Ghibli Trend : ಇಂಟರ್ನೆಟ್‌ನಲ್ಲಿ ಗಿಬ್ಲಿ ಇಮೇಜ್‌ದೇ ಹವಾ; ಇದನ್ನು ಉಚಿತವಾಗಿ ಬಳಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ AI ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್‌ನಲ್ಲಿ ಘಿಬ್ಲಿ ಸ್ಟೈಲ್ ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಸ್ಟುಡಿಯೋ ಘಿಬ್ಲಿ ಶೈಲಿಯ ಭಾವಚಿತ್ರಗಳ ಸರಣಿಯನ್ನು ಬಿಡುಗಡೆ ಮಾಡಿದೆ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ AI ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್‌ನಲ್ಲಿ ಘಿಬ್ಲಿ ಸ್ಟೈಲ್ (Ghibli Trend) ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ. ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ. ChatGPTಯ ಈ ಹೊಸ ಇಮೇಜ್ ಸೃಷ್ಟಿ ಬಳಕೆದಾರರಿಗೆ ಹೊಸ ಅನುಭವನ್ನು ನೀಡಿದೆ. ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಫೋಟೋಗಳು ಇದೀಗ ವೈರಲ್ ಆಗಿದೆ. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಸ್ಟುಡಿಯೋ ಘಿಬ್ಲಿ ಶೈಲಿಯ ಭಾವಚಿತ್ರಗಳ ಸರಣಿಯನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಘಿಬ್ಲಿ-ಪ್ರೇರಿತ ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಸರ್ಕಾರದ MyGov ವೆಬ್‌ಸೈಟ್‌ನಿಂದ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಮೋದಿ ಹಾಗೂ ಟ್ರಂಪ್ ಇರುವುದನ್ನು ಕಾಣಬಹುದಾಗಿದೆ.
Main character? No.
— MyGovIndia (@mygovindia) March 28, 2025
He’s the whole storyline
Experience through New India in Studio Ghibli strokes.#StudioGhibli#PMModiInGhibli pic.twitter.com/bGToOJMsWU
ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತದ ಐತಿಹಾಸಿಕ 2011 ರ ಐಸಿಸಿ ವಿಶ್ವಕಪ್ ಗೆಲುವನ್ನು ಮರುಸೃಷ್ಟಿಸಿದರು. ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ - ಒಂದು ಚಿತ್ರಗಳನ್ನು ತಮ್ಮ ತಂಡದ ಸದಸ್ಯರು ಸಂಭ್ರಮಾಚರಣೆಯಲ್ಲಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಮತ್ತು ಇನ್ನೊಂದು ಅವರು ವಿಶ್ವಕಪ್ ಅನ್ನು ಹೆಮ್ಮೆಯಿಂದ ಹಿಡಿದಿರುವುದನ್ನು ತೋರಿಸಿದ್ದಾರೆ.
AI-sa kuch trend ho raha hai, maine suna. Toh socha, what if Ghibli made cricket? pic.twitter.com/NdKptwOliM
— Sachin Tendulkar (@sachin_rt) March 27, 2025
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ಕುಟುಂಬವನ್ನು ಒಳಗೊಂಡ ಘಿಬ್ಲಿ ಶೈಲಿಯ ಚಿತ್ರಣವನ್ನು ಪೋಸ್ಟ್ ಮಾಡಿದ್ದಾರೆ.
ಕ್ರಿಯೇಟ್ ಹೇಗೆ ಮಾಡುವುದು?
ChatGPT ಬಳಕೆದಾರರಿಗೆ (ಪ್ಲಸ್ & ಉಚಿತ), ChatGPT ತೆರೆಯಿರಿ ಮತ್ತು ನಿಮ್ಮ ಸಾಫ್ಟ್‌ವೇರ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಈ AI ಇಮೇಜ್ ಜನರೇಟರ್ ಅನ್ನು ಬಳಸಲು ಬಯಸಿದರೆ, ಈ ಸೌಲಭ್ಯವನ್ನು ಪಡೆಯಲು ಅವರು ತಿಂಗಳಿಗೆ $20 (ಸುಮಾರು ರೂ. 1,712) ಪಾವತಿಸಬೇಕಾಗುತ್ತದೆ. ChatGPT ನಲ್ಲಿ ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳನ್ನು ರಚಿಸಲು, ನೀವು ‘ಇದನ್ನು ಘಿಬ್ಲಿ ಶೈಲಿಯ ಫೋಟೋವನ್ನಾಗಿ ಪರಿವರ್ತಿಸಬಹುದೇ?’, ‘ಸ್ಟುಡಿಯೋ ಘಿಬ್ಲಿ’ ಎಂದು ಟೈಪ್ ಮಾಡಬಹುದು.
ಈ ಸುದ್ದಿಯನ್ನೂ ಓದಿ: Tirupati Temple: ತಿರುಮಲದಲ್ಲಿ ಇನ್ನು ದೇವರ ದರ್ಶನ ಸುಲಭ; ಭಕ್ತರ ಅನುಕೂಲಕ್ಕಾಗಿ AI ಸೇವೆಗಾಗಿ ಗೂಗಲ್ ಜತೆ ಕೈಜೋಡಿಸಿದ ಟಿಟಿಡಿ
ChatGPT ಹೊರತುಪಡಿಸಿ, ನೀವು ಇದನ್ನು ಉಚಿತವಾಗಿ ಮಾಡಲು ಕೆಲ ಆ್ಯಪ್ಗಳಿವೆ. ಫ್ರೀ ಆಗಿ ಘಿಬ್ಲಿ ಚಿತ್ರಗಳನ್ನು ರಚಿಸಲು ಮೊದಲ ಸಾಧನವೆಂದರೆ ಮಿಡ್‌ಜರ್ನಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಟುಡಿಯೋ ಘಿಬ್ಲಿ-ಪ್ರೇರಿತ, ಹಯಾವೊ ಮಿಯಾಜಾಕ್ ಮತ್ತು ಇತರ ಕೀವರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ ನಿಮ್ಮ ಚಿತ್ರವು ಘಿಬ್ಲಿ ಶೈಲಿಯಾಗುತ್ತದೆ.