Raichur News: ನಿವೇಶನ ವಿವಾದ: ದಯಾಮರಣಕ್ಕೆ ಆಗ್ರಹಿಸಿ ಡಿಸಿ ನಿವಾಸದ ಮುಂದೆ ಪ್ರತಿಭಟನೆ
Raichur News: ನಿವೇಶನದಲ್ಲಿ ಕಸ ಹಾಕಿ ಒತ್ತುವರಿ ಮಾಡಿಕೊಳ್ಳಲು ಮುಂದಾದ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳದೇ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ದೌರ್ಜನ್ಯಕ್ಕೊಳಗಾದ ಕುಟುಂಬವೊಂದು ಗುರುವಾರ ರಾತ್ರಿ ದಯಾಮರಣಕ್ಕಾಗಿ ರಾಯಚೂರು ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಧರಣಿ ನಡೆಸಿದೆ. ಈ ಕುರಿತ ವಿವರ ಇಲ್ಲಿದೆ.


ರಾಯಚೂರು: ನಿವೇಶನದಲ್ಲಿ ಕಸ ಹಾಕಿ ಒತ್ತುವರಿ ಮಾಡಿಕೊಳ್ಳಲು ಮುಂದಾದ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳದೇ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ದೌರ್ಜನ್ಯಕ್ಕೊಳಗಾದ ಕುಟುಂಬ ಗುರುವಾರ ರಾತ್ರಿ ದಯಾಮರಣಕ್ಕಾಗಿ ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಧರಣಿ ನಡೆಸಿದೆ. ರಾಯಚೂರು (Raichur News) ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದ ಹನುಮಂತ ಎಂಬವರಿಗೆ ಸೇರಿದ ನಿವೇಶನದಲ್ಲಿ ಮಾಜಿ ಶಾಸಕನ ಬೆಂಬಲಿಗ, ಬಿಜೆಪಿ ಮುಖಂಡ ದುರ್ಗಾಪ್ರಸಾದ್, ದಬ್ಬಾಳಿಕೆ ಮಾಡಿ ನಿವೇಶನದಲ್ಲಿ ಕಸ ಹಾಕಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರಿಂದ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಹನುಮಂತ ತೋರಣದಿನ್ನಿ ಅವರು ಕುಟುಂಬ ಸಮೇತ ಧರಣಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Deadly Accident: ಭೀಕರ ರಸ್ತೆ ಅಪಘಾತ; ಕುಂಭಮೇಳಕ್ಕೆ ತೆರಳಿದ್ದ ಆರು ಜನ ಕನ್ನಡಿಗರ ದುರ್ಮರಣ
ನಮ್ಮ ಹೆಸರಿನಲ್ಲಿ ದಾಖಲೆಗಳು ಇದ್ದರೂ ಪೊಲೀಸರು ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಹನುಮಂತ ಕುಟುಂಬ ಸಮೇತ ದಯಾಮರಣಕ್ಕಾಗಿ ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಧರಣಿ ನಡೆಸಿದೆ.