Bangalore University: ಬೆಂಗಳೂರು ವಿವಿಯಲ್ಲಿ ಫೆ. 3ರಿಂದ ಮೀಡಿಯಾ ಕ್ರಾಫ್ಟ್ ಕಾರ್ಯಾಗಾರ
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಫೆ. 3ರಿಂದ 5 ದಿನಗಳ ಕಾಲ ಮೀಡಿಯಾ ಕ್ರಾಫ್ಟ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಸೋಮವಾರ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದು, ಹಿರಿಯ ಪತ್ರಕರ್ತೆ ಶಾಂತಲಾ ಧರ್ಮರಾಜ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರಿಗೆ ಉಚಿತ ನೋಂದಣಿ ಇದ್ದು, ಪ್ರಮಾಣಪತ್ರ ವಿತರಿಸಲಾಗುತ್ತದೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ(Bangalore University) ವಿದ್ಯುನ್ಮಾನ ಮಾಧ್ಯಮ, ಫೀಲ್ಮ್ ಮೇಕಿಂಗ್ ಮತ್ತು ಆ್ಯನಿಮೇಷನ್ ವಿಭಾಗದಲ್ಲಿ ಸೋಮವಾರದಿಂದ (ಫೆ. 3) 5 ದಿನಗಳ ಮೀಡಿಯಾ ಕ್ರಾಫ್ಟ್ (Media Craft) ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಸೋಮವಾರ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದು, ಹಿರಿಯ ಪತ್ರಕರ್ತೆ ಶಾಂತಲಾ ಧರ್ಮರಾಜ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಯಕರ್ ಎಸ್.ಎಂ. ಅವರು ಮುಖ್ಯ ಅತಿಥಿಯಾಗಿ, ಪಿಎಂ ಉಷಾ ಸಂಯೋಜಕರಾದ ಪ್ರೊ.ಹನುಮಂತಪ್ಪ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕರಾದ ಡಾ. ರಾಜೇಶ್ವರಿ ಆರ್. ಅಧ್ಯಕ್ಷತೆ ವಹಿಸಲಿದ್ದು, ಸಹ ಪ್ರಾಧ್ಯಾಪಕರಾದ ಡಾ. ವಾಹಿನಿ, ಡಾ.ಟಿ. ಶ್ರೀಪತಿ, ಸಿಂಡಿಕೇಟ್ ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಫೆ. 3ರಂದು ಮಧ್ಯಾಹ್ನ 2 ಗಂಟೆಗೆ ರಿಪಬ್ಲಿಕ್ ಕನ್ನಡ ವಾಹಿನಿಯ ನಿರೂಪಕಿ ಸ್ಮಿತಾ ರಂಗನಾಥ್ ಅವರು ‘ಆ್ಯಂಕರಿಂಗ್ ಟೆಕ್ನಿಕ್ಸ್’ ಕುರಿತು ವಿಷಯ ಮಂಡಿಸಲಿದ್ದಾರೆ. ಫೆ. 4ರಂದು ವಿಜಯ ಕರ್ನಾಟಕ ದಿನಪತ್ರಿಕೆ ಮುಖ್ಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅವರು ‘ಜರ್ನಿ ಇನ್ ಟು ಡಿಜಿಟಲ್ ಮೀಡಿಯಾ’ ಕುರಿತು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶಿಕ್ಷಣ ತಜ್ಞೆ ಶಿಲ್ಪಾ ವಿ. ಅವರು ‘ಆ್ಯನಿಮೇಷನ್ ಇಂಡಸ್ಟ್ರಿ’ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಫೆ. 5ರಂದು ಬೆಳಗ್ಗೆ 10.30ಕ್ಕೆ ಕಲಾ ನಿರ್ದೇಶಕ ನವೀನ ಕುಶವಂತ್ ಅವರು ‘ಆರ್ಟ್ ಡೈರೆಕ್ಷನ್’ ಕುರಿತು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಲಾವಿದೆ ಮೆದಿನಿ ಕೆಳಮನೆ ಅವರು ‘ಆ್ಯಕ್ಟಿಂಗ್ ಟು ಕ್ಯಾಮೆರಾ’ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಫೆ. 6ರಂದು 3ಡಿ ಆ್ಯನಿಮೇಟರ್ ಪ್ರಮೋದ್ ಚಿನ್ನಪ್ಲ ಅವರು ‘ಆರ್ಟ್ 3ಡಿ ಆ್ಯನಿಮೇಷನ್’ ಕುರಿತು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸುವರ್ಣ ನ್ಯೂಸ್ ವಾಹಿನಿಯ ಔಟ್‌ಪುಟ್ ಸಂಪಾದಕರಾದ ಶೋಭಾ ಮಳವಳ್ಳಿ ಅವರು ‘ಟಿವಿ ನ್ಯೂಸ್ ಪ್ರೊಡಕ್ಷನ್ ಟ್ರೆಂಡ್ಸ್’ ಕುರಿತು ವಿಷಯ ಮಂಡಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Gruha Arogya scheme: ಮಾರ್ಚ್‌ನಿಂದ ರಾಜ್ಯಾದ್ಯಂತ ʼಗೃಹ ಆರೋಗ್ಯ ಯೋಜನೆʼ ಜಾರಿ
ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರಿಗೆ ಉಚಿತ ನೋಂದಣಿ ಇದ್ದು, ಪ್ರಮಾಣಪತ್ರ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.