IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾದ ಕನ್ನಡಿಗ ಕೆಎಲ್ ರಾಹುಲ್!
KL Rahul Joins Delhi Capitals Camp: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೊದಲ ಮಗುವಿನ ಜನನದ ಕಾರಣ ಕೆಎಲ್ ರಾಹುಲ್ ಅವರು ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಅವರು ಭಾನುವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕೆಎಲ್ ರಾಹುಲ್.

ನವದೆಹಲಿ: ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ( SRH) ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೊದಲ ಮಗುವಿನ ಕಾರಣ ಅವರು ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಕ್ಕೆ ಕೆಎಲ್ ರಾಹುಲ್ ಅಲಭ್ಯರಾಗಿದ್ದರು. ಇದೀಗ ಅವರಿಗೆ ಹೆಣ್ಣು ಮಗು ಜನಿಸಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿರುವ ಅವರು, ತಮ್ಮ ತಂಡದ ಬಲವನ್ನು ಹೆಚ್ಚಿಸಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂ. ಗಳಿಗೆ ಖರೀದಿಸಿತ್ತು.
2022ರಿಂದ 2024ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್, ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದುಕೊಟ್ಟಿರಲಿಲ್ಲ ಹಾಗೂ ಅವರು ಕಳೆದ ಆವೃತ್ತಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಈ ಕಾರಣದಿಂದ ಅವರನ್ನು ಲಖನೌ ಫ್ರಾಂಚೈಸಿ ಕಳೆದ ಮೆಗಾ ಹರಾಜಿಗೆ ರಿಲೀಸ್ ಮಾಡಿತ್ತು. ಆದರೆ, ಮೆಗಾ ಹರಾಜಿನಲ್ಲಿ ಅವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸಿತ್ತು. ಮಾರ್ಚ್ 29ರಂದು
ಡೆಲ್ಲಿ ಕ್ಯಾಪಿಟಲ್ಸ್ ಶೇರ್ ಮಾಡಿರುವ ವಿಡಿಯೊದಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಅದರಂತೆ ಕನ್ನಡಿಗನಿಗ ಡಿಸಿ ತಂಡ ಸ್ವಾಗತವನ್ನು ಕೋರಿದೆ.
IPL 2025 Points Table: ಆರ್‌ಸಿಬಿ ಅಗ್ರಸ್ಥಾನ ಸುಭದ್ರ; 7ನೇ ಸ್ಥಾನಕ್ಕೆ ಕುಸಿದ ಚೆನ್ನೈ
ಮಾರ್ಚ್ 30 ರಂದು ಡೆಲ್ಲಿ ಪರ ಆಡಲಿರುವ ರಾಹುಲ್
ಮಾರ್ಚ್ 30 ರಂದು ವಿಶಾಖಪಟ್ಟಣಂನಲ್ಲಿರುವ ಆಂಧ್ರ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ತನ್ನ ಮೊದಲನೇ ಪಂದ್ಯವನ್ನು ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ್ದ ಕೆಎಲ್ ರಾಹುಲ್, ಡಿಸಿ ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಆಡಲು ತುಂಬಾ ಉತ್ಸಾಹವನ್ನು ಹೊಂದಿದ್ದೇನೆ ಎಂದು ಹೇಳಿದ್ದರು.
"ನನ್ನ ನಾಲ್ಕನೇ ಅಥವಾ ಐದನೇ ಫ್ರಾಂಚೈಸಿಗೆ ಸೇರ್ಪಡೆಯಾಗುತ್ತಿರುವುದು ನನಗೆ ಹೊಸ ಅನುಭವವನ್ನು ನೀಡಿದೆ. ಇದು ಅದ್ಭುತ ಹಾಗೂ ರೋಮಾಂಚನಕಾರಿಯಿಂದ ಕೂಡಿದೆ. ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ, ಟೀಮ್ ಮ್ಯಾನೇಜ್‌ಮೆಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ. ಎಂಬಂತೆ ಪ್ರತಿಯೊಂದು ಹೊಸ ತಂಡವು ಅನಿಶ್ಚಿತತೆಗಳನ್ನು ತರುತ್ತದೆ. ಡೆಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಕಟ್ಟಿರುವ ತಂಡವನ್ನು ನೋಡುತ್ತಿದ್ದರೆ, ಎಲ್ಲಾ ವಿಭಾಗಗಳಲ್ಲಿ ಆಟಗಾರರು ಶಕ್ತಿಯುತವಾಗಿದ್ದಾರೆ," ಎಂದು ಕೆಎಲ್ ರಾಹುಲ್ ತಿಳಿಸಿದ್ದರು.
"ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡ ತಂಡ ಅದ್ಭುತ ಸಂಯೋಜನೆಯಿಂದ ಕೂಡಿದೆ. ಅಭೂತಪೂರ್ವ ಪ್ರತಿಭೆಯನ್ನು ಹೊಂದಿರುವ ಕೆಲ ಯುವ ಆಟಗಾರರ ಜೊತೆ ಆಡಲು ಹಾಗೂ ಅವರಿಂದ ಏನನ್ನಾದರೂ ಕಲಿಯಲು ನಾನು ತುಂಬಾ ಉತ್ಸುಕದಿಂದ ಕಾಯುತ್ತಿದ್ದೇನೆ. ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಅವರೊಂದಿಗೆ ಈ ಹಿಂದೆ ಆಡಿದ್ದೇನೆ. ಇವರನ್ನು ಒಳಗೊಂಡಿರುವ ತಂಡ ಅತ್ಯಂತ ಬಲಿಷ್ಠವಾಗಿದೆ. ಐಲಿಎಲ್ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ," ಎಂದು ವಿಕೆಟ್ ಕೀಪರ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಮೆಗರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್ (ವಿ.ಕೀ), ಸಮೀರ್ ರಿಝ್ವಿ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟನ್ ಸ್ಟಬ್ಸ್ ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶ್ಮಾ, ಮುಖೇಶ್ ಶರ್ಮಾ, ಆಶುತೋಷ್ ಶರ್ಮಾ, ಕರುಣ್ ನಾಯರ್, ಡೊನೊವಾನ್ ಫೆರಾರಿ, ತ್ರಿಪುರಣ ವಿಜಯ್, ದರ್ಶನ್ ನಲ್ಕಂಡೆ, ಟಿ ನಟರಾಜನ್, ದುಷ್ಮಾಂತ ಚಮೀರಾ, ಅಜಯ್ ಜಾದವ್ ಮಂಡಲ್, ಮನ್ವಂತ್ ಕುಮಾರ್, ಮಾಧವ್ ತಿವಾರಿ, ಕೆಎಲ್ ರಾಹುಲ್