ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲು! ಕಾರಣವೇನು ಗೊತ್ತೆ?
ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಭಾರತ ತಂಡದ ವೇಗದ ಬೌಲರ್ ಯಶ್ ದಯಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ. ಗಾಯಾಬಾದ್‌ನ ಮಹಿಳೆಯೊಬ್ಬರು ಆರ್‌ಸಿಬಿ ವೇಗಿಯ ವಿರುದ್ದ ಹಲವು ದಿನಗಳ ಹಿಂದೆ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನವದೆಹಲಿ: ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಭಾರತ ತಂಡದ ವೇಗದ ಬೌಲರ್ ಯಶ್ ದಯಾಳ್ (Yash Dayal) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ಹಲವು ದಿನಗಳ ಹಿಂದೆ ಗಾಝಿಯಾಬಾದ್‌ನ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 69ರ ಅಡಿಯಲ್ಲಿ ಆರ್‌ಸಿಬಿ ವೇಗಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 69 ರ ಅಡಿಯಲ್ಲಿ ಇಂದಿರಾಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿಕಂಡು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ಯಶ್ ದಯಾಳ್ ಅವರು ತಮ್ಮ ಜೊತೆ ಐದು ವರ್ಷಗಳ ಕಾಲ ರಿಲೇಷನ್‌ಷಿಪ್‌ನಲ್ಲಿದ್ದರು ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದರು. ಅಲ್ಲದೆ ಈ ಅವಧಿಯಲ್ಲಿ ಅವರು ಮದುವೆಯಾಗುವುದಾಗಿ ನಂಬಿಸಿ ತಮ್ಮ ಜೊತೆ ದೈಹಿಕ ಹಾಗೂ ಮಾನಸಿನ ಸಂಬಂಧವನ್ನು ಹೊಂದಿದ್ದರು ಹಾಗೂ ನನ್ನಿಂದ ಹಣಕಾಸು ನೆರವು ಕೂಡ ಪಡೆದುಕೊಂಡಿದ್ದರು. ನನ್ನನ್ನು ಅವರು ತಮ್ಮ ಕುಟುಂಬಕ್ಕೆ ಕೂಡ ಪರಿಚಯ ಮಾಡಿಸಿದ್ದರು ಹಾಗೂ ಅವರು ಕುಟುಂಬ ನಮ್ಮನ್ನು ಮದುವೆಯಾಗಿರುವ ಜೋಡಿಯ ರೀತಿ ನೋಡುತ್ತಿದ್ದರು. ಇದರಿಂದ ತನ್ನ ನಂಬಿಕೆ ಹೆಚ್ಚಿಸಿತ್ತು ಎಂದು ಆಕೆ ತಿಳಿಸಿದ್ದಾಳೆ. ಆದರೆ, ತದ ನಂತರ ಅವರ (ಯಶ್ ದಯಾಳ್) ಉದ್ದೇಶ ಏನೆಂದು ಅರ್ಥವಾಗಿತ್ತು. ಇದನ್ನು ಪ್ರಶ್ನಿಸಿದ ಬಳಿಕ ಅವರು ನನ್ನ ಮೇಕೆ ದೌರ್ಜನ್ಯವೆಸಗಿದ್ದಾನೆಂದು ಆಕೆ ಆರೋಪ ಎಸಗಿದ್ದಾರೆ.
ʻಆರ್‌ಸಿಬಿ ಪರ ವಿರಾಟ್ ಕೊಹ್ಲಿಗಾಗಿ ಮತ್ತೊಂದು ಐಪಿಎಲ್ ಕಪ್ ಗೆಲ್ಲುತ್ತೇವೆʼ: ಯಶ್ ದಯಾಳ್!
ದಯಾಳ್ ತಮ್ಮ ಸಂಬಂಧದ ಸಮಯದಲ್ಲಿ ತನ್ನಿಂದ ಹಣ ಪಡೆದಿದ್ದರು ಮತ್ತು ಈ ಹಿಂದೆ ಇತರ ಮಹಿಳೆಯರೊಂದಿಗೆ ಇದೇ ರೀತಿ ವರ್ತಿಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಆರೋಪಗಳನ್ನು ಬೆಂಬಲಿಸಲು ತಮ್ಮ ಬಳಿ ಚಾಟ್ ರೆಕಾರ್ಡ್‌ಗಳು, ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕಾಲ್ ರೆಕಾರ್ಡಿಂಗ್‌ಗಳು ಮತ್ತು ಛಾಯಾಚಿತ್ರಗಳಿವೆ ಎಂದು ಅವರು ಹೇಳಿದ್ದಾರೆ.
ಯುವತಿಯ ಆರೋಪದ ಬಗ್ಗೆ ಇನ್ನು ಯಶ್ ದಯಾಳ್ ಆಗಲಿ ಅಥವಾ ಅವರ ಕುಟುಂಬವಾಗಲಿ ಪ್ರತಿಕ್ರಿಯೆ ನೀಡಿಲ್ಲ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆರ್‌ಸಿಬಿ ತಂಡ ಚೊಚ್ಚಲ ಕಪ್ ಗೆಲುವಿನಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ಆರ್‌ಸಿಬಿ ಪರ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಆರ್‌ಸಿಬಿ ಗೆಲುವಿಗೆ ನೆರವು ನೀಡಿದ್ದರು.