ಮಾ. 20 ರಿಂದ ಚರ್ಮರೋಗಕ್ಕೆ ಲೇಸರ್ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ತ್ವಚೆಗೆ ನವ ಯವ್ವನ ಪಡೆಯುವ ಕುರಿತ ನಾಲ್ಕು ದಿನಗಳ ಸಮಾವೇಶ
ಭಾರತ ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಚರ್ಮರೋಗ ತಜ್ಞರು ನೀಡುವ ಲೇಸರ್ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಪರಿಚಯಿಸುವ ಸಲುವಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಇದರಿಂದ ಚರ್ಮರೋಗ ತಜ್ಞರು ತಮ್ಮ ದಿನನಿ ತ್ಯದ ಚಿಕಿತ್ಸಾ ಅಭ್ಯಾಸಗಳನ್ನು ಉನ್ನತ ಮತ್ತು ಸುರಕ್ಷತೆಯ ಲೇಸರ್ ಚಿಕಿತ್ಸೆಯ ಬಳಕೆ ಮತ್ತು ತಂತ್ರಜ್ಞಾನದ ಅರಿವನ್ನು ತಿಳಿಯಲು ಅನುಕೂಲವಾಗಲಿದೆ


ಬೆಂಗಳೂರು: ಮಾ.20 ರಿಂದ 23 ರವರೆಗೆ ನಾಲ್ಕು ದಿನಗಳ ಅಂತಾರಾಷ್ಟ್ರೀಯ "ಭಾರತ್ ಸಮ್ಮಿಟ್ ಆಫ್ ಲೇಸರ್ ಮೆಡಿಸಿನ್ ಅಂಡ್ ಸರ್ಜರಿ" ಸಮಾವೇಶ ಬೆಂಗಳೂರು ವೈಟ್ ಫೀಲ್ಡ್ ಶೆರಟಾನ್ ಗ್ರಾಂಡ್ ಹೋಟೆಲ್ ನ ಕನ್ವೆಂಷನ್ ಸೆಂಟರ್ ನಲ್ಲಿ ನಡೆಯಲಿದೆ. ಬಿ.ಎಸ್.ಎಲ್.ಎಮ್. ಎಸ್-2025 ಈ ಶೃಂಗಸಮಾವೇಶವನ್ನು ಭಾರೀ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಚಾಲನೆ ನೀಡಲಿದ್ದಾರೆ. ಈ ಸಮಾವೇಶದಲ್ಲಿ ವೈಜ್ಞಾನಿಕ ಅಧಿವೇಶನಗಳು, 3-ಡಿ ಕಾರ್ಯಾಗಾರಗಳು, ಚರ್ಚಾಗೋಷ್ಠಿಗಳು ಮತ್ತು ನಾವಿನ್ಯತೆ ಪೋಸ್ಟರ್ ಅಧಿವೇಶನಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಸ್. ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಚರ್ಮರೋಗ ತಜ್ಞರು ನೀಡುವ ಲೇಸರ್ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಪರಿಚಯಿಸುವ ಸಲುವಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಇದರಿಂದ ಚರ್ಮರೋಗ ತಜ್ಞರು ತಮ್ಮ ದಿನನಿ ತ್ಯದ ಚಿಕಿತ್ಸಾ ಅಭ್ಯಾಸಗಳನ್ನು ಉನ್ನತ ಮತ್ತು ಸುರಕ್ಷತೆಯ ಲೇಸರ್ ಚಿಕಿತ್ಸೆಯ ಬಳಕೆ ಮತ್ತು ತಂತ್ರಜ್ಞಾನದ ಅರಿವನ್ನು ತಿಳಿಯಲು ಅನುಕೂಲವಾಗಲಿದೆ.
ಇದನ್ನೂ ಓದಿ: Bangalore News: ಪ್ಲಾಸ್ಟಿಕ್ ಮರುಬಳಕೆ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ: ಸರ್ಕಾರಿ ಶಾಲೆಗೆ ಮರುಬಳಕೆ
ಈ ಶೃಂಗ ಸಭೆಯಲ್ಲಿ ಪ್ರಮುಖವಾಗಿ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ಚಿಕಿತ್ಸೆ, ಮೊಡವೆಗಳ ನಿರ್ಮೂಲನೆ, ದೇಹದಲ್ಲಿ ಅನಗತ್ಯವಾಗಿ ಬೆಳೆಯುವ ಕೂದಲನ್ನು ತೊಡೆದು ಹಾಕುವುದು, ಚರ್ಮ ದ ನವ ಯೌವನ ಪಡೆಯುವಿಕೆ, ಟ್ಯಾಟು ನಿರ್ಮೂಲನೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಅಧ್ಯಕ್ಷರಾದ ಪ್ರೊ ಅರುಣ ಸಿ. ಇನಾಮದಾರ, ಸಂಘಟನಾ ಸಹ ಅಧ್ಯಕ್ಷರಾದ ಡಾ. ಟಿ. ಸಲೀಂ, ಡಾ. ಸಂಜೀವ್ ಜೆ. ಔರಂಗಾಬಾದ್ಕರ್, ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಸ್ ಚಂದ್ರಶೇಖರ್, ಡಾ ರಾಜೇಂದ್ರ ಎಸ್ ಸಿ,ಡಾ. ಶೆಹನಾಜ್ ಆರ್ಸಿವಾಲಾ, ಡಾ. ಸ್ವಪ್ನಿಲ್ ಶಾ, ಡಾ. ಸಿ. ಮಧುರ ಡಾ ಚೈತ್ರಾ ಶೆಣೈ, ಡಾ ಮಂಜುಳ, ಡಾ ಗಿರೀಶ್ ಎಂ ಎಸ್ ಮತ್ತಿತರರು ಉಪಸ್ಥಿತ ರಿದ್ದರು.