನಿಲ್ದಾಣಗಳು ತಮ್ಮ ಉನ್ನತ ಮಟ್ಟದ ಲಗೇಜ್ ಹ್ಯಾಂಡ್ಲಿಂಗ್ ಸೇವೆಗಳಿಗಾಗಿ ಪ್ರಸಿದ್ಧವಾಗಿವೆಯಂತೆ.
ಇದನ್ನೂ ಓದಿ: Veena Bhat Column: ಬೆಂಗಳೂರಿನ ರಸ್ತೆಗಳಲ್ಲಿ ಬಣ್ಣ ಚೆಲ್ಲುವವರು
ಅದರಲ್ಲೂ ಕಾನ್ಸಾಯಿ ವಿಮಾನ ನಿಲ್ದಾಣ ಕಳೆದ 30 ವರ್ಷಗಳಲ್ಲಿ ಪ್ರಯಾಣಿಕರ ಒಂದೇ ಒಂದು ಲಗೇಜ್ ಕಾಣೆಯಾಗದ ದಾಖಲೆಯನ್ನು ಹೊಂದಿದೆ. ಇದು ಲಗೇಜ್ ಹ್ಯಾಂಡ್ಲಿಂಗ್ ನಲ್ಲಿ ಉನ್ನತ ಮಟ್ಟದ ನಿಖರತೆ ಮತ್ತು ದಕ್ಷತೆಯನ್ನು ತಲುಪಿದೆ. ಆ ವಿಮಾನ ನಿಲ್ದಾಣವು ಲಗೇಜನ್ನು ವಿಮಾನದಿಂದ ಬ್ಯಾಗೇಜ್ ಕ್ಲೈಮ್‌ಗೆ 15 ನಿಮಿಷಗಳ ಒಳಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಈ ಸಾಧನೆಯಿಂದಾಗಿ, ಕಾನ್ಸಾಯಿ ವಿಮಾನ ನಿಲ್ದಾಣವು ಸ್ಟೆ ಟ್ರಾಕ್ಸ್‌ನ ‘ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಲಗೇಜ್ ವಿತರಣೆಗೆ’ ಎಂಬ ಪ್ರಶಸ್ತಿಯನ್ನು ಸತತ ಪಡೆಯುತ್ತಲೇ ಇದೆ. ಜಪಾನಿನ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ, ಭದ್ರತೆ, ಸುರಕ್ಷತೆ ಮತ್ತು ನಿಖರತೆಗೆ ನೀಡುವ ಆದ್ಯತೆ. ವಿಮಾನ ನಿಲ್ದಾಣದ ಸಿಬ್ಬಂದಿ ಸೂಕ್ಷ್ಮ ವಸ್ತುಗಳನ್ನು ಕೈಯಾರೆ ವಿತರಿಸುತ್ತಾರೆ ಮತ್ತು ಮಳೆಯಿಂದ ಒದ್ದೆಯಾದ ಲಗೇಜ್‌ಗಳನ್ನು ಒಣಗಿಸುತ್ತಾರೆ,
ಇದರಿಂದ ಪ್ರಯಾಣಿಕರಿಗೆ ಅವರ ಲಗೇಜ್ ಸುರಕ್ಷಿತವಾಗಿ ತಲುಪುತ್ತದೆ. ಇತರ ದೇಶಗಳ ವಿಮಾನ ನಿಲ್ದಾಣಗಳೊಂದಿಗೆ ಹೋಲಿಸಿದರೆ, ಜಪಾನಿನ ವಿಮಾನ ನಿಲ್ದಾಣಗಳ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಮತ್ತು ಪ್ರಯಾಣಿಕರ ಅನುಭವವನ್ನು ಸುಗಮಗೊಳಿಸುತ್ತದೆ.
ಉದಾಹರಣೆಗೆ, ಸಿಂಗಾಪುರದ ಚಾಂಗೀ ವಿಮಾನ ನಿಲ್ದಾಣವು ಕೂಡ ಅತ್ಯುತ್ತಮ ಲಗೇಜ್ ಹ್ಯಾಂಡ್ಲಿಂಗ್ ಸೇವೆಗಳನ್ನು ಒದಗಿಸುತ್ತದೆ, ಆದರೆ ಜಪಾನಿನ ವಿಮಾನ ನಿಲ್ದಾಣಗಳ ನಿಖರತೆ ಮತ್ತು ಸೇವಾ ಗುಣಮಟ್ಟ ಅದಕ್ಕಿಂತ ಉತ್ತಮವಾಗಿದೆ. ಬೇರೆ ನಿಲ್ದಾಣಗಳಲ್ಲಿ ಲಗೇಜುಗಳನ್ನು ಎತ್ತಿ ಬಿಸಾಡಿದರೆ, ಜಪಾನಿನಲ್ಲಿ ಅಲ್ಲಿನ ಸಿಬ್ಬಂದಿ ನಾಜೂಕಾಗಿ ಎತ್ತಿ ಇಡುತ್ತಾರೆ.
ಯಾವ ಕಾರಣಕ್ಕೂ ಅವರು ಲಗೇಜುಗಳನ್ನು ಜೀವವಿಲ್ಲದ ವಸ್ತು ಎಂದು ಭಾವಿಸುವುದಿಲ್ಲ. ಲಗೇಜುಗಳು ಪ್ರಯಾಣಿಕರ ಒಂದು ಭಾಗ ಎಂದು ಪರಿಗಣಿಸುತ್ತಾರೆ. ಈ ಒಂದು ಗುಣ ಲಗೇಜುಗಳ ಬಗೆಗಿನ ಅವರ ಮನೋಭಾವವನ್ನೇ ಬದಲಿಸಿಬಿಟ್ಟಿದೆ. ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆಯ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ನಿರಂತರ ಸುಧಾರಣೆ ಮತ್ತು ತಂತ್ರಜ್ಞಾನ ಅಳವಡಿಕೆ ಮಹತ್ತರ ಪಾತ್ರವನ್ನು ವಹಿಸಿದೆ. ರೊಬೋಟುಗಳ ಬಳಕೆ ಇಡೀ ಚಿತ್ರಣವನ್ನೇ ಬದಲಿಸಲು ಸಹಾಯಕವಾಗಿದೆ.
ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ RFID (Radio Frequency Identification ) ತಂತ್ರಜ್ಞಾನ ವನ್ನು ಪ್ರಯಾಣಿಕರ ಲಗೇಜ್ ಮೇಲೆ ಅಳವಡಿಸ ಲಾಗುತ್ತದೆ. ಇದರಿಂದ ಲಗೇಜ್ ಹಾದು ಹೋಗುವ ಎಲ್ಲ ಹಂತದಲ್ಲೂ ನಿಗಾ ಇರಿಸಲು ಅನುಕೂಲವಾಗಿದೆ. ಸಿಸಿಟಿವಿ ಕೆಮೆರಾ ವ್ಯವಸ್ಥೆ, ಯಾಂತ್ರಿಕ ಸ್ಕ್ಯಾನರ್‌ಗಳು ಮತ್ತು ಸ್ವಯಂ ಚಾಲಿತ ವಿಂಗಡಣಾ ವ್ಯವಸ್ಥೆ ( Automated Sorting System)ಯಿಂದಾಗಿ ಲಗೇಜ್ ಕಳೆದುಹೋಗುವ ಅಥವಾ ವಿಳಂಬ ವಾಗುವ ಸಮಸ್ಯೆ ಪರಿಹಾರವಾಗಿದೆ.
ಈ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿಯೇ ಅಳವಡಿಸಲು ಇತರ ದೇಶಗಳು ಜಪಾನಿ ನಿಂದ ಸ್ಪೂರ್ತಿ ಪಡೆದಿವೆ. ಜಪಾನಿನ ವಿಮಾನ ನಿಲ್ದಾಣಗಳು Zero Loss Target ಅನ್ನು ಹೊಂದಿವೆ. ಇತರ ದೇಶಗಳಲ್ಲಿ ಬಹಳಷ್ಟು ಲಗೇಜ್ ಕಳೆದುಹೋಗುವ ಪ್ರಕರಣಗಳು ಸಾಮಾನ್ಯವಾಗಿದ್ದರೆ, ಜಪಾನಿನಲ್ಲಿ ಇದು ಅಪರೂಪ ಅಥವಾ ಇಲ್ಲವೇ ಇಲ್ಲ. ಅಮೆರಿಕ ಮತ್ತು ಯುರೋಪಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಸಮಯದಲ್ಲಿ ಲಗೇಜ್ ಕಾಣೆಯಾಗುವುದು ಹೆಚ್ಚು.
ಆದರೆ ಇಂಥ ಪ್ರಕರಣಗಳನ್ನು ಜಪಾನಿನಲ್ಲಿ ಕಾಣಲು ಸಾಧ್ಯವೇ ಇಲ್ಲ. ಜಪಾನಿನ ಸಂಸ್ಕೃತಿಯಲ್ಲಿ ಸೇವೆಯ ಮೇಲೆ ಹೆಚ್ಚಿನ ಒತ್ತು ನೀಡಿರುವುದು ಲಗೇಜ್ ಹ್ಯಾಂಡ್ಲಿಂಗ್‌ನಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.