ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ; ಮಹಿಳೆಯ ಓಪನ್‌ ಚಾಲೆಂಜ್‌!

ಈ ಹುಚ್ಚು ಅಭಿಮಾನಿಯ ವಿಡಿಯೊ ಕಂಡ ಅನೇಕ ನೆಟ್ಟಿಗರು ಆರ್‌ಸಿಬಿ ಸೋಲು ಅಥವಾ ಗೆಲುವಿಗೆ ನಿನ್ನ ಪತಿ ಏನು ತಪ್ಪು ಮಾಡಿದ್ದಾನೆ. ಇದೊಂದು ಹುಚ್ಚುತನ. ಹೀಗೆ ಹಲವು ಕಮೆಂಟ್‌ಗಳ ಮೂಲಕ ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆರ್‌ಸಿಬಿ ಕಪ್‌ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ; ಮಹಿಳೆಯ ಓಪನ್‌ ಚಾಲೆಂಜ್‌!

Profile Abhilash BC Mar 29, 2025 4:56 PM

ಬೆಂಗಳೂರು: ಪ್ರತಿ ಬಾರಿಯೂ ‘ಈ ಸಲ ಕಪ್‌ ನಮ್ದೇ’ ಎನ್ನುತ್ತಲೇ ಐಪಿಎಲ್‌(IPL 2025)ಗೆ ಕಾಲಿಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(RCB) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್‌ಸಿಬಿ ರಾಯಲ್‌ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್, ಆ ಬಳಿಕ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಜಯ ಸಾಧಿಸಿಸುವ ಮೂಲಕ ಅಜೇಯ ಓಟ ಮುಂದುವರಿಸಿದೆ. 18ನೇ ಆವೃತ್ತಿಯಲ್ಲಿ ಕಪ್‌ ಗೆಲ್ಲುವ ಭವಿಷ್ಯ ಕೂಡ ಈ ಬಾರಿ ನಿಜವಾಗುವಂತೆ ಕಂಡುಬಂದಿದೆ. ಹೀಗಿರುವಾಗಲೇ ಆರ್‌ಸಿಬಿ ಅಭಿಮಾನಿಯೊಬ್ಬಳು ಈ ಬಾರಿ ಆರ್​ಸಿಬಿ ಕಪ್‌ ಗೆದ್ದಿಲ್ಲವೆಂದರೆ ನಾನು ನನ್ನ ಪತಿಗೆ ವಿಚ್ಛೇದನ ನೀಡುವುದಾಗಿ ಓಪನ್‌ ಚಾಲೆಂಜ್‌ ಹಾಕಿದ್ದಾಳೆ. ಈ ಚಾಲೆಂಜ್‌ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

ಉತ್ತರ ಭಾರತದ ಆರ್‌ಸಿಬಿ ಅಭಿಮಾನಿಯಾಗಿರುವ ಈಕೆ, ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಮಾಡಿದ್ದು, 'ನಾನು ಭವಿಷ್ಯ ನುಡಿಯುತ್ತಿದ್ದೇನೆ. ಈ ಬಾರಿ ಆರ್‌ಸಿಬಿ ಫೈನಲ್‌ನಲ್ಲಿ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ . ಇದು ಯಾವುದೇ ಸ್ಕ್ರಿಪ್ಟೆಡ್‌ ವಿಡಿಯೊ ಅಲ್ಲ. ಈ ವಿಡೊಯೊವನ್ನು ಸೇವ್‌ ಮಾಡಿ ಇಟ್ಟುಕೊಳ್ಳಿ. ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ 100 ಪ್ರತಿಶತ ವಿಚ್ಛೇದನ ನೀಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಸತ್ಯವನ್ನು ಹೇಳುತ್ತಿದ್ದೇನೆ' ಎಂದು ಹೇಳಿದ್ದಾಳೆ.

ಈ ಹುಚ್ಚು ಅಭಿಮಾನಿಯ ವಿಡಿಯೊ ಕಂಡ ಅನೇಕ ನೆಟ್ಟಿಗರು ಆರ್‌ಸಿಬಿ ಸೋಲು ಅಥವಾ ಗೆಲುವಿಗೆ ನಿನ್ನ ಪತಿ ಏನು ತಪ್ಪು ಮಾಡಿದ್ದಾನೆ. ಇದೊಂದು ಹುಚ್ಚುತನ. ಹೀಗೆ ಹಲವು ಕಮೆಂಟ್‌ಗಳ ಮೂಲಕ ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈಕೆಯ ಓಪನ್‌ ಚಾಲೆಂಜ್‌ ವಿಡಿಯೊ ಎಲ್ಲಡೆ ವೈರಲ್‌ ಆಗುತ್ತಿದೆ.

ಶುಕ್ರವಾರ ಚೆನ್ನೈ ತಂಡವನ್ನು 50 ರನ್‌ಗಳಿಂದ ಮಣಿಸಿದ ಆರ್‌ಸಿಬಿ, ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ (RCB vs CSK) ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಜತೆಗೆ ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ ರನ್‌ ಆಧಾರದಲ್ಲಿ ಅತಿದೊಡ್ಡ ಸೋಲುನ್ನು ಕೂಡ ಉಣಬಡಿಸಿತ್ತು.

ಇದನ್ನೂ ಓದಿ IPL 2025: ಚೆನ್ನೈ ವಿರುದ್ಧ ಗೆಲುವು; ಆರ್‌ಸಿಬಿಗೆ ಅಭಿನಂದಿಸಿದ ವಿಜಯ್ ಮಲ್ಯ

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರ ಅರ್ಧ ಶತಕ ಮತ್ತು ಫಿಲ್‌ ಸಾಲ್ಟ್, ಟಿಮ್‌ ಡೇವಿಡ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟಿಗೆ 196 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಾಟಕೀಯ ಕುಸಿತದೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು.