ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಇನ್ನು ಕೆಲವೇ ವರ್ಷಗಳಲ್ಲಿ ವೀರಶೈವ ಎಂಬ ಪದ ನಿರ್ನಾಮವಾಗಲಿದೆಯೇ ?

ಗೊರುಚ ಅಧ್ಯಕ್ಷರಾಗಿರುವ ಪರಿಷತ್ತಿನ ವಚನ ಸಾಹಿತ್ಯದಲ್ಲಿ ವೀರಶೈವ ಎಂಬ ಪದವನ್ನು 142 ವಚನಗಳಲ್ಲಿ ಒಟ್ಟು 221 ಕಡೆ 30ಕ್ಕೂ ಹೆಚ್ಚು ವಚನಕಾರರು ಬಳಸಿದ್ದಾರೆ. ಆ ವಚನ ಕಾರರು ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಿದ್ದರಾಮೇಶ್ವರ, ಮೋಳಿಗೆ ಮಾರಯ್ಯ, ಅಮುಗೆ ರಾಯಮ್ಮ, ಅರಿವಿನ ಮಾರಿ ತಂದೆ, ಆದಯ್ಯ, ಕಾಡಸಿದ್ದೇಶ್ವರ, ಇಮ್ಮಡಿ ಮುರಿ ಘಾಗುರು ಸಿದ್ದಸ್ವಾಮಿ, ಕುಷ್ಟಗಿ ಕರಿ ಬಸವೇಶ್ವರ, ಕೂಡಲಸಂಗಮೇಶ್ವರ, ಕೋಲ ಶಾಂತಯ್ಯ, ಗುರುಸಿದ್ಧದೇವರು, ಘಟ್ಟಿವಾಳಯ್ಯ, ಚಂದಿಮರಸ, ಜಕ್ಕಣ್ಣಯ್ಯ, ದೇಶೀಕೇಂದ್ರ ಸಂಗನ ಬಸವಯ್ಯ, ಶಾಂತವೀರೇಶ್ವರ, ತೋಂಟದ ಸಿದ್ದಲಿಂಗ ಶಿವಯೋಗಿಗಳು, ಪ್ರಸಾದಿ ಭೋಗಣ್ಣ, ಬಹುರೂಪಿ ಚೌಡಯ್ಯ, ಮುಮ್ಮಡಿ ಕಾರ್ಯೇಂದ್ರ, ಹೇಮಗಲ್ಲ ಹಂಪ, ಸ್ವತಂತ್ರ ಸಿದ್ದಲಿಂಗ, ಷಣ್ಮುಖಸ್ವಾಮಿ ಮುಂತಾದವರು.

ಇನ್ನು ಕೆಲವೇ ವರ್ಷಗಳಲ್ಲಿ ವೀರಶೈವ ಎಂಬ ಪದ ನಿರ್ನಾಮವಾಗಲಿದೆಯೇ ?

ಅಂಕಣಕಾರ ರವಿ ಹಂಜ್

Profile Ashok Nayak Mar 29, 2025 8:24 AM

ಬಸವ ಮಂಟಪ

ರವಿ ಹಂಜ್

ನಾಡಿನ ಸಾಕ್ಷಿಪ್ರಜ್ಞೆ, ಜಾಗತಿಕ ಲಿಂಗಾಯತ ಮಹಾಸಭಾದ ಪಿತಾಮಹ ಗೊರುಚ ಅವರು ಇತ್ತೀಚೆಗೆ, “ಇನ್ನು ಕೆಲವೇ ವರ್ಷಗಳಲ್ಲಿ ವೀರಶೈವ ಎಂಬ ಪದ ನಿರ್ನಾಮವಾಗಲಿದೆ" ಎಂದಿದ್ದಾರೆ. ಇದು ಸಾಧ್ಯವೇ? ಪ್ರಾಕ್ತನ ಶಾಸ್ತ್ರ, ಗ್ರಂಥಶಾಸ್ತ್ರ, ಉತ್ಖನನ ಆಕರಗಳ ಪ್ರಕಾರ ವೀರಶೈವ (ಲಿಂಗಾಯತ) ಧರ್ಮದ ಕುರಿತಾಗಿ ಸಿಕ್ಕಿರುವ ದಾಖಲೆಗಳೆಲ್ಲವೂ ‘ವೀರಶೈವ’ ಪದವನ್ನು ಹೊಂದಿವೆಯೇ ಹೊರತು ‘ಲಿಂಗಾಯತ’ ಪದವನ್ನಲ್ಲ. ಆದರೂ ಗೊರುಚ ಅವರ ಹಿನ್ನೆಲೆ, ವಿದ್ಯಾರ್ಹತೆ, ವೃತ್ತಿ, ಸಾರ್ವತ್ರಿಕ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಈ ವಿಶ್ಲೇಷಣೆಯನ್ನು ಹೀಗಿದ್ದರೆ ಹೇಗೆ ಎಂಬ ವಿಶ್ಲೇಷಣೆಗೆ ಒಳಪಡಿಸಿ ಈ ಹಿರಿಯರ ಅಭಿಪ್ರಾಯಕ್ಕೆ ಗೌರವ ಸಲ್ಲಿಸೋಣ.

ಏಕೆಂದರೆ ಎಲ್ಲಾ ಸಂಭಾವ್ಯ ಆಯಾಮಗಳಿಂದಲೂ ವಿಷಯವನ್ನು ತೂಲಿಸುವುದು ಸಂಶೋಧಕನ ಆದ್ಯ ಕರ್ತವ್ಯ. ಹಾಗಾಗಿ “ಲಿಂಗಾಯತ ಬೇರೆಯದೇ ಆದ ಧರ್ಮ. ಲಿಂಗಾ ಯತಕ್ಕೂ ವೀರಶೈವಕ್ಕೂ ಯಾವುದೇ ಸಂಬಂಧವಿಲ್ಲ" ಎನ್ನುವ ಇವರ ಮೂಲಭೂತ ವಾದವನ್ನು ಸದ್ಯಕ್ಕೆ ಒಪ್ಪಿ ಈ ವಿಶ್ಲೇಷಣೆಯನ್ನು ಕೈಗೊಳ್ಳೋಣ.

ಇವರ ಸಂಕಥನದಲ್ಲಿ ಬಸವಣ್ಣನು ಲಿಂಗಾಯತ ಧರ್ಮದ ಸಂಸ್ಥಾಪಕನಾಗಿದ್ದು ಕೊರಳಿಗೆ ಲಿಂಗ ಕಟ್ಟುವ ಲಿಂಗದೀಕ್ಷೆ ಪದ್ಧತಿಯನ್ನು ಜಾರಿಗೆ ತಂದಿದ್ದನು ಎನ್ನುತ್ತ ವಚನ ಸಾಹಿ ತ್ಯವೇ ಇದರ ಪ್ರಮುಖ ಆಧಾರ ಮತ್ತು ಧರ್ಮಗ್ರಂಥ ಎನ್ನುತ್ತಾರೆ. ಲಿಂಗ ಕಟ್ಟಿಕೊಳ್ಳುವ ಪದ್ಧತಿಯ ಕುರಿತು ಕಳೆದ ಅಂಕಣಗಳಲ್ಲಿ ಈಗಾಗಲೇ ಸಾಕ್ಷಿ ಸಮೇತ ಚರ್ಚಿಸಿರುವ ಕಾರಣ ಅದನ್ನು ಬದಿಗಿಟ್ಟು ಕೇವಲ ಮತ್ತು ಕೇವಲ ಈ ಗುಂಪಿನ ಏಕೈಕ ಆಕರವಾದ ವಚನ ಸಾಹಿತ್ಯವನ್ನು ಮಾತ್ರ ಪರಿಗಣಿಸಿ ಸಂಶೋಧನಾ ಶಾಸ್ತ್ರದ ಮೂಲ ಭೂತ ತಾರ್ಕಿಕ ಅಂಶ ದಡಿಯಲ್ಲಿ ವಿಶ್ಲೇಷಿಸೋಣ.

ಇದನ್ನೂ ಓದಿ: Ravi Hunj Column: ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲೂ ಇತ್ತು

ಗೊರುಚ ಅಧ್ಯಕ್ಷರಾಗಿರುವ ಪರಿಷತ್ತಿನ ವಚನ ಸಾಹಿತ್ಯದಲ್ಲಿ ವೀರಶೈವ ಎಂಬ ಪದವನ್ನು 142 ವಚನಗಳಲ್ಲಿ ಒಟ್ಟು 221 ಕಡೆ 30ಕ್ಕೂ ಹೆಚ್ಚು ವಚನಕಾರರು ಬಳಸಿದ್ದಾರೆ. ಆ ವಚನ ಕಾರರು ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಿದ್ದರಾಮೇಶ್ವರ, ಮೋಳಿಗೆ ಮಾರಯ್ಯ, ಅಮುಗೆ ರಾಯಮ್ಮ, ಅರಿವಿನ ಮಾರಿತಂದೆ, ಆದಯ್ಯ, ಕಾಡಸಿದ್ದೇಶ್ವರ, ಇಮ್ಮಡಿ ಮುರಿ ಘಾಗುರು ಸಿದ್ದಸ್ವಾಮಿ, ಕುಷ್ಟಗಿ ಕರಿಬಸವೇಶ್ವರ, ಕೂಡಲಸಂಗಮೇಶ್ವರ, ಕೋಲ ಶಾಂತಯ್ಯ, ಗುರುಸಿದ್ಧದೇವರು, ಘಟ್ಟಿವಾಳಯ್ಯ, ಚಂದಿಮರಸ, ಜಕ್ಕಣ್ಣಯ್ಯ, ದೇಶೀಕೇಂದ್ರ ಸಂಗನ ಬಸವಯ್ಯ, ಶಾಂತವೀರೇಶ್ವರ, ತೋಂಟದ ಸಿದ್ದಲಿಂಗ ಶಿವಯೋಗಿಗಳು, ಪ್ರಸಾದಿ ಭೋಗಣ್ಣ, ಬಹುರೂಪಿ ಚೌಡಯ್ಯ, ಮುಮ್ಮಡಿ ಕಾರ್ಯೇಂದ್ರ, ಹೇಮಗಲ್ಲ ಹಂಪ, ಸ್ವತಂತ್ರ ಸಿದ್ದಲಿಂಗ, ಷಣ್ಮುಖಸ್ವಾಮಿ ಮುಂತಾದವರು.

ಲಿಂಗಾಯತ ಎಂಬ ಪದವನ್ನು ಒಟ್ಟು 10 ವಚನಗಳಲ್ಲಿ 12 ಕಡೆ 8 ವಚನಕಾರರು ಬಳಸಿzರೆ. ಆ ವಚನಕಾರರು ದೇಶೀಕೇಂದ್ರ ಸಂಗನಬಸವಯ್ಯ, ಶಾಂತವೀರೇಶ್ವರ, ಉರಿಲಿಂಗ ಪೆದ್ದಿ, ಏಲೇಶ್ವರ ಕೇತಯ್ಯ, ಸಿದ್ದರಾಮೇಶ್ವರ, ಅಕ್ಕಮ್ಮ, ಚೆನ್ನಬಸವಣ್ಣ ಮತ್ತು ಗುರುಸಿದ್ಧ ದೇವರು. ಪ್ರೊ.ಕಲಬುರ್ಗಿ ಅವರ ಘನ ಅಧ್ಯಕ್ಷತೆಯಲ್ಲಿ ಪ್ರಕಟಿಸಿರುವ ಸಮಗ್ರ ವಚನ ಸಾಹಿತ್ಯದ ಎಲ್ಲಾ ಅಧಿಕೃತ ವಚನಗಳನ್ನು ಪರಿಗಣಿಸಿ ನಾನು ಈ ಸಂಖ್ಯೆಯನ್ನು ಕಂಡು ಕೊಂಡಿದ್ದೇನೆ.

ಲಿಂಗಾಯತ ಎಂಬುದು ಬೇರೆ ಆಗಿದ್ದರೆ ಮತ್ತು ಬಸವಾದಿ ಶರಣರು ಲಿಂಗಾಯತ ಧರ್ಮ ಪರಿಪಾಲಕರಾದರೆ ಅವರೇಕೆ ವೀರಶೈವ ಪದವನ್ನು 221 ಕಡೆ ಬಳಸಿ ಲಿಂಗಾಯತ ಪದ ವನ್ನು ಕೇವಲ 12 ಕಡೆ ಬಳಸಿದ್ದಾರೆ? ಈ ಪ್ರಶ್ನೆಗೆ ಗೊರುಚ, ಡಾ.ವೀರಣ್ಣ ರಾಜೂರ, ಜಾಮದಾರರಾದಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಕಟ್ಟಕಡೆಯ ಸದಸ್ಯನೂ ಒಕ್ಕೊರಲಿನಿಂದ, “ವೀರಶೈವ ಪದವನ್ನು 15ನೇ ಶತಮಾನದಲ್ಲಿ ಸಂಕಲಿಸುವಾಗ ವೀರಶೈ ವರು ತಿದ್ದಿ ತೀಡಿ ತುರುಕಿದ್ದಾರೆ.

ವಚನಗಳು, ಶರಣರು, ಕಲ್ಯಾಣಕ್ರಾಂತಿ ಎಲ್ಲವೂ 300 ವರ್ಷಗಳ ಕಾಲ ಅಜ್ಞಾತವಾಸ ದಲ್ಲಿದ್ದವು. ಅವನ್ನು ಬೆಳಕಿಗೆ ತಂದದ್ದು 15ನೇ ಶತಮಾನದಲ್ಲಿ" ಎಂದೂ ಹೇಳುತ್ತಾರೆ. ಸರಿ, ಹೀಗೆ 300 ವರ್ಷಗಳ ಕಾಲ ಅeತವಾಸದಲ್ಲಿದ್ದ ಲಿಂಗಾಯತವನ್ನು ವೀರಶೈವರು ಬೆಳಕಿಗೆ ತಂದು ವೀರಶೈವ ಪದವನ್ನು ವಚನಗಳಲ್ಲಿ ತುರುಕಿ, ಸಂಸ್ಕೃತ ಶ್ಲೋಕವಿರುವ ಹೊಸ ವಚನಗಳನ್ನು ಶರಣರ ಹೆಸರಿನಲ್ಲಿ ಸೃಷ್ಟಿಸಿ ವಚನಾಧರಿತ ಶೂನ್ಯಸಂಪಾದನೆ, ರಗಳೆ, ಪುರಾಣವನ್ನು ಸೃಜಿಸಿ ಬಸವ ಸಂಕಥನವನ್ನು ಕಟ್ಟಿದರೇಕೆ? ಅದಕ್ಕಿಂತ ಸುಲಭವಾಗಿ ಬಸವಣ್ಣನನ್ನು, ಶರಣರನ್ನು ಅಜ್ಞಾತದಲ್ಲಿಯೇ ಇರಿಸಿ ತಮ್ಮದೇ ರೇವಣಸಿದ್ಧನನ್ನೋ, ರೇಣುಕನನ್ನೋ ಪ್ರತಿಷ್ಠಾಪಿಸಬಹುದಿತ್ತಲ್ಲವೇ?! ಮೇಲಾಗಿ ಬಸವಣ್ಣ, ಶರಣರು, ಕಲ್ಯಾಣ ಕ್ರಾಂತಿ, ಲಿಂಗಾಯತ ಧರ್ಮಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇರದ ಕಾರಣ ವಚನ ಸಾಹಿತ್ಯವನ್ನು ಪುನರ್‌ರಚಿಸಿದ ವೀರಶೈವ ಗುರುವಿರಕ್ತರು ಸುಲಭವಾಗಿ ಇದನ್ನೆಲ್ಲ ಮರೆ ಮಾಚಿ ತಮ್ಮ (ಸ್ವ) ಸಿದ್ದಾಂತ ಶಿಖಾಮಣಿಯನ್ನು ವಿಜೃಂಭಿಸಬಹುದಿತ್ತಲ್ಲವೇ?! ಅದರಲ್ಲೂ ಕೊಂಡಗುಳಿ ಕೇಶೀರಾಜನ ಇತಿಹಾಸ ಮತ್ತು ಜೀವನ ಚರಿತ್ರೆಯು ಬಸವಣ್ಣನ ಚರಿತ್ರೆಯ ಪ್ರತಿರೂಪದಂತೆಯೇ ಇದೆ.

ಯಾವ ಸಾಕ್ಷಿ ಪುರಾವೆಯಿರದ ಬಸವಣ್ಣನನ್ನು ಬಿಟ್ಟು ಸಾಕ್ಷಿ ಪುರಾವೆ ಇರುವ ಬಸವಣ್ಣ ನಿಗಿಂತ ಪ್ರಾಚೀನನಾದ ಕೇಶೀರಾಜನನ್ನೇ ಸುಲಭವಾಗಿ ಬಸವಣ್ಣನಂತೆ ವಿಜೃಂಭಿಸಬಹು ದಿತ್ತಲ್ಲವೇ? ಹಾಗೇಕೆ ಮಾಡಲಿಲ್ಲ ಎಂಬ ತಾರ್ಕಿಕ ಪ್ರಶ್ನೆಯೊಂದಿಗೆ ಇವರ ಎಲ್ಲಾ ವಾದವು ಅತಾರ್ಕಿಕ ನಿಶ್ಶೂನ್ಯವಾಗುತ್ತದೆ. ಇನ್ನು ವಚನಗಳಲ್ಲಿ ಹೇರಳವಾಗಿ ಬಳಸಿರುವ ಮಾಹೇ ಶ್ವರ ಪದವನ್ನು ವೀರಶೈವ ಜಂಗಮಸೂಚಕ ಎಂದೇ ಅರ್ಥೈಸಲಾಗಿದೆ. ಈ ‘ಮಾಹೇಶ್ವರ’ ಪದವನ್ನು ಒಟ್ಟು 355 ವಚನಗಳಲ್ಲಿ 525 ಕಡೆ 63 ವಚನಕಾರರು ಬಳಸಿದ್ದಾರೆ ಸಹ.

ವೀರಶೈವ ಲಿಂಗಾಯತದಂಥ ಸಾಮುದಾಯಿಕ ಪದಗಳಿಗಿಂತ ಮಾಹೇಶ್ವರ ಎಂಬ ಗುರು ಜನರನ್ನು ಸಂಬೋಧಿಸಿರುವ ವಚನಗಳೇ ಅತ್ಯಂತ ಹೆಚ್ಚಾಗಿರುವ ಕಾರಣ ವಚನ ಗಳನ್ನು ವರ್ಗೀಕರಿಸಿ ಸಂಕಲಿಸಿದ ನೂರೊಂದು ವಿರಕ್ತರಿಗೆ, ವೀರಶೈವರಿಗೆ, ಜಂಗಮರಿಗೆ, ಲಿಂಗಿ ಬ್ರಾಹ್ಮಣರಿಗೆ ಲಿಂಗಾಯತವನ್ನು ನಿರ್ಲಿಂಗಗೊಳಿಸುವುದು ಖಂಡಿತವಾಗಿಯೂ ಕಷ್ಟ ಸಾಧ್ಯವಾಗಿರಲಿಲ್ಲ. ವಿಭಜಕರ ವಾದದಂತೆ ಅದು ಪ್ರಕ್ಷಿಪ್ತ ಇದು ನಿಕ್ಷೇಪ ಎಂದು ಒಂದೊಂದೇ ವಚನವನ್ನು ಪಚನವಾಗಿಸಿದರೆ ಉಳಿಯುವುದು ಬಹುದೊಡ್ಡ ತೇಗು ಮಾತ್ರ!

ಇವರಂತೂ ಪ್ರಕ್ಷೇಪ ಎನ್ನಲು ಯಾವುದೇ ತಾರ್ಕಿಕ ಉದಾಹರಣೆಯನ್ನು ಕೊಡುವುದಿಲ್ಲ. ಆದರೆ ಈ ಬಗ್ಗೆ ಅಪಾರ ಸಂಶೋಧನೆ ಮಾಡಿರುವ ಎಲ. ಬಸವರಾಜುರವರು ತಮ್ಮ ‘ಅಲ್ಲಮನ ವಚನ ಚಂದ್ರಿಕೆ’ ಪೀಠಿಕೆಯಲ್ಲಿ (ಪುಟ 29, 30) ಹೀಗೆ ಹೇಳಿದ್ದಾರೆ: “ಶೂನ್ಯ ಸಂಪಾದನೆ ಬಗ್ಗೆ ಮತ್ತು ಶೂನ್ಯ ಸಂಪಾದನೆಯಿಂದ ವಚನಗಳನ್ನು ಸಂಗ್ರಹಿಸಿರುವಂತೆ ಕಂಡುಬರುವ ಇತರೆ ವಚನ ಸಂಕಲನ ಗ್ರಂಥಗಳಲ್ಲಿನ ವಚನಗಳ ಬಗ್ಗೆ ಒಂದು ಎಚ್ಚರ ವಿರಬೇಕು.

ಅವುಗಳನಾದರೂ ಸಂಭಾಷಣೆಗೆ ಹೊಂದಿಕೊಳ್ಳುವ ಸಂಬೋಧನೆಗಳೂ, ಆ ಸಂಭಾಷಣೆ ಗಳ ವಿಷಯವಾದ ಶರಣರ ಹೆಸರುಗಳೂ ಇದ್ದರೆ ಅವು ಮೂಲವಚನಕ್ಕೆ ಸೇರಿದ ಭಾಗ ಗಳಲ್ಲವೆಂದೂ, ಅವನ್ನು ಆಮೇಲೆ ಶೂನ್ಯಸಂಪಾದನಕಾರರಾದ ಮಹಾದೇವಯ್ಯ ಮುಂತಾದವರು ಸೇರಿಸಿರುವರೆಂದೂ ನೆನಪಿನಲ್ಲಿಡಬೇಕು. ಶರಣರ ನಡುವೆ ನಡೆದಿರ ಬಹುದಾದ ಸಂಭಾಷಣೆಯ ವಿವರಗಳಲ್ಲಿ ಬಹುಭಾಗ ಶೂನ್ಯ ಸಂಪಾದನಕಾರರ ಕಲ್ಪನೆಯನ್ನು ಮಾತ್ರ ಅವಲಂಬಿಸಿದೆ.

ಅವುಗಳಲ್ಲಿ ಔಚಿತ್ಯವಿದ್ದರೂ ಅವು ಚಾರಿತ್ರಿಕವೆನಿಸಿಕೊಳ್ಳುವಷ್ಟು ಯಥಾವತ್ತಾದವು ಗಳಲ್ಲ. ಸಂಭಾಷಣೆಗೆ ಹೊಂದಿಕೊಳ್ಳಲು ಬೇಕಾದ ಸಂಬೋಧನೆಗಳು ಮತ್ತು ಆ ಸಂಭಾ ಷಣೆ ಮಾಡುವಾಗ ಯಾವ ಶರಣನ ಬಾಯಿಂದ ಆ ವಚನ ಹೊರಹೊಮ್ಮಿತೆಂದು ಸಂಪಾದನಕಾರ ಭಾವಿಸಿದ್ದನೋ ಅವರ ಹೆಸರುಗಳೂ ಶೂನ್ಯಸಂಪಾದನಕಾರರಿಂದ ಆ ವಚನಕ್ಕೆ ಸೇರಿಸಲ್ಪಟ್ಟಿರುವುದರಿಂದ ಅವು ಪ್ರಕ್ಷಿಪ್ತಗಳೆನ್ನಲೇಬೇಕು.

ಉದಾಹರಣೆಗೆ ‘ಕೂಡಲಸಂಗಯ್ಯ, ಈ ನಿಮ್ಮನುಭಾವವ ಮಾತಿನ ಮಥನವೆನ್ನಬಹುದೇ’ ಎಂಬುದನ್ನು ಶೂನ್ಯಸಂಪಾದನಕಾರ ‘ಕೂಡಲಸಂಗಮದೇವ, ನಿಮ್ಮನುಭಾವವ ಮಾತಿನ ಮಥನವೆಂದು ನುಡಿಯಬಹುದೇ ಪ್ರಭುವೆ?’ ಎಂದಿರುವುದು. ಹಾಗೆಯೇ ‘ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ, ರಂಗವಾಲಿಯನಿಕ್ಕಿ ‘ಉಘೇ, ಚಾಂಗು ಭಲಾ’ ಎಂದೆಂಬೆ. ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ’ ಎಂಬುದು ಪ್ರಕ್ಷಿಪ್ತವಾಗಿ, ‘ಮನೆಯೊಡೆಯ ಮನೆಗೆ ಬಂದರೆ ಕನಕದ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ, ರಂಗವಾಲಿಯನಿಕ್ಕಿ ‘ಉಘೇ, ಚಾಂಗು ಭಲಾ’ ಎಂದೆಂಬೆ ಕೂಡಲಸಂಗಮದೇವ, ನಿಮ್ಮ ಶರಣ ಪ್ರಭುದೇವರು ಬಂದರೆ ಉಬ್ಬಿಕೊಂಡು ನಲಿದಾಡುವೆ’ ಎಂದಾಗಿರುವುದು".

ಹೀಗೆ ವಚನಗಳಲ್ಲಿ ಯಾವುದನ್ನು ತಾರ್ಕಿಕವಾಗಿ ಪ್ರಕ್ಷಿಪ್ತವೆಂದು ಗುರುತಿಸಬೇಕು ಎಂಬ ಸ್ಪಷ್ಟತೆಯನ್ನು ಸ್ಥಿತಪ್ರಜ್ಞರಾಗಿ ಎಲ.ಬಸವರಾಜು ಅವರು ಕಟ್ಟಿಕೊಡುತ್ತಾರೆ. ಈ ಪ್ರಕಾರ ವಾಗಿ ಅಥವಾ ಸಂಶೋಧನಾತ್ಮಕ ನೆಲೆಯ ಯಾವುದೇ ತಾರ್ಕಿಕ ಪ್ರಕಾರವಾಗಿಯಾಗಲಿ ವಿಭಜಕರು ತುರುಕುವಿಕೆಯನ್ನು ಪ್ರಸ್ತುತಪಡಿಸಿದರೆ ಒಪ್ಪಬಹುದು. ಆದರೆ ಅಂಥ ಯಾವುದೇ ತಾರ್ಕಿಕ ನೆಲೆಯ ವಾದ ಇವರಲ್ಲಿಲ್ಲ.

ಇಂಥ ತಾರ್ಕಿಕ ಸ್ಪಷ್ಟತೆಯನ್ನು ಕಲ್ಬುರ್ಗಿಯವರು ಕೊಡದೆ ಸಾರಾಸಗಟಾಗಿ ವೀರಶೈವ ಎಂಬ ವಚನಗಳೆ ಪ್ರಕ್ಷಿಪ್ತ ಎಂದಿದ್ದರು. ಈ ಹಿನ್ನೆಲೆಯಲ್ಲಿ ಕಲ್ಬುರ್ಗಿಯವರ ವೀರಶೈವ ಕುರಿತಾದ ಸಂಶೋಧಕ ಅಭಿಪ್ರಾಯಗಳನ್ನು ಭ್ರಮಾತ್ಮಕ ತೀರ್ಮಾನವೆನ್ನುವ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಎಸ್.ವಿದ್ಯಾಶಂಕರ್ ಅವರ ‘ವಚನಾನುಶೀಲನ’ ಕೃತಿ ಸಹ ಇಲ್ಲಿ ಅತ್ಯಂತ ಉಲ್ಲೇಖನೀಯ.

ಎಲ್.ಬಸವರಾಜುರವರ ತರ್ಕದ ಆಧಾರದ ಮೇಲೆಯೇ ಪ್ರಕ್ಷೇಪಗಳನ್ನು ಗುರುತಿಸಿ ವಚನಗಳನ್ನು ಸಂಪಾದಿಸಲಾಗಿದೆ ಎಂಬುದು ಗಮನಾರ್ಹ. ಓರ್ವ ಸಂಶೋಧಕನಲ್ಲಿರ‌ ಬೇಕಾದ ಒಂದು ತಟಸ್ಥ ನೀತಿ, ಸ್ಥಿತಪ್ರಜ್ಞತೆ, ನಿರ್ಭಾವನೆಗಳು ಯಾವೊಬ್ಬ ಪ್ರತ್ಯೇಕ ಕೂಗಿಗಳಲ್ಲಿಯೂ ಕಾಣುವುದಿಲ್ಲ.

ಉದಾಹರಣೆಗೆ ಲ್ಬುರ್ಗಿ ಅವರ ವಾರಸುದಾರ ಎಂದೇ ಖ್ಯಾತರಾಗಿರುವ ಡಾ. ವೀರಣ್ಣ ರಾಜೂರ ಅವರು ತಮ್ಮ ಒಂದು ಭಾಷಣದಲ್ಲಿ, “15ನೇ ಶತಮಾನದಲ್ಲಿ ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ. ದಲಿತನಾದ ಉರಿಲಿಂಗಪೆದ್ದಿಯ ವಚನಗಳಲ್ಲಿ ಸಹ ಸಂಸ್ಕೃತ ಶ್ಲೋಕಗಳನ್ನು ತುರುಕಲಾಗಿದೆ" ಎಂದು ನೆತ್ತಿಯ ಮೇಲೆ ಕುಕ್ಕಿ ಕುಕ್ಕಿ ತಮ್ಮ ಭಾವನಾತ್ಮಕ ಅನಿಸಿಕೆಯನ್ನು ಸಂಶೋಧನೆಯೆಂದು ಮಂಡಿಸುತ್ತಾರೆ.

ಆದರೆ ಈ ವಚನಗಳು 12ನೇ ಶತಮಾನದಲ್ಲಿ ಹೇಗಿದ್ದವು ಎಂಬ ಒಂದೇ ಒಂದು ಧಾರವನ್ನು ಕೊಡುವುದಿಲ್ಲ. ಖುದ್ದು ಇವರೇ 15ನೇ ಶತಮಾನದಲ್ಲಿ ಹರಿಹರ, ಸೋಮನಾಥ, ತೋಂಟದ ಸಿದ್ಧಲಿಂಗ, ನೂರೊಂದು ವಿರಕ್ತರು ವೀರಶೈವ ಪದವನ್ನು ವಚನಗಳಲ್ಲಿ ತುರುಕುವುದನ್ನು ಕಣ್ಣಾರೆ ಕಂಡಂತೆ ಆಜ್ಞಾಪಿಸುತ್ತಾರೆ. ಅಲ್ಲದೆ ಖುದ್ದು ಇವರೇ ಹಿಂದಿನ ಜನ್ಮದಲ್ಲಿ ಉರಿಲಿಂಗಪೆದ್ದಿ ಆಗಿದ್ದರೇನೋ ಎನ್ನುವಂತೆ ‘ಅವನಿಗೆ ಸಂಸ್ಕೃತ ಗೊತ್ತಿರಲಿಲ್ಲ’ ಎನ್ನುತ್ತಾರೆ! ಅವರ ಪ್ರಕಾರ ದಲಿತನಾದ ಉರಿಲಿಂಗಪೆದ್ದಿ ಸಂಸ್ಕೃತ ಕಲಿಯಲು ಸಾಧ್ಯವೇ ಇರಲಿಲ್ಲ!

ಅಂದರೆ ಅಬ್ರಾಹ್ಮಣರಿಗೆ ವರ್ಜ್ಯವಾದ ಸಂಸ್ಕೃತದಲ್ಲಿ ಕಾವ್ಯವನ್ನು ಅಬ್ರಾಹ್ಮಣ ವ್ಯಾಸ, ವಾಲ್ಮೀಕಿ, ಕಾಳಿದಾಸರು ರಚಿಸದೆ ಅವರುಗಳ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ರಾಮಾಯಣ, ಮಹಾಭಾರತ, ಮೇಘದೂತಗಳನ್ನು ಸೃಷ್ಟಿಸಿದ್ದಾರೆ ಎನ್ನಬಹುದೋ? ಹಾಗೊಂದು ವೇಳೆ ಈ ಅಬ್ರಾಹ್ಮಣರ ಹೆಸರಿನಲ್ಲಿ ಸಾಹಿತ್ಯವನ್ನು ಸೃಷ್ಟಿಸುವ ಅನಿವಾರ್ಯತೆ ಕಿಡಿಗೇಡಿ ಬ್ರಾಹ್ಮಣರಿಗೇನಿತ್ತು!? ಎಂಬಲ್ಲಿಗೆ ರಾಜೂರರ ಜೀವಮಾನ ಸಂಶೋಧನಾರ್ಥವು ಪಾರಮಾರ್ಥಿಕ ನಶ್ವರವಾಗುತ್ತದೆ! ಕಲ್ಬುರ್ಗಿ ಮೇಲ್ಪಂಕ್ತಿಯ ಇಂಥ ಚಿಟಿಕೆ ಹೊಡೆದು ಆಟಿಕೆಯಂತೆ ಸೃಷ್ಟಿಸಿದ ಪಿಎಚ್‌ಡಿ ಸಂಶೋಧನೆಗಳು ‘ಶೋಧಗಂಗಾ’ ಅಂತರ್ಜಾಲ ತಾಣದ ತುಂಬೆ ಇಂದು ಪ್ರವಹಿಸುತ್ತಿವೆ.

ಹಾಗಾಗಿಯೇ ಪಿಎಚ್‌ಡಿ ಪಡೆದ ಅಭ್ಯರ್ಥಿಗಳು ನರೇಗಾ ಯೋಜನೆಯ ದಿನಗೂಲಿ ಕೆಲಸಕ್ಕೆ ಹೋಗುತ್ತಿರುವ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಅಷ್ಟರ ಮಟ್ಟಿಗೆ ಈ ಪಿಎಚ್‌ ಡಿ ಪದವಿಗಳ ಗುಣಮಟ್ಟ ಕುಸಿದಿದೆ ಎಂಬುದು ಇಲ್ಲಿನ ಒಂದು ಉಪ ಪ್ರಮೇಯ. ಕೆ.ಎಸ್.ನರಸಿಂಹಸ್ವಾಮಿಯವರ ಕವನ ಸಂಕಲನ, ‘ಮೈಸೂರು ಮಲ್ಲಿಗೆ’ಗೆ ಕಥೆ ಹೆಣೆದು ಸಿನಿಮಾ ಮಾಡಿದಂತೆಯೇ

ವಚನ ಸಾಹಿತ್ಯದ ಆಧಾರದಲ್ಲಿ ‘ಶೂನ್ಯ ಸಂಪಾದನೆ’ ಎಂಬ ಸೃಜನಶೀಲ ಸಂಕಥನ ಸೃಷ್ಟಿಯಾಗಿದೆ. ಈ ಸಂಕಥನಕ್ಕೆ ವಚನಗಳನ್ನು ಬಿಟ್ಟರೆ ಬೇರೆ ಯಾವುದೇ ಆಧಾರಗಳಿಲ್ಲ. ಈವರೆಗೆ ಸಿಕ್ಕಿರುವ ವಚನಗಳ ತಾಳೆಗರಿಗಳು ಸಹ ವೀರಶೈವರು ವಿಂಗಡಿಸಿ, ಸಂಕಲಿಸಿ ತುರುಕಿ, ಸೃಷ್ಟಿಸಿರುವ ವಚನಗಳದ್ದೇ ಹೊರತು 12ನೇ ಶತಮಾನದ ಏಕೈಕ ತಾಳೆಗರಿಯೂ ಇಲ್ಲ.

ಹಾಗಿದ್ದಾಗ ಇವರ ಎಲ್ಲಾ ವಾದವೂ ನಿರ್ವಾತ ಶೂನ್ಯಾಧರಿತ ಗಾಳಿ ಗೋಪುರದ ಭಾವುಕ ಮಂಟಪವೆಂದು ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಯಾರು ಬೇಕಾದರೂ ಸಾಬೀತು ಮಾಡಬಹುದು! ಅದೇ ರೀತಿ ‘ವಚನ ಟಿವಿ’ ಎಂಬ ಪ್ರತ್ಯೇಕ ಧರ್ಮ ಕೂಗಿಗರ ಮುಖವಾಣಿಯ ಸಂದರ್ಶನವೊಂದರಲ್ಲಿ ಜಾಮದಾರರು, ‘ಬಂಚ್ ಆಫ್ ಥಾಟ್ಸ್’ ಪುಸ್ತಕ ವನ್ನು ಉ‌ಲ್ಲೇಖಿಸಿ, ಈ ಕೃತಿಯಲ್ಲಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಗೋಲ್ವಾಲ್ಕರ್ ಹೇಳಿದ್ದಾರೆ ಎನ್ನುತ್ತಾರೆ. ಆದರೆ ಇದು ಸಂಪೂರ್ಣ ಸುಳ್ಳು!

ಈ ಪುಸ್ತಕದಲ್ಲಿ ಲಿಂಗಾಯತ ಪದ ಬಳಸಿರುವ ಎರಡು ಪ್ಯಾರಗಳು (1968ರ ನಾಲ್ಕನೇ ಮುದ್ರಣ, ಅಧ್ಯಾಯ: Children of the motherland) ಹೀಗಿವೆ: 1. ""The first special characteristic that strikes the eye of an outsider is the bewildering variety of sects and sub§s like Shaiva, Vaishnava, Shakta, Vaidik, Bouddha, Jain, Sikh, Lingayat, Aryasamaj, etc., existing within the elastic framework of our dharma. The great masters and sponsors of all these upasanaas founded these various forms of worship to suit the diverse mental aptitudes of our people. However, in the final analysis, they all point to the same goal of realizing the Ultimate Truth & variously referred to as Brahma, Atma, Shiva, Vishnu, Ishwara, or even Shoonya or Maha Shoonya'' (Page 101). ಅನುವಾದ: “ನೋಡುಗ ನಿಗೆ ಮೊದಲ ನೋಟಕ್ಕೇ ಗೋಚರಿಸುವ ಸಾಮಾನ್ಯ ಸಂಗತಿಯೆಂದರೆ ನಮ್ಮ ಧರ್ಮದ ಪರಿಧಿಯ ಚೌಕಟ್ಟಿನೊಳಗೇ ಇರುವ ಶೈವ, ವೈಷ್ಣವ, ಶಾಕ್ತ, ವೈದಿಕ, ಬೌದ್ಧ, ಜೈನ, ಸಿಖ್, ಲಿಂಗಾಯತ, ಆರ್ಯಸಮಾಜ ಇತ್ಯಾದಿ ಹಲವಾರು ಪಂಥಗಳು ಮತ್ತು ಉಪಪಂಥಗಳ ಅಸ್ತಿತ್ವ. ಈ ಎಲ್ಲ ಉಪಾಸನೆಗಳ ಗುರುಗಳು ಮತ್ತು ಪ್ರವರ್ತಕರು ಜನರ ವಿವಿಧ ಮಾನಸಿಕ ಪ್ರವೃತ್ತಿಗೆ ಅನುಗುಣವಾಗಿ ವಿವಿಧ ಆರಾಧನಾ ರೂಪಗಳನ್ನು ಸ್ಥಾಪಿಸಿದ್ದಾರೆ ಎಂಬುದು. ಮತ್ತು ಕಡೆಯದಾಗಿ, ಇವೆಲ್ಲವೂ ಅಂತಿಮ ಸತ್ಯವನ್ನು ಅರಿಯುವ ಒಂದೇ ಗುರಿಯನ್ನು ಸೂಚಿಸುತ್ತವೆ- ಇದನ್ನು ಬ್ರಹ್ಮ, ಆತ್ಮ, ಶಿವ, ವಿಷ್ಣು, ಈಶ್ವರ, ಅಥವಾ ಶೂನ್ಯ ಅಥವಾ ಮಹಾಶೂನ್ಯ ಎಂದು ವಿವಿಧ ರೀತಿಯಲ್ಲಿ ಕರೆಯಲಾಗಿದೆ" (ಪುಟ 102).

  1. “ ""Some of the Sikhs, Jains, Lingayats, and Aryasamajists declare that they are separate from Hindus'' (Page). ಅನುವಾದ: “ಕೆಲವು ಸಿಖ್ಖರು, ಜೈನರು, ಲಿಂಗಾ ಯಿತರು ಮತ್ತು ಆರ್ಯಸಮಾಜಿಗಳು ತಾವು ಹಿಂದೂಗಳಿಂದ ಪ್ರತ್ಯೇಕವಾಗಿದ್ದೇವೆಂದು ಘೋಷಿಸುತ್ತಾರೆ" (ಪುಟ 106). ಗೋಲ್ವಾಲ್ಕರ್ ಅವರು ಈ ಪಂಥಗಳು ಪ್ರತ್ಯೇಕ ಧರ್ಮ ಗಳು ಎನ್ನುವುದು ಹೇಗೆ ತಪ್ಪು ಎಂದು ಸಿಖ್ ಪ್ರತ್ಯೇಕ ಧರ್ಮದ ಹೋರಾಟವನ್ನು ಉದಾಹರಿಸುತ್ತ ಲೇಖನವನ್ನು ಮುಂದುವರಿಸಿದ್ದಾ ರೆಯೇ ಹೊರತು ಜಾಮದಾರರು ಹೇಳುವಂತೆ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಈ ಪುಸ್ತಕದಲ್ಲಿ ಎಲ್ಲಿಯೂ ಹೇಳಿಲ್ಲ. ಈ ಪಂಥಗಳು ಹಿಂದೂ ಧರ್ಮದಿಂದಲೂ ಬೇರೆ ಎಂದೂ ಹೇಳಿಲ್ಲ!

ಇರಲಿ, ಐತಿಹಾಸಿಕ ಸತ್ಯಗಳ ಅನಾವರಣಗಳಿಂದ ಕಂಗೆಟ್ಟಿರುವ ಜಾಮದಾರರು ಈ ಸಂದರ್ಶನದಲ್ಲಿ ಆರಾಧ್ಯರು, ಜಂಗಮರು ಬ್ರಾಹ್ಮಣರು ಆದ ಹರಿಹರ, ಪಾಲ್ಕುರಿಕೆ ಸೋಮನಾಥ, 15ನೇ ಶತಮಾನದ ತೋಂಟದ ಸಿದ್ಧಲಿಂಗೇಶ್ವರರಾದಿಯಾಗಿ ಎಲ್ಲರನ್ನೂ ವೀರಶೈವ ಪದ ತುರುಕಿದ ಭ್ರಷ್ಟರು ಎಂದು ಆಪಾದಿಸುತ್ತಾರಲ್ಲದೆ ನಂತರದ ಎಲ್ಲಾ ಮಠಾಧೀಶರೂ ಭ್ರಷ್ಟರು ಎನ್ನುತ್ತಾರೆ.

ಹೀಗೆಯೇ ವಿಶ್ವವಾಣಿಯ ತಾರ್ಕಿಕ ಸತ್ಯದ ಅನಾವರಣವಾಗುತ್ತ ನಡೆದರೆ ಲಿಂಗಾಯತ ಸನ್ನಿ ಹಿಡಿದಿರುವ ವಿಭಜಕರು ಮುಂದೆ ಚೆನ್ನಬಸವಣ್ಣ, ಅಲ್ಲಮ ಮತ್ತು ಅಂತಿಮವಾಗಿ ವೀರಮಾಹೇಶ್ವರ ಜಂಗಮಪುರುಷ ಬಸವಣ್ಣನು ಸಹ ಭ್ರಷ್ಟ ಎಂದು ಘೋಷಿಸಿ ಜಾಗತಿಕ ಲಿಂಗಾಹತ ಮಹಾಸಭಾಕ್ಕೆ ಅಂತಿಮ ಮೊಳೆ ಹೊಡೆಯುವ ಕಾಲ ದೂರವಿಲ್ಲ ಎನಿಸುತ್ತದೆ.

ಹೀಗೆ ಜಾಗತಿಕ ಲಿಂಗಾಯತ ಮಹಾಸಭಿಕರು ತಮ್ಮ ಪ್ರತಿಯೊಂದು ನಡೆನುಡಿಯಲ್ಲಿ ತಾವು ಬಸವ ತಾಲಿಬಾನಿಗಳು ಎಂದು ಕನ್ನೇರಿ ಶ್ರೀಗಳ ಮಾತನ್ನು ಪುರಾವೆ ಸಮೇತ ಸಾಬೀತು ಪಡಿಸುತ್ತಿದ್ದಾರೆಯೇ ಹೊರತು ತಮ್ಮ ಸಂಕಥನಕ್ಕೆ ಒಂದೇ ಒಂದು ಪುರಾವೆ ಕೊಡುತ್ತಿಲ್ಲ. ಬಸವಣ್ಣನ “ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಪ್ರಾಥಮಿಕ ಶಿಶುವಿಹಾರದ ಏಕೈಕ ವಚನವನ್ನೇ ಅರ್ಥೈಸಿಕೊಳ್ಳದ ಇವರು ಸ್ನಾತಕೋತ್ತರ ಮಟ್ಟದ ಅಲ್ಲಮ ಚೆನ್ನಬಸವಣ್ಣನ ವಚನಗಳನ್ನು ಅರ್ಥೈಸಿಕೊಳ್ಳಬಲ್ಲರೇ ಎಂಬಲ್ಲಿಗೆ ಸಮಗ್ರ ಲಿಂಗಾಯತ ಪ್ರತ್ಯೇಕ ಧರ್ಮದ ವ್ಯಾಖ್ಯಾನ ಲಿಂಗಾಹತವಾಗುತ್ತದೆ. ಅಂದ ಹಾಗೆ ಯಾವು ದು ನಿರ್ನಾಮವಾಗುವುದು ಎಂಬುದು ಸ್ಫಟಿಕದಷ್ಟೇ ಸುಸ್ಪಷ್ಟ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)